ವತ್ತಿನೆಣೆ ಗುಡ್ಡಕುಸಿತ ತಡೆಗೆ ‘ಸ್ಲೋಪ್ ಪ್ರೊಟೆಕ್ಷನ್ ವಾಲ್’
Team Udayavani, Apr 20, 2018, 8:45 AM IST
ಬೈಂದೂರು: ಕಳೆದ ವರ್ಷ ಮಳೆಗಾಲದಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡಿದ ವತ್ತಿನೆಣೆ ಗುಡ್ಡ ಕುಸಿತ ತಡೆಯಲು ಶಾಶ್ವತ ಕಾಮಗಾರಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ಸ್ಲೋಪ್ ಪ್ರೊಟೆಕ್ಷನ್ ವಾಲ್ ಮಾಡಲಾಗುತ್ತಿದೆ.
ಅವೈಜ್ಞಾನಿಕ ಚಿಂತನೆಯಿಂದ ಸಮಸ್ಯೆ
ಕಳೆದೆರಡು ವರ್ಷಗಳಿಂದ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ಭೌಗೋಳಿಕ ಸೂಕ್ಷ್ಮಗಳನ್ನು ಅರಿಯದ ಪರಿಣಾಮ, ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿತ ಉಂಟಾಗಿತ್ತು. ಇದು ಮಳೆಗಾಲದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡಿತ್ತು. ನಾಲ್ಕೈದು ಬಾರಿ ಗುಡ್ಡ, ಬಂಡೆಗಳು ಕುಸಿದು ಮಂಗಳೂರು-ಗೋವಾ ಸಂಚಾರಕ್ಕೆ ತಡೆಯಾಗಿತ್ತು. ಇದರಿಂದ ಬೇರೆ ವ್ಯವಸ್ಥೆ ಕಲ್ಪಿಸಬೇಕಾಗಿತ್ತು.
ಸವಾಲು
ಗುಡ್ಡದಲ್ಲಿ ಜೇಡಿಮಣ್ಣು ಹಾಗೂ ನೀರಿನ ಒಳ ಹರಿವು ಅಧಿಕವಾಗಿರುವ ಕಾರಣ ಗುಡ್ಡ ಕುಸಿತವನ್ನು ನಿಯಂತ್ರಿಸುವುದೇ ಸವಾಲಾಗಿತ್ತು. ಜತೆಗೆ ಕಾಮಗಾರಿ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆಯಾದ ಪರಿಣಾಮ ಜಿಲ್ಲಾಡಳಿತ ಕಾಮಗಾರಿ ನಡೆಸುವ ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.
ಏನಿದು ಸ್ಲೋಪ್ ಪ್ರೊಟೆಕ್ಷನ್ ವಾಲ್?
ಕುಸಿಯುವ ಭಾಗದಲ್ಲಿ ಗುಡ್ಡವನ್ನು ಇಳಿಜಾರಾಗಿಸಿ ಕಬ್ಬಿಣದ ರಾಡ್ ಹಾಗೂ ಮೆಶ್ ಅಳವಡಿಸಲಾಗುತ್ತದೆ. ಇದಕ್ಕೆ 10 ಮಿ.ಮೀ. ಕಾಂಕ್ರೀಟ್ ಹಾಕ ಲಾಗುತ್ತದೆ. ಜತೆಗೆ ಗುಡ್ಡದ ಮೇಲೆ ಆಸ್ಟ್ರೇಲಿಯಾ ಮೂಲದ ಗಿಡಗಳನ್ನು (ಹುಲ್ಲು) ನೆಡಲಾಗುತ್ತದೆ. ಇದರ ಬೇರುಗಳು ಆಳಕ್ಕೆ ಹೋಗುವುದರಿಂದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ನೀರು ಸರಾಗವಾಗಿ ಹರಿಯುತ್ತದೆ.
ಶೀಘ್ರ ಕಾಮಗಾರಿ ಪೂರ್ಣ
ಈ ಮಳೆಗಾಲಕ್ಕೆ ಮುನ್ನ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಚರಂಡಿ ಹಾಗೂ ನೀರಿನ ಸರಾಗ ಹರಿವಿಗೆ ಪೈಪ್ ಗಳನ್ನು ಅಳವಡಿಸಲಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ.
– ಯೋಗೇಂದ್ರಪ್ಪ, ಐ.ಆರ್.ಬಿ. ಪ್ರೊಜೆಕ್ಟ್ ಮ್ಯಾನೇಜರ್
— ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.