ಚರ್ಚ್‌ಗಳಲ್ಲಿ ಸರಳ ಆಚರಣೆ, ಮನೆಗಳಲ್ಲಿ ಸಂಭ್ರಮ
Team Udayavani, Dec 25, 2020, 12:31 PM IST
ಯುಬಿಎಂಸಿ ಚರ್ಚ್‌ನಲ್ಲಿ ನಿರ್ಮಿಸಿದ ಗೋದಲಿ.
ಉಡುಪಿ, ಡಿ. 24: ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಜನನಪೂರ್ವ ಹಾಗೂ ಜನ್ಮದಿನದ ಸಡಗರವನ್ನು ಕೋವಿಡ್ -19ರ ನಿಯಮಾವಳಿಯೊಂದಿಗೆ ಧಾರ್ಮಿಕ ವಿಧಿಗಳಿಗೆ ಚ್ಯುತಿ ಬಾರದಂತೆ ಸರಳವಾಗಿ ಆಚರಿಸಲಾಯಿತು.
ಕಲ್ಯಾಣಪುರ ಕೆಥೆಡ್ರಲ್, ಉಡುಪಿ ಶೋಕಮಾತಾ ಇಗರ್ಜಿ, ಪೆರಂಪಳ್ಳಿ, ಮಣಿಪಾಲ, ಯುಬಿಎಂಸಿ ಮೊದ ಲಾದ ಚರ್ಚ್‌ಗಳು, ಕ್ರಿಶ್ಚಿಯನ್ ಸಮುದಾ ಯಕ್ಕೆ ಸೇರಿದ ಶಿಕ್ಷಣ ಸಂಸ್ಥೆ, ಮಳಿಗೆ, ಮನೆಗಳನ್ನು ದೀಪಗಳಿಂದ ಅಲಂಕರಿಸಲಾಗಿದೆ. ವಿವಿಧ ಚರ್ಚ್ ಗಳಲ್ಲಿ ಗುರುವಾರ ಸಂಜೆ ಕ್ರಿಸ್ಮಸ್ ಕ್ಯಾರಲ್ಸ್, ಬಳಿಕ ಬಲಿಪೂಜೆ ನಡೆಯಿತು. ಅನಂತರ ಜನರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಸೀಮಿತ ಜನರಿಗೆ ಅವಕಾಶ :
ಬಲಿ ಪೂಜೆಯಲ್ಲಿ ಚರ್ಚ್‌ಗಳಲ್ಲಿ ಕೋವಿಡ್ ನಿಯಮಾವಳಿಯನ್ನು ಅನುಸರಿಸಲಾಯಿತು. ಚರ್ಚ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೀಮಿತ ಜನರಿಗೆ ಚರ್ಚ್ ಒಳಗೆ, ಉಳಿದವರಿಗೆ ಚರ್ಚ್‌ನ ಆವರಣದಲ್ಲಿ ಎಲ್‌ಇಡಿ ಟಿವಿ ಮೂಲಕ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು :
ಈ ಹಿಂದೆ ಕ್ರಿಸ್ಮಸ್ ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚರ್ಚ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಚರಿಸಲಾಗುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಈ ಬಾರಿ ಹಬ್ಬದ ಸಡಗರ ಕೇವಲ ಮನೆಗಳಲ್ಲಿ ಸೀಮಿತ ಗೊಂಡಿದೆ.
ಕ್ರಿಸ್ಮಸ್ ಟ್ರೀ, ಅಲಂಕಾರ :
ಕ್ರೈಸ್ತ ಸಮುದಾಯವರ ಮನೆಗಳಲ್ಲಿ ಕ್ರಿಸ್ಮಸ್ ಟ್ರೀ, ಬಣ್ಣದ ಆಲಂಕಾರಿಕ ವಸ್ತುಗಳ ಮೂಲಕ ಸಿಂಗರಿಸಲಾಗಿದೆ. ಡಿ.1ರಂದು ಕೆಲವು ಮನೆಗಳಲ್ಲಿ ನಕ್ಷತ್ರ ತೂಗುದೀಪ ಹಾಕಲಾಗಿದೆ. ಇನ್ನು ಕೆಲವರು ಮನೆ ಆವರಣ, ಗಿಡ, ಮರಗಳಿಗೆ ವಿವಿಧ ರೀತಿಯ ದೀಪಾಲಂಕಾರ ಮಾಡಿದ್ದಾರೆ.
ವಿವಿಧ ತಿಂಡಿ ತಿನಿಸು ತಯಾರಿ :
ಕ್ರಿಸ್ಮಸ್ ಹಬ್ಬದ ಸಂಭ್ರಮ ಪ್ರಾರ್ಥನೆ, ಬೋಧನೆಗೆ ಮಾತ್ರ ಸೀಮಿತವಲ್ಲ. ತಿಂಡಿ ತಿನಿಸು ತಯಾರಿಯೂ ಭರ್ಜರಿ ಆಗಿರುತ್ತದೆ. ಹಲವಾರು ಮನೆಗಳಲ್ಲಿ ಕೇಕ್, ಕರ್ಜಿಕಾಯಿ, ಕೋಡು ಬಳೆ, ಚಕ್ಕುಲಿ, ಜಾಮೂನು, ರವೆ ಉಂಡೆ, ಕರಿದ ಅವಲಕ್ಕಿ, ರೋಸ್ ಕುಕ್‌ಮ, ನಿಪ್ಪಟ್ಟು, ಕ್ಯಾರೆಟ್ ಹಲ್ವಾ, ಡೋನಟ್ಸ್, ಅಕ್ಕಿ ಮಿಠಾಯಿ ತಯಾರಿಸಿದ್ದು, ಅವು ಗಳನ್ನು ಮನೆಗೆ ಬಂದ ಬಂಧು-ಬಳಗ, ನೆರೆಹೊರೆಯವರಿಗೆ ಹಂಚಿ ಸಂಭ್ರಮಿ ಸಲು ಸಿದ್ಧತೆ ನಡೆದಿದೆ.
ಬಲಿ ಪೂಜೆ- ಸಂದೇಶ :
ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ನೆರವೇರಿಸಿ ಹಬ್ಬದ ಸಂದೇಶವನ್ನು ನೀಡಿದರು. ಉಡುಪಿ ಶೋಕಮಾತಾ ಚರ್ಚ್‌ನ ಧರ್ಮಗುರು ಫಾ| ಚಾರ್ಲ್ಸ್ ಮಿನೇಜಸ್, ಮಿಷನ್ ಕಾಂಪೌಂಡ್ ಬಳಿಯ ಬಾಸೆಲ್ ಮಿಷನ್ ಚರ್ಚ್‌ನಲ್ಲಿ ಫಾ| ಸಂತೋಷ್, ಫಾ| ಸ್ಟೀಫನ್ ಬಂಡಿ, ಫಾ| ಮಂಜುನಾಥ್ ಅವರು ಬಲಿ ಪೂಜೆ ಹಬ್ಬದ ಸಂದೇಶವನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.