ಸಾವಿನ ದವಡೆಯಲ್ಲಿದ್ದ ಬೀದಿ ನಾಯಿಯ ರಕ್ಷಣೆಗೆ ಹರಸಾಹಸ
Team Udayavani, May 3, 2018, 6:25 PM IST
ಕೋಟ: ರಸ್ತೆಯಲ್ಲಿ ಸಾಗುವ ನಾಯಿ, ದನ ಮುಂತಾದ ಪ್ರಾಣಿಗಳು ಅಪಘಾತಕ್ಕೊಳಗಾಗಿ ಸಾವಿನ ದವಡೆಗೆ ಸಿಲುಕಿ ಒದ್ದಾಡುತ್ತಿರುವುದನ್ನು ನೋಡಿಯೂ ನೋಡದವರಂತೆ ಹೋಗುವವರೇ ಹೆಚ್ಚು. ಆದರೆ ಕಾರಿನಲ್ಲಿ ಸಾಗುತ್ತಿದ್ದ ಕುಂದಾಪುರದ ಯುವಕರು ರಸ್ತೆಯಲ್ಲಿ ಸಾವಿನಂಚಿಗೆ ಸಿಲುಕಿ ನರಳಾಡುತ್ತಿದ್ದ ಬೀದಿನಾಯಿಯ ಜೀವ ಉಳಿಸಲು ಹರಸಾಹಸಪಟ್ಟ ಘಟನೆ ಸಾಲಿಗ್ರಾಮದಲ್ಲಿ ಬುಧವಾರ ನಡೆಯಿತು.
ಕಾರಿನಲ್ಲಿ ಉಡುಪಿಗೆ ತೆರಳುತ್ತಿದ್ದ ಕುಂದಾಪುರ ತಲ್ಲೂರು ಶೆಟ್ರಕಟ್ಟೆಯ ಉದ್ಯಮಿ ಮನೋಜ್ ಅವರಿಗೆ ರಸ್ತೆ ವಿಭಾಜಕದ ಮೇಲೆ ಬಿದ್ದು ನರಳಾಡುತ್ತಿದ್ದ ನಾಯಿ ಕಾಣಿಸಿದ್ದು, ಕಾರು ನಿಲ್ಲಿಸಿ ತನ್ನ ಸ್ನೇಹಿತ ಪ್ರಸಾದ್ ರೊಂದಿಗೆ ಸೇರಿ ಇದರ ಆರೈಕೆ ಮಾಡಿ ಆರೈಕೆ ಮಾಡಿದರು. ನಾಯಿಯನ್ನು ಕೈಯಿಂದ ಎತ್ತಿ ಬದಿಗೆ ತಂದು ನೀರು ಕುಡಿಸಿ, ಅನಂತರ ತಿನ್ನಲು ಬಿಸ್ಕತ್ ನೀಡಿ ಆರೈಕೆ ಮಾಡಿದ್ದಾರೆ. ನಾಯಿ ಸ್ವಲ್ಪ ಚೇತರಿಸಿಕೊಂಡಿದ್ದು, ತತ್ ಕ್ಷಣ ಸ್ಥಳೀಯರ ಸಹಾಯ ಪಡೆದು ರಿಕ್ಷಾದಲ್ಲಿ ಅದನ್ನು ಕೋಟ ಗೋ ಆಸ್ಪತ್ರೆಗೆ ಕರೆದೊಯ್ದು ಅಲ್ಲಿನ ವೈದ್ಯ ಅರುಣ್ ಕುಮಾರ್‌ರಿಂದ ಚಿಕಿತ್ಸೆ ನೀಡಿದರು.
ಗಂಭೀರ ಗಾಯವಾಗಿ ಬೆನ್ನು ಮೂಳೆ ಮುರಿದಿದ್ದು ಚೇತರಿಸಿಕೊಳ್ಳುವುದಕ್ಕೆ ತುಂಬಾ ಶ್ರಮ ಬೇಕು ಎಂದು ವೈದ್ಯರು ಹೇಳಿದ್ದರಿಂದ ಆಸ್ಪತ್ರೆಯಿಂದ ನೇರವಾಗಿ ಸಾಲಿಗ್ರಾಮದ ಪ್ರಾಣಿ ಸಂರಕ್ಷಣಾಲಯ ಸುಧೀಂದ್ರ ಐತಾಳರಿಗೆ ನಾಯಿಯನ್ನು ಒಪ್ಪಿಸಿದ್ದಾರೆ. ಸಾಯುವ ಸ್ಥಿಯಲ್ಲಿದ್ದ ಅನೇಕ ಹಾವು, ಪ್ರಾಣಿಗಳಿಗೆ ಆರೈಕೆ ಮಾಡಿ ಜೀವ ಉಳಿಸಿದ ಐತಾಳರು ನಾಯಿಯನ್ನು ಕೂಡ ಆರೈಕೆ ಮಾಡಿ ಬದುಕಿಸುವ ಭರವಸೆ ನೀಡಿದ್ದಾರೆ.
ಬೀದಿ ನಾಯಿಗಳೆಂದರೆ ತಾತ್ಸಾರದಿಂದ ನೋಡುವ ಜನರೇ ನಮ್ಮಲ್ಲಿ ಹೆಚ್ಚು. ಅದರಲ್ಲೂ ಅಪಘಾತಕ್ಕೆ ಸಿಕ್ಕಿ ಸಾಯುವ ಸ್ಥಿತಿಯಲ್ಲಿದ್ದ ನಾಯಿಯನ್ನು ಈ ರೀತಿ ಬದುಕಿಸಿದ ಉದಾಹರಣೆ ಸಿಗಲಿಕ್ಕಿಲ್ಲ. ಯುವಕರ ಕಾರ್ಯ ನಿಜಕ್ಕೂ ಮಾದರಿ. ನಾಯಿಗೆ ಆರೈಕೆ ಮಾಡಿ ಬದುಕಿಸಿಕೊಳ್ಳಲು ಪ್ರಯತ್ನಿಸುತ್ತೇನೆ.
– ಸುಧೀಂದ್ರ ಐತಾಳ, ಪ್ರಾಣಿ ಸಂರಕ್ಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.