ನಾವುಂದ, ಬಡಾಕೆರೆಯಲ್ಲಿ ಮಳೆ ಕಡಿಮೆಯಿದ್ದರೂ ತಗ್ಗದ ನೆರೆ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆ

Team Udayavani, Aug 8, 2019, 5:03 AM IST

0708KDPP1B

ಕುಂದಾಪುರ: ಬೈಂದೂರು, ಕುಂದಾಪುರ ತಾಲೂಕು ಭಾಗದಲ್ಲಿ ಬುಧವಾರ ಮಳೆ ಕಡಿಮೆಯಿದ್ದರೂ, ನಾವುಂದ, ಬಡಾಕೆರೆ, ಪಡುಕೋಣೆ ಭಾಗದಲ್ಲಿ ನೆರೆ ನೀರು ಮಾತ್ರ ಇಳಿದಿಲ್ಲ. ಮಂಗಳವಾರವಿದ್ದ ನೀರಿನ ಪ್ರಮಾಣಕ್ಕಿಂತ ಬುಧವಾರವೇ ಹೆಚ್ಚಿತ್ತು ಎನ್ನುವುದು ಇಲ್ಲಿನ ಜನರು ಹೇಳುತ್ತಾರೆ. ಘಾಟಿ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿರುವುದರಿಂದ ನೆರೆ ನೀರಿನ ಪ್ರಮಾಣವೂ ಹೆಚ್ಚಾಗುತ್ತಿದೆ.

ಕುಂದಾಪುರ, ಬೈಂದೂರು, ಕೊಲ್ಲೂರು ಪ್ರದೇಶದಲ್ಲಿ ಮಳೆ ಕಡಿಮೆಯಿದ್ದರೂ, ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗು ತ್ತಿರುವುದರಿಂದ ಮನೆಗಳಿಗೆ ನುಗ್ಗಿದ ನೀರು ಹಾಗೆಯೇ ಇದ್ದು, ನದಿಗಳು, ಜಲಾವೃತಗೊಂಡ ಕೃಷಿ ಪ್ರದೇಶಗಳು, ರಸ್ತೆಗಳಲ್ಲಿಯೇ ಹರಿಯುತ್ತಿರುವ ನೀರಿನ ಪ್ರಮಾಣ ಏರುತ್ತಲೇ ಇದೆ.

ಸೋಮವಾರ ರಾತ್ರಿಯಿಂದ ಮಂಗಳವಾರ ದಿನವಿಡೀ ಸುರಿದ ಭಾರೀ ಮಳೆಯಿಂದಾಗಿ ನಾವುಂದ, ಬಡಾಕೆರೆ, ಸಾಲ್ಪುಡ, ಚಿಕ್ಕಳ್ಳಿ, ಹಡವು, ಪಡುಕೋಣೆ ಭಾಗದ ಮನೆಗಳಿಗೆ ನೀರು ನುಗ್ಗಿತ್ತು. ಎಕರೆಗಟ್ಟೆಲೆ ತೋಟ, ಭತ್ತದ ಗದ್ದೆ ಪ್ರದೇಶಗಳು ಜಲಾವೃತಗೊಂಡಿದ್ದವು. ಬುಧವಾರ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ಪಡೆದಂತಿದ್ದು, ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿತ್ತು. ಆದರೆ ಈ ಪ್ರದೇಶಗಳಲ್ಲಿ ನೆರೆ ನೀರು ಮಾತ್ರ ಕಡಿಮೆಯಾಗಿಲ್ಲ.

ಮನೆಯಲ್ಲಿ ದಿಗ್ಭಂಧನ..!
ಚಿಕ್ಕಳ್ಳಿ, ಬಡಾಕೆರೆ ಭಾಗದ ಬಾವುಟಿ ಕಡು ಪ್ರದೇಶ, ನಾಡದ ಕೆಲವು ಮನೆಗಳು, ನಾವುಂದ ಕುದ್ರು ಪ್ರದೇಶದ 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರಿನ ಪ್ರಮಾಣ ಬುಧವಾರವೂ ಕಡಿಮೆಯಾಗದ ಕಾರಣ, ಮನೆಯಲ್ಲಿದ್ದವರೆಲ್ಲ ಹೊರಗೆ ಬರಲಾಗದೇ ಮನೆಯೊಳಗೆ ಇದ್ದರು. ಕೆಲವರು ತುರ್ತು ಕೆಲಸಕ್ಕಾಗಿ ಮನೆಯಿಂದ ದೋಣಿ ಮೂಲಕ ಬಂದು, ಪೇಟೆ ಕಡೆಗೆ ಸಂಚರಿಸುತ್ತಿದ್ದುದು ಕಂಡು ಬಂತು.

3 ದಿನದಿಂದ ಕರೆಂಟಿಲ್ಲ
ಬಡಾಕೆರೆ ಗ್ರಾಮದ ಬಾವುಟಿ ಕಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿ – ಮಳೆಯಿಂದಾಗಿ ವಿದ್ಯುತ್‌ ತಂತಿಗಳು ತುಂಡಾಗಿ ಬಿದ್ದಿರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಕಳೆದ 3 ದಿನದಿಂದ ಈ ಭಾಗಗಳಲ್ಲಿ ಕರೆಂಟಿಲ್ಲ. ಮೊಬಲ್‌ ಸ್ವಿಚ್‌ ಆಫ್‌ ಆಗಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಯಾರಿಗಾದರೂ ಕರೆ ಮಾಡಬೇಕಾಗಬಹುದು ಎನ್ನುವ ಕಾರಣಕ್ಕೆ ನಾನು ದೋಣಿಯ ಮೂಲಕ ಪೇಟೆಗೆ ಬಂದು ಚಾರ್ಜ್‌ ಮಾಡಲು ಹೋಗುತ್ತಿರುವುದಾಗಿ ಬಾವುಟಿ ಕಡು ನಿವಾಸಿ ವಿಲ್ಫೆಡ್‌ ಹೇಳಿಕೊಂಡಿದ್ದಾರೆ.

ರಸ್ತೆ ಸಂಚಾರವೂ ಸ್ಥಗಿತ
ಮರವಂತೆಯಿಂದ ಪಡುಕೋಣೆಗೆ ಹೋಗುವ ರಸ್ತೆಯೇ ಹೊಳೆಯಂತೆ ತುಂಬಿ ಹರಿಯುತ್ತಿರು ವುದರಿಂದ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅದಾಗಿಯೂ ಕೆಲವರೂ ಕಷ್ಟಪಟ್ಟು ತೆರಳು ತ್ತಿದ್ದಾರೆ. ನಾವುಂದದಿಂದ ಬಡಾಕೆರೆ, ನಾಡ ಕಡೆಗೆ ಸಂಚರಿಸುವ ಮಾರ್ಗದಲ್ಲಿಯೂ ನೀರು ತುಂಬಿ ಹರಿಯುತ್ತಿರುವುದರಿಂದ ಈ ಮಾರ್ಗದಲ್ಲಿಯೂ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಮಳೆ ಕೊಂಚ ಇಳಿಮುಖ
ಕುಂದಾಪುರ, ಬೈಂದೂರು ತಾಲೂಕಿನ ಎಲ್ಲೆಡೆ ಬುಧವಾರ ದಿನವಿಡೀ ಮಳೆ ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು. ಈ ಮೊದಲೇ ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ತುಂಬಿ ಹರಿಯುತ್ತಿರುವ ನದಿಗಳು
ಮಳೆ ಕಡಿಮೆಯಿದ್ದರೂ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಾರಾಹಿ, ಸೌಪರ್ಣಿಕಾ, ಚಕ್ರಾ, ಕುಬಾj, ಸುಮನಾವತಿ ನದಿಗಳು ತುಂಬಿ ಹರಿಯುತ್ತಿದೆ. ಕೆಲವೆಡೆಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.

ಜಾನುವಾರು
ಶೆಡ್‌ ರಚನೆಗೆ ಸೂಚನೆ
ಜಾನುವಾರುಗಳನ್ನು ಸ್ಥಳಾಂತರ ಮಾಡಲು ಕಷ್ಟವಾಗುವುದರಿಂದ ತಾತ್ಕಲಿಕವಾಗಿ ಶೆಡ್‌ ನಿರ್ಮಿಸಿ, ಜಾನುವಾರುಗಳನ್ನು ಕಟ್ಟಲು ಪಶು ವೈದ್ಯಕೀಯ ಇಲಾಖೆ ಜತೆಗೂಡಿ ಮೇವು ಒದಗಿಸಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಪಿಡಿಒ ಮತ್ತು ಗ್ರಾಮ ಕರಣಿಕರ ತಂಡ ಮಾಡಲಾಗಿದ್ದು, ತುರ್ತು ಸ್ಥಳಾಂತರ ಹೊಣೆ ವಹಿಸಲಾಗಿದೆ. ಶಾಲೆಗಳ ಬೀಗದ ಕೀ ಅನ್ನು ಇಟ್ಟುಕೊಳ್ಳಲಾಗಿದೆ. ಗಂಜಿ ಕೇಂದ್ರಗಳನ್ನು ತೆರೆಯಲು ಈ ಹಿಂದೆಯೇ ಜಾಗ ಗುರುತಿಸಲಾಗಿದೆ.
– ಡಾ| ಎಸ್‌. ಎಸ್‌. ಮಧುಕೇಶ್ವರ್‌, ಕುಂದಾಪುರ ಎಸಿ

ಮಳೆ ಹಾನಿ ವಿವರ
ಮಂಗಳವಾರ ಸುರಿದ ಭಾರೀ ಮಳೆಗೆ ಕುಂದಾಪುರ, ಬೈಂದೂರು ಭಾಗದ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಹಕ್ಲಾಡಿಯ ಆಯುಬ್‌ ಸಾಹೇಬ್‌ ಮನೆ, ಜಯಲಕ್ಷ್ಮಿಹಟ್ಟಿ, ಕಾವ್ರಾಡಿ ಶಶಿಕಲಾ ಮನೆ, ತಲ್ಲೂರಿನ ಪಾರ್ವತಿ ದೇವಾಡಿಗ ಅವರ ಮನೆಗೆ ಮರ ಬಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಯಡಾಡಿ – ಮತ್ಯಾಡಿಯ ನಾಗರಾಜ ಆಚಾರಿ, ಬಾಬುರಾಯ ಆಚಾರಿ, ಕೃಷ್ಣಯ್ಯ ಆಚಾರಿ, ಮೋಹಿನಿ ಶೆಡ್ತಿ, ಸೀತಾರಾಮ ಆಚಾರಿ, ಹೆಸ್ಕತ್ತೂರಿನಲ್ಲಿ ಭೋಜು ಕುಲಾಲ್‌, ಬೇಬಿ ಕುಲಾಲ್ತಿ, ಮಮತಾ ಮೊಗವೀರ, ಹೆರಿಯಣ್ಣ ಶೆಟ್ಟಿ, ಮಾಲು ಮೊಗವೀರ, ಪದ್ಮ ಶೆಡ್ತಿ, ಶ್ರೀಕಾಂತ್‌ ಶೆಟ್ಟಿ ಅವರ ಮನೆಗೆ ನೀರು ನುಗ್ಗಿ ಹಾನಿಯಾಗಿದೆ. ಕೊರವಡಿ ಶಾಲೆಯ ಸಭಾಗೃಹದ ಮಾಡಿಗೆ ಹಾನಿ ಯಾಗಿದೆ. ಗೋಪಾಡಿಯ ಎಂ.ಎ. ಸಿದ್ದಕಿ ಕಾರಿಗೆ ಮರ ಬಿದ್ದು, ಕಾರು ಜಖಂ ಗೊಂಡಿದೆ.

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.