ಅನುದಾನ ಮಂಜೂರಾದರೂ ಕಾಮಗಾರಿಗೆ “ಡೀಮ್ಡ್’ ತೊಡಕು
ಆಜ್ರಿ - ಬಡಬಾಳು - ಜಡ್ಡಿಮೂಲೆ ಮಣ್ಣಿನ ರಸ್ತೆ ,ಎರಡು ದಶಕಗಳಿಂದ ಈಡೇರದ ಬೇಡಿಕೆ
Team Udayavani, Jan 12, 2021, 11:07 PM IST
ಕುಂದಾಪುರ: ಆಜ್ರಿಯಿಂದ ಬಡಬಾಳುವಿಗೆ ಸಂಪರ್ಕ ಕಲ್ಪಿಸುವ 8 ಕಿ.ಮೀ. ದೂರದ ಮಣ್ಣಿನ ರಸ್ತೆಗೆ ಇನ್ನೂ ಡಾಮರು ಭಾಗ್ಯ ಮಾತ್ರ ಒದಗಿ ಬಂದಿಲ್ಲ. ಈ ರಸ್ತೆಯ 1.7 ಕಿ.ಮೀ. ವರೆಗಿನ ಕಾಂಕ್ರೀಟ್ ಕಾಮಗಾರಿಗೆ ವಾರಾಹಿ ಯೋಜನೆಯಡಿ ಅನುದಾನ ಮಂಜೂರಾಗಿದ್ದರೂ, ಮೀಸಲು ಅರಣ್ಯ ಪ್ರದೇಶದಲ್ಲಿ ಕೆಲವು ಭಾಗಗಳಿಗೆ ರಸ್ತೆ ಹಾದು ಹೋಗುವುದರಿಂದ ಕಾಮಗಾರಿ ಆರಂಭಕ್ಕೆ ತೊಡಕಾಗಿ ಪರಿಣಮಿಸಿದೆ.
ಈ ರಸ್ತೆಯನ್ನೇ ಅವಲಂಬಿಸಿಕೊಂಡಿರುವ ಈ ಭಾಗದ ಜನ ಧೂಳಿನಿಂದಾಗಿ ನಿತ್ಯ ಹೈರಾಣಾಗಿದ್ದಾರೆ. ಈ ಬಾರಿಯಾದರೂ ಈ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮುಂದಾಗಲಿ ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.
200 ಮೀ. ಮಾತ್ರ :
ಆಜ್ರಿಯಿಂದ ಜಡ್ಡಿನಮೂಲೆ, ಯಡೂರು, ಯಡ್ನಾಳಿಯಾಗಿ ಬಡಬಾಳುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಮಳೆಗಾಲದಲ್ಲಿ ಕೆಸರುಮಯ ರಸ್ತೆಯಾದರೆ, ಬೇಸಿಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಇಲ್ಲಿನ ಜನ ವರ್ಷವಿಡೀ ಸಂಕಷ್ಟಪಡುವಂತಾಗಿದೆ. 200 ಮೀಟರ್ ಡಾಮರು ಆಜ್ರಿಯಿಂದ ಆರಂಭಗೊಳ್ಳುವ ಈ ರಸ್ತೆಯ ಸುಮಾರು 200 ಮೀಟರ್ ಮಾತ್ರ ಡಾಮರು ಕಾಮ ಗಾರಿ ಆಗಿದೆ. ಬಾಕಿ ಉಳಿದ ಸುಮಾರು 8 ಕಿ.ಮೀ. ದೂರದ ರಸ್ತೆಗೆ ಇನ್ನೂ ಡಾಮರು ಆಗಿಲ್ಲ.
ದಶಕದಿಂದಲೂ ಬೇಡಿಕೆ :
ಈ ಮಣ್ಣಿನ ರಸ್ತೆಗೆ ಡಾಮರು ಆಗಬೇಕು ಎನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಬರೋಬ್ಬರಿ 20 ವರ್ಷಗಳಿಗೂ ಹಿಂದಿನಿಂದಲೂ ಈ ರಸ್ತೆಗೆ ಡಾಮರು ಕಾಮಗಾರಿ ಆಗಬೇಕು ಎನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ. ಈ ಮಾರ್ಗವಾಗಿ ಆಜ್ರಿಯಿಂದ ಬಡಬಾಳು ಮೂಲಕವಾಗಿ ಜನ್ಸಾಲೆ, ಅಂಪಾರು, ಕುಂದಾಪುರಕ್ಕೂ ಸಂಚರಿಸಲು ಹತ್ತಿರದ ಮಾರ್ಗವಾಗಿದೆ. ಡಾಮರು ಕಾಮಗಾರಿ ಯಾದರೆ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ. ಈ ಮಾರ್ಗದಲ್ಲಿ 3-4 ಶಾಲಾ ಬಸ್‌ಗಳು, ನೂರಾರು ಬೇರೆ ಬೇರೆ ವಾಹನಗಳು ಸಂಚರಿಸುತ್ತವೆ. ಸಾವಿರಾರು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ.
ಕಾಮಗಾರಿ ಆರಂಭಕ್ಕೆ ತೊಡಕು :
ಈ ಆಜ್ರಿ- ಬಡಬಾಳು- ಜಡ್ಡಿಮೂಲೆವರೆಗಿನ 8 ಕಿ.ಮೀ. ರಸ್ತೆಯ ಪೈಕಿ 1.7 ಕಿ.ಮೀ.ವರೆಗಿನ ರಸ್ತೆಯ ಕಾಂಕ್ರೀಟ್ ಕಾಮಗಾರಿ ಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮುತುವರ್ಜಿಯಲ್ಲಿ ವಾರಾಹಿ ಯೋಜನೆಯಡಿ ಅನುದಾನ ಮಂಜೂರಾಗಿದೆ. ಈ ರಸ್ತೆ ಜತೆಗೆ ಇನ್ನು 3 ಕಡೆಗಳ ರಸ್ತೆ ಅಭಿವದ್ಧಿಗೆ ಒಟ್ಟಾರೆ 4 ಕೋ.ರೂ. ಅನುದಾನ ಮಂಜೂರಾಗಿತ್ತು. ಆದರೆ ಈ 1.7 ಕಿ.ಮೀ. ಪ್ರದೇಶದಲ್ಲಿ ಕೆಲವೆಡೆ ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ಹಾದು ಹೋಗುವುದರಿಂದ ತೊಡಕಾಗಿದೆ.
1.7 ಕಿ.ಮೀ.ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು. ಮೀಸಲು ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಅಲ್ಲಿಂದ ಇನ್ನೂ ಅನುಮೋದನೆ ಸಿಗಬೇಕಿದೆ. ಅದುಸಿಗದಿದ್ದರೂ, ಆ ಪ್ರದೇಶ ಹೊರತುಪಡಿಸಿ ಉಳಿದೆಡೆ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡಲಾಗುವುದು. – ಕಿರಣ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ವಾರಾಹಿ ನೀರಾವರಿ ನಿಗಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.