“ಸೀತಾರಾಮ ಶೆಟ್ಟಿ ಸ್ಮರಣ ಶಕ್ತಿ ಯುವ ಜನರಿಗೆ ಸ್ಫೂರ್ತಿ’
Team Udayavani, Apr 11, 2019, 6:30 AM IST
ಉಡುಪಿ: ಇಂದಿನ ಪೋಷಕರು ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸುವಲ್ಲಿ ಪ್ರತಿನಿತ್ಯ ಸಾವಿರಾರೂ ರೂ. ಖರ್ಚು ಮಾಡಿ ವಿಶೇಷ ತರಬೇತಿ ಶಾಲೆಗಳಿಗೆ ಸೇರಿಸುತ್ತಾರೆ.
ಆದರೆ ಇಲ್ಲೊಬ್ಬರು 64 ವರ್ಷದ ವ್ಯಕ್ತಿ ಯಾವುದೇ ತರಬೇತಿ ಶಾಲೆಗೆ ತೆರಳಿದವರಲ್ಲ. ಆದರೂ ಯಾವುದೇ ಲೆಕ್ಕದ ಪರಿಕರ ಬಳಸದೇ ನಾಲ್ಕು ಅಂಕೆ ಸಂಖ್ಯೆಯನ್ನು ಕ್ಷಣಾರ್ಧದಲ್ಲಿ ಗುಣಿಸುತ್ತಾರೆ. ಒಂದು ಸಾವಿರಕ್ಕೂ ಅಧಿಕ ದೂರವಾಣಿ ಸಂಖ್ಯೆಯನ್ನು ಕೇವಲ ತನ್ನ ನೆನಪಿನ ಶಕ್ತಿಯಿಂದ ಹೇಳಬಲ್ಲರು.
ಕುಂದಾಪುರ ತಾಲೂಕಿನ ಕಟ್‌ಬೇಲೂ¤ರು ಗ್ರಾಮ ನಿವಾಸಿ ಸೀತಾರಾಮ ಶೆಟ್ಟಿ (64) ಅವರಿಗೆ ಪುಸ್ತಕದಲ್ಲಿ ನಂಬರ್ ಹಾಗೂ ಲೆಕ್ಕ ಬರೆದಿಡುವ ಹವ್ಯಾಸವಿಲ್ಲ. ಬದಲಾಗಿ ಒಮ್ಮೆ ನೋಡಿದ ನಂಬರ್ ಹಾಗೇ ನೆನಪಿನಲ್ಲಿ ಅಚ್ಚಳಿಯದಂತೆ ಉಳಿದಿರುತ್ತದೆ. ಇವರಿಗೆ ಅವರ ಮೆದುಳು ಅವರ ಪಾಲಿನ ಮಾಸದ ಪುಸ್ತಕವಾಗಿದೆ.
ಸೀತಾರಾಮ ಶೆಟ್ಟಿ ಅವರು ಕುಂದಾಪುರ ಹಾಗೂ ಉಡುಪಿಯಲ್ಲಿ ಫುಡ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ಊರಿನ ಹಾಗೂ ಪರಿಚಯಸ್ಥರ ದೂರವಾಣಿ ಸಂಖ್ಯೆಯನ್ನು ಒಮ್ಮೆ ನೋಡಿ ದರೆ, ಇನ್ನೊಮ್ಮೆ ಯಾವುದೇ ತಪ್ಪಿಲ್ಲದೇ ಹೇಳುತ್ತಾರೆ. 30 ವರ್ಷದ ಹಿಂದಿನ ಹಾಗೂ ಮುಂದಿನ ತಾರೀಕು ನೀಡಿದ್ದರೆ ಕ್ಷಣಾರ್ಧದಲ್ಲಿ ಯಾವ ದಿನ ಎನ್ನುವುದನ್ನು ನಿಖರವಾಗಿ ಹೇಳುವ ಸ್ಮರಣ ಶಕ್ತಿ ಹೊಂದಿದ್ದಾರೆ.
ಸೀತಾರಾಮ ಶೆಟ್ಟಿ ಅವರು ಪ್ರೌಢಶಾಲೆ ಶಿಕ್ಷಣ ಪಡೆಯುವ ಸಂದರ್ಭ ಅವರಿಗೆ ದೂರವಾಣಿ ಸಂಖ್ಯೆಗಳು ನೆನಪಿಗೆ ಬಂದಂತೆ ಭಾಸವಾಗಿತ್ತು. ಅಂದಿನ ಕಾಲ
ದಲ್ಲಿ ದೂರವಾಣಿ ಸಂಖ್ಯೆಯನ್ನು ಪುಸ್ತಕದಲ್ಲಿ ಬರೆದಿಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಕ್ರಮೇಣ ಅಂಕೆಗಳನ್ನು ನೋಡಿದ ತತ್‌ಕ್ಷಣವೇ ನೆನಪಿನಲ್ಲಿಟ್ಟು ಕೊಳ್ಳುವ ಸ್ಮರಣ ಶಕ್ತಿಯನ್ನು ರೂಪಿಸಿ ಕೊಂಡರು.
ಯಾವುದೇ ಅಧಿಕಾರಿಗಳ ಸಭೆಗಳಿಗೆ ತೆರಳಿದರೂ ಮಾಹಿತಿ ಬರೆದಿಟ್ಟು ಕೊಳ್ಳುತ್ತಿರಲಿಲ್ಲ. ಸ್ಮರಣ ಶಕ್ತಿ ಮೂಲಕ ನೆನಪಿಟ್ಟುಕೊಳ್ಳುತ್ತಿದ್ದರು. ಪತ್ರಿಕೆಗಳನ್ನು ಓದುವ ಹವ್ಯಾಸ ಹೊಂದಿದ್ದಾರೆ. ಇವರಲ್ಲಿ ಇನ್ನೊಬ್ಬರು ಪತ್ರಿಕೆಯಲ್ಲಿ ಬಂದಿರುವ ಸುದ್ದಿ ಬಗ್ಗೆ ಕೇಳಿದರೆ ಸುದ್ದಿ ಪತ್ರಿಕೆ ಪುಟ ಸಂಖ್ಯೆಯನ್ನು ಸಹ ಹೇಳುತ್ತಾರೆ.
ಯಾವುದೇ ತಯಾರಿ ಇಲ್ಲ
ಯಾವ ಇಲಾಖೆಯ ದೂರವಾಣಿ ಸಂಖ್ಯೆ ಯಾವುದು? ಎನ್ನುವುದನ್ನು ಪಟ ಪಟನೆ ಹೇಳುತ್ತೇನೆ. ಇಂದು ನಿವೃತ್ತಿಯಾಗಿದೆ ಆದರೂ ನನ್ನ ಅವಧಿ ಕಚೇರಿಯ ಕಡತಗಳ ಬಗ್ಗೆ ಇಂದಿಗೂ ಮಾಹಿತಿಯಿದೆ. ಇದಕ್ಕಾಗಿ ಯಾವುದೇ ರೀತಿಯಾದ ತಯಾರಿ ಏನೂ ಇಲ್ಲ.
-ಸೀತಾರಾಮ ಶೆಟ್ಟಿ, ನಿವೃತ್ತ ಫುಡ್ ಇನ್‌ಸ್ಪೆಕ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.