ಕನ್ನಡ ಶಾಲೆ ಉಳಿಸುವಲ್ಲಿ ಟ್ರಸ್ಟ್‌ಗಳ ಸಾಮಾಜಿಕ ಕಾರ್ಯ ಶ್ಲಾಘನೀಯ
33 ಶಾಲೆಗಳಿಗೆ 10ಲಕ್ಷ ರೂ.ಮೌಲ್ಯದ ಕಲಿಕಾ ಸಾಮಗ್ರಿಗಳ ವಿತರಿಸಿ ಸಂಸದೆ ಶೋಭಾ ಕರಂದ್ಲಾಜೆ
Team Udayavani, Jun 4, 2019, 6:00 AM IST
ಸಿದ್ದಾಪುರ: ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಹಾಗೂ ಗೀತಾ ಎಚ್.ಎಸ್.ಎನ್. ಫೌಂಡೇಶನ್ ಕೋಟೇಶ್ವರ ಅವರು ಸಮಾಜಿಕ ಕಾರ್ಯ ಮಾತ್ರವಲ್ಲದೆ ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಶ್ರಮ ಶ್ಲಾಘನೀಯ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಬೆಳ್ವೆ ಹಾಗೂ ಗೀತಾ ಎಚ್.ಎಸ್.ಎನ್. ಫೌಂಡೇಶನ್ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೋಟ್ ಪುಸ್ತಕ ಹಾಗೂ ಬ್ಯಾಗ್ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಿ, ಮಾತನಾಡಿದರು.
ಸಮಾಜದಲ್ಲಿ ಹಣ ಇರುವವರ ಸಂಖ್ಯೆ ಬಹಳ ಇದೆ. ಹಣ ಇರುವವರೆಲ್ಲ ಸಮಾಜಿಕ ಕಾರ್ಯಕ್ಕಾಗಿ ಹಣ ವಿನಿಯೋಗಿಸುವುದಿಲ್ಲ. ಆದರೆ ಸತೀಶ ಕಿಣಿ ಮತ್ತು ಶಂಕರ ಐತಾಳ ಅವರು ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಟ್ರಸ್ಟ್ ಮೂಲಕ ಸಮಾಜಕ್ಕೆ ವಿನಿಯೋಗ ಮಾಡುತ್ತಿರುವದು ಅಭಿನಂದನೀಯ. ರಾಜ್ಯ ಸರಕಾರ 14 ಸಾವಿರ ಕೋಟಿ ರೂ. ಹಣ ಸರಕಾರಿ ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ಹಾಗೂ ಶಿಕ್ಷಕರ ಸಂಬಳಕ್ಕಾಗಿ ಖರ್ಚು ಮಾಡುತ್ತದೆ. ಇವೆಲ್ಲವನ್ನು ಮಾಡಿದರೂ ಪ್ರತಿ ವರ್ಷ ಕನ್ನಡ ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿರುವುದು ದುರಂತ. ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಕಿಳರಿಮೆ ಎಂದು ಹೆತ್ತವರು ಹಾಗೂ ಮಕ್ಕಳು ತಿಳಿಯಬಾರದು ಎಂದು ಹೇಳಿದರು.
ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರದ ದೋರಣೆಯಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಆಧುನಿಕ ಭರಾಟೆಯಲ್ಲಿ ಇಂಗ್ಲಿಷ್ ಶಿಕ್ಷಣ ಅಗತ್ಯ. ಹಾಗಂತ ಕನ್ನಡ ಮಾಧ್ಯಮ ಶಾಲೆ ಮುಚ್ಚಿಸುದು ಸರಿಯಲ್ಲ. ಸರಕಾರ ಒಂಡು ಕಡೆ ಖಾಸಗಿ ಶಾಲೆಗಳಿಗೆ ಅನುಮತಿಯನ್ನು ನೀಡುತ್ತದೆ. ಇನ್ನೊಂದು ಕಡೆ ಸರಕಾರಿ ಶಾಲೆಗಳು ಉಳಿಯ ಬೇಕು ಎನ್ನುತ್ತದೆ. ಈ ರೀತಿಯ ದೋರಣೆ ಸರಿಯಲ್ಲ. ಕನ್ನಡ ಮಾಧ್ಯಮ ಶಾಲೆಗಳು ಉಳಿಯ ಬೇಕಾದರೆ ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಮಾಧ್ಯಮ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಉಭಯ ಟ್ರಸ್ಟ್‌ಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಬಿ. ಸತೀಶ ಕಿಣಿ ಬೆಳ್ವೆ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯವಂತರಾಗಿ ಇರಬೇಕು ಎನ್ನುವ ಉದ್ದೇಶದಿಂದ ಪ್ರತಿ ತಿಂಗಳು ಉಚಿತ ಆರೋಗ್ಯ ಶಿಬಿರ ನಡೆಸುತ್ತಿದ್ದೇವೆ. ಜತೆಯಲ್ಲಿ ಹೆಲ್ಪ್ ಡೆಸ್ಕ್ ಕೂಡ ತೆರೆದಿದ್ದೇವೆ. ಸಮಾಜಿಕ ಸೇವೆಯ ಜತೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಹಾಗೂ ಶಾಲೆಗಳು ಉಳಿಯಬೇಕೆಂಬ ನಿಟ್ಟಿನಲ್ಲಿಯೂ ಕೂಡ ಕೆಲಸ ಮಾಡುತ್ತಿದ್ದೇವೆ. ಕುಡಿಯುವ ನೀರಿನ ಅಭಾವ ಇರುವುದರಿಂದ ಕುಡಿಯು ನೀರಿಗೂ ದೇಣೆಗೆ ನೀಡಿದ್ದೇವೆ ಎಂದು ಹೇಳಿದರು.
ಜಿ.ಪಂ. ಸದಸ್ಯೆ ಸುಪ್ರೀತಾ ಉದಯ ಕುಲಾಲ ಕಂಪ್ಯೂಟರ್ ಶಿಕ್ಷಕರ ಸಂಭಾವನೆ ಚೆಕ್‌ನ್ನು ಮತ್ತು ತಾ. ಪಂ. ಸದಸ್ಯೆ ಜ್ಯೋತಿ ಅವರು ಗೌರವ ಶಿಕ್ಷಕರ ಸಂಭಾವನೆ ಚೆಕ್ ವಿತರಣೆ ಮಾಡಿದರು.
ಅಮಾಸೆಬೈಲು ಗ್ರಾ. ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದರು.ಮುಖ್ಯ ಅಮಾಸೆಬೈಲು ಗ್ರಾ. ಪ. ಉಪಾಧ್ಯಕ್ಷ ಭೋಜರಾಜ ಪೂಜಾರಿ, ಸದಸ್ಯರಾದ ಕೃಷ್ಣ ಪೂಜಾರಿ ಕೊçಲಾಡಿ, ಕಸ್ತೂರಿ ಶೆಟ್ಟಿ, ಎಡಲಿನ್ ರೋಸಿ, ಅಮಾಸೆಬೈಲು ಪೊಲೀಸ್ ಠಾಣಾಧಿಕಾರಿ ಸೌಮ್ಯ ಜೆ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್. ನವೀನಚಂದ್ರ ಶೆಟ್ಟಿ ರಟ್ಟಾಡಿ, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಅಮಾಸೆಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ಅಮಾಸೆಬೈಲು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ, ಶಾಲೆಯ ಎಸ್‌ಡಿಎಂಸಿ ಆಧ್ಯಕ್ಷ ನರಸಿಂಹ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಅವರನ್ನು ಸಮ್ಮಾನಿಸಲಾತು. ಕಂಪ್ಯೂಟರ್ ಶಿಕ್ಷಕರ ಸಂಭಾವನೆ ಮತ್ತು ಗೌರವ ಶಿಕ್ಷಕರ ಸಂಭಾವನೆ ಚೆಕ್ ವಿತರಿಸಲಾಯಿತು.
ಶಾಲೆಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನ ಯಕ್ಷಗಾನ ಹೆಜ್ಜೆ ತರಬೇತಿ ತರಗತಿ ಉದ್ಘಾಟನೆ ಜರಗಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಶಶಾಂಕ, ಸುಶ್ಮೀತಾ ಮತ್ತು ಮನೀಷ್ ಅವರನ್ನು ಸಮ್ಮಾನಿಸಲಾಯಿತು. ವಯೋನಿವೃತ್ತಿ ಹೊಂದಿದ ಕೆಳಾಸುಂಕ ಶಾಲೆಯ ಮುಖ್ಯ ಶಿಕ್ಷಕ ಪಟ್ಟಾಭಿರಾಮ ಭಟ್ ಅವರನ್ನು ಗೌರವಿಸಲಾಯಿತು. ಒಟ್ಟು 33 ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರೂ. ಮೊತ್ತದ ವೆಚ್ಚದಲ್ಲಿ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಹಾಗೂ ಲೇಖನ ಸಾಮಾಗ್ರಿಗಳ ವಿತರಣೆ ಮಾಡಲಾಯಿತು.
ಮುಖ್ಯ ಶಿಕ್ಷಕ ಶೇಖರ ಯು ಸ್ವಾಗತಿಸಿದರು. ಗೀತಾ ಎಚ್.ಎಸ್.ಎನ್. ಫೌಂಡೇಶನ್ ಅಧ್ಯಕ್ಷ ಎ. ಶಂಕರ ಐತಾಳ್ ಪ್ರಾಸ್ತವಿಸಿದರು. ಶಿಕ್ಷಕ ಕರುಣಾಕರ ಶಾಲೆಗಳ ಪಟ್ಟಿ ವಾಚಿಸಿದರು. ದೈಹಿಕ ಶಿ. ಶಿಕ್ಷಕ ರತ್ನಾಕರ ಎಚ್. ನಿರೂಪಿಸಿದರು. ಟ್ರಸ್ಟಿ ಮುಸ್ತಾಕ್ ಅಹ್ಮದ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.