ವಾಹನ ಸವಾರರಿಗೆ ಕಂಟಕವಾದ ಕಾಂಕ್ರೀಟ್ ಸ್ಲ್ಯಾಬ್
ಲಕ್ಷ್ಮೀಂದ್ರನಗರ-ಪೆರಂಪಳ್ಳಿ ರಸ್ತೆಯ ಸಗ್ರಿ ಶಾಲೆ ಕ್ರಾಸ್‌ನಲ್ಲಿರುವ ಸ್ಲಾéಬ್
Team Udayavani, Jan 21, 2020, 5:19 AM IST
ಉಡುಪಿ: ಮಣಿಪಾಲ ನಗರದಿಂದ ಲಕ್ಷ್ಮೀಂದ್ರನಗರ- ಪೆರಂಪಳ್ಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಗ್ರಿ ಶಾಲೆ ಕ್ರಾಸ್ ಎಂದರೆ ಸವಾರರಿಗೆ ಅಪಘಾತ ಭಯ!
ತುಸು ಎಚ್ಚರ ತಪ್ಪಿದರೂ
ಜೀವ ಹಾನಿ ಖಚಿತ
ನಗರಾಡಳಿತದ ಕುಡಿಯುವ ನೀರಿನ ಗೇಟ್‌ವಾಲ್‌ನ ಇರುವ ಸ್ಲ್ಯಾಬ್ ರಸ್ತೆಗೆ ಆವರಿಸಿದ್ದು ಚಾಲಕರು ತುಸು ಎಚ್ಚರ ತಪ್ಪಿದರೂ ಜೀವ ಹಾನಿ ಖಚಿತ. ಪೆರಂಪಳ್ಳಿ, ಲಕ್ಷ್ಮೀಂದ್ರ ಭಾಗಕ್ಕೆ ಕುಡಿಯುವ ನೀರು ಸರಬರಾಜಿಗೆ ಪೈಪುಗಳನ್ನು ಹಾಕಲಾಗಿತ್ತು. ಸಗ್ರಿ ಶಾಲೆ ಬಳಿ ನೀರಿನ ವಾಲ್Ì ನಿರ್ಮಿಸಲಾಗಿತ್ತು. ಅದರ ಮೇಲೆ ಸಿಮೆಂಟ್ ಕಾಂಕ್ರಿಟ್ ಹಾಕಿದ ಬಳಿಕ ಅದನ್ನು ಸರಿಯಾಗಿ ಮುಚ್ಚದೆ ಅರ್ಧಕ್ಕೆ ಬಿಡಲಾಗಿದೆ.
ಸ್ಲ್ಯಾಬ್ಗ ವಾಹನಗಳ ಡಿಕ್ಕಿ
ವಾಲ್Ì ಇರುವ ಸ್ಲ್ಯಾಬ್ ರಸ್ತೆಗೆ ತಾಗಿಕೊಂಡಿದ್ದು, ವಾಹನ ಟಯರ್ ಸ್ಲ್ಯಾಬ್ಗ ಬಡಿದು ಟಯರ್ ತೂತಾಗುವುದು, ಒಡೆಯುವುದು ನಡೆಯುತ್ತದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 8 ವಾಹನ ಅಪಘಾತ ಪ್ರಕರಣ ಈ ಸ್ಥಳದಲ್ಲಿ ಸಂಭವಿಸಿದೆ. ಇತ್ತೀಚೆಗೆ ಕಾರಿನ ಟಯರ್ ಇಲ್ಲಿ ಸ್ಫೋಟಗೊಂಡಿತ್ತು ಎನ್ನುತ್ತಾರೆ ಸ್ಥಳೀಯರಾದ ಸತೀಶ್ ಅವರು.
ನಿರಂತರ ಪ್ರಕ್ರಿಯೆಯಿಂದ ತೊಂದರೆ
ಸ್ಲ್ಯಾಬ್ ರಸ್ತೆ ಕೆಳ ಭಾಗದಲ್ಲಿ 7 ಅಡಿ ಆಳಕ್ಕೆ ನೀರಿನ ವಾಲ್Ì ಇದೆ. ಇದರಲ್ಲಿ ನೀರು ಸೋರಿಕೆಯಾಗುತ್ತಿರುತ್ತದೆ. ಅವಾಗೆಲ್ಲ ಮುಚ್ಚಳ ತೆಗೆದು, ದುರಸ್ತಿಗೊಳಿಸುವ ಕೆಲಸ ನಡೆಯುತ್ತದೆ. ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಸ್ಲ್ಯಾಬ್ ಎತ್ತರ ಹೆಚ್ಚಲು ಕಾರಣವಾಗಿದೆ. ಕೆಲವೊಮ್ಮೆ ವಾಹನ ಇದರ ಮೇಲೆ ಸಂಚರಿಸಿ ಸ್ಲಾéಬ್ 9 ಇಂಚು ಮೇಲಕ್ಕೆ ಬಂದಿದೆ.
ದೂರು ನೀಡಿದರೂ ಕ್ರಮವಿಲ್ಲ
ನಗರ ಸಭೆ ಸಿಬಂದಿ ಕಾಮಗಾರಿ ನಡೆಸಿದ ಬಳಿಕ ಮುಚ್ಚುವ ಕೆಲಸ ಮಾಡಿಲ್ಲ. ಸ್ಥಳೀಯರು ಈ ಬಗ್ಗೆ ದೂರು ನೀಡಿ ತಿಂಗಳು ಕಳೆದರೂ ಯಾವುದೇ ಸ್ಪಂದನೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಹೆಚ್ಚಳ
ಪೈಪು ಅಳವಡಿಸುವ ವೇಳೆ ವಾಹನ ಸಂಚಾರ ಕಡಿಮೆಯಿತ್ತು. ಈಗ ದೊಡ್ಡ ವಾಹನಗಳು ಸಂಚರಿಸಿ ಸ್ಲ್ಯಾಬ್ ಮತ್ತಷ್ಟೂ ಎತ್ತರಕ್ಕೆ ಬಂದಿದೆ.
-ಯೋಗೇಂದ್ರ ನಾಯಕ್, ಸ್ಥಳೀಯರು
ಸಮಸ್ಯೆ ನಿವಾರಣೆಗೆ ಪ್ರಯತ್ನ
ಪೈಪ್ ಅಳವಡಿಸುವ ವೇಳೆ ಸ್ಲ್ಯಾಬ್ ರಸ್ತೆ ಬದಿ ಮಾಡಲಾಗಿತ್ತು. ರಸ್ತೆ ಅಭಿವೃದ್ಧಿಯಾದ ಬಳಿಕ ಸಮಸ್ಯೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಎತ್ತರ ತಗ್ಗಿಸುವ ಪ್ರಯತ್ನ ಮಾಡಿದರೂ ಸಮಸ್ಯೆ ನಿವಾರಣೆಯಾಗಿಲ್ಲ.ಅಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕೆ ಯತ್ನಿಸುತ್ತೇನೆ.
-ಭಾರತಿಪ್ರಕಾಶ್,
ನಗರ ಸಭೆ ವಾರ್ಡ್ ಸದಸ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.