ತೋಡುಗಳಲ್ಲಿ ಮಣ್ಣಿನ ರಾಶಿ; ನೀರು ಹೋಗೋದೆಲ್ಲಿ? 


Team Udayavani, May 24, 2018, 6:00 AM IST

2205udcp5a.jpg

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಉಡುಪಿ ನಗರಸಭೆಯ ಅಂಬಲಪಾಡಿ ವಾರ್ಡ್‌ ಮತ್ತದರ ಸುತ್ತಮುತ್ತ ಮಳೆ ನೀರು ಹರಿಯುವ ಪ್ರಮುಖ ತೋಡುಗಳಲ್ಲಿ ಮಣ್ಣಿನ ರಾಶಿ ಕಂಡುಬಂದಿದೆ. ಕೆಲವೆಡೆಗಳಲ್ಲಿ ತೋಡೇ ಮಾಯವಾಗಿದೆ!

ಅಂಬಲಪಾಡಿ-ಕರಾವಳಿ ಜಂಕ್ಷನ್‌ ಮಧ್ಯೆ ರಾ.ಹೆ. 66ರಲ್ಲಿ ಅಭಿನಂದನ್‌ ಪೆಟ್ರೋಲ್‌ ಬಂಕ್‌ ಇದೆ. ಇದರ ಮುಂಭಾಗ ಪೂರ್ವಭಾಗದಲ್ಲಿ ತಾಲೂಕು ಕಚೇರಿ, ಪೊಲೀಸ್‌ ಅಧೀಕ್ಷಕರ ಕಚೇರಿ ಸಂಪರ್ಕಿಸುವ ಪ್ರಮುಖ ರಸ್ತೆ ಇದೆ. ಸುಮಾರು 300 ಮೀ. ಉದ್ದಕ್ಕೆ ಇರುವ ಈ ರಸ್ತೆಯ ಇಕ್ಕೆಲದಲ್ಲಿದ್ದ ತೋಡು ಮಾಯವಾಗಿದೆ.  ಹೆದ್ದಾರಿ ಸಂಧಿಸುವ ಭಾಗದಲ್ಲಿ 50 ಮೀ.ನಷ್ಟು ಉದ್ದಕ್ಕೆ ಮಾತ್ರ ತೋಡು ಇದ್ದು, ಇದು ಕೂಡ ಸಮರ್ಪಕವಾಗಿಲ್ಲ.

ರಸ್ತೆಯೂ ಹಾಳು; ತೋಡೂ ಹಾಳು
ತಾಲೂಕು ಕಚೇರಿಯಿಂದ ಹೆದ್ದಾರಿ ಸಂಪರ್ಕಿತ ಪ್ರಮುಖ ರಸ್ತೆಯ ಮಧ್ಯಭಾಗವನ್ನು ಅಗೆದು ಒಳಚರಂಡಿ ಕಾಮಗಾರಿಯನ್ನು ವರ್ಷದ ಹಿಂದೆ ನಡೆಸಲಾಗಿದೆ. ಈ ಕಾಮಗಾರಿ ನಡೆಸಿದವರು ಮಣ್ಣನ್ನು ರಸ್ತೆ ಪಕ್ಕದ ತೋಡಿಗೆ ಹಾಕಿ ಹೋಗಿದ್ದಾರೆ. ಇದರಿಂದ ಡಾಮರು ರಸ್ತೆಯೂ ಹಾಳಾಗಿದೆ. ತೋಡನ್ನೂ ಹಾಳು ಮಾಡಿದ್ದಾರೆ. ಇನ್ನು ಮಳೆ ಬಂದಾಗ ನೀರೆಲ್ಲ ಅಗೆದು ಹಾಕಿರುವ ರಸ್ತೆ ಮೇಲೆಯೇ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲಿನ ಈ ಪರಿಸ್ಥಿತಿಯಿಂದ ತೋಡು ಮತ್ತು ರೋಡು ಎರಡೂ ಹಾಳಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮೃತ್ಯುಹೊಂಡ !
ಕರಾವಳಿ ಜಂಕ್ಷನ್‌ನಿಂದ ಅಂಬಲಪಾಡಿ ರಾ.ಹೆ. 66ರ ಹೆದ್ದಾರಿ ಇಕ್ಕೆಲಗಳಲ್ಲಿ ತೋಡಿನ ಪರಿಸ್ಥಿತಿಯೇ ಚಿಂತಾಜನಕವಾಗಿದೆ. ಇಲ್ಲಿನ ಪೆಟ್ರೋಲ್‌ ಬಂಕ್‌ ಒಂದರ ಮುಂಭಾಗದ ರಸ್ತೆಯ ಪೂರ್ವಭಾಗದ ಹೆದ್ದಾರಿ ಅಂಚಿನಲ್ಲಿ ಮೃತ್ಯು ಹೊಂಡವೊಂದು ಸೃಷ್ಟಿಯಾಗಿದೆ. ಕಾಂಕ್ರೀಟ್‌ ಚರಂಡಿ ಕಾಮಗಾರಿ ಪೂರ್ಣಗೊಳಿಸದ ಕಾರಣ ಬೃಹತ್‌ ಹೊಂಡ ಇಲ್ಲಿ ಸೃಷ್ಟಿಯಾಗಿದೆ. ತ್ಯಾಜ್ಯಗಳು ಈ ಹೊಂಡದಲ್ಲಿ ಶೇಖರಣೆಯಾಗಿದೆ.  ವಾಹನ ಸಾಗುವ, ಜನರು ನಡೆದಾಡುವ ಸರ್ವಿಸ್‌ ರಸ್ತೆಯಂಚಿನಲ್ಲೇ ಈ ಹೊಂಡವಿದೆ. ಗಿಡಗಂಟಿಗಳು ಬೆಳೆದ ಕಾರಣ ನಡೆದಾಡುವವರೂ ಎಡವಿ ಗುಂಡಿಗೆ ಬೀಳುವ ಸಾಧ್ಯತೆ ಇದೆ.

ಅಲ್ಲಲ್ಲಿ  ಸ್ಲಾéಬ್‌ ಓಪನ್‌
ಹೆದ್ದಾರಿ ಕಾಮಗಾರಿ ಸಂದರ್ಭ ಚರಂಡಿ ಕಾಮಗಾರಿಯನ್ನು ಅಸಮರ್ಪಕವಾಗಿ ಮಾಡಲಾಗಿದೆ. ಅಂಬಲಪಾಡಿ ಭಾಗದಲ್ಲಿ ಚರಂಡಿಯಲ್ಲಿ ಅರೆಬರೆ ಕಾಂಕ್ರೀಟ್‌ ಚರಂಡಿ ಕಾಮಗಾರಿ ನಡೆದಿದೆ. ಅದರಲ್ಲೂ ಅಲ್ಲಲ್ಲಿ ಚರಂಡಿ ಸ್ಲಾéಬ್‌ಗಳನ್ನು ಹಾಕಿಲ್ಲ. ಕೆಲವೆಡೆ ಸ್ಲಾéಬ್‌ಗಳು ತೆರೆದುಕೊಂಡಿವೆ. ಚರಂಡಿಯೊಳಗೆ ಗಿಡಗಂಟಿಗಳು ಬೆಳೆದಿವೆ. 

ಗಮನ ಹರಿಸುತ್ತೇವೆ
ಅಂಬಲಪಾಡಿ ವಾರ್ಡ್‌ನಲ್ಲಿ ಚರಂಡಿ ಹೂಳೆತ್ತುವ ಕೆಲಸವನ್ನು ಕಳೆದೆರಡು ತಿಂಗಳಿನಿಂದ ನಡೆಸಲಾಗಿದೆ. ಕೆಲವೆಡೆಗಳಲ್ಲಿ ಹೆದ್ದಾರಿ ಕಾಮಗಾರಿಯ ಚರಂಡಿ ನಿರ್ಮಿಸುವವರು ಸಮಸ್ಯೆ ತಂದೊಡ್ಡಿದ್ದಾರೆ. ಈ ಬಗ್ಗೆ ನಗರಸಭೆ ಎಂಜಿನಿಯರ್‌ ಅವರಿಗೆ ತಿಳಿಸಲಾಗಿದೆ. ಸಭೆಯಲ್ಲೂ ವಿಷಯ ಪ್ರಸ್ತಾವವಾಗಿದೆ. ಸಮಸ್ಯೆ ಬಗ್ಗೆ ಗಮನ ಹರಿಸಿ ನಗರಸಭೆ ಮೂಲಕ ಚರಂಡಿಯಲ್ಲಿರುವ ಮಣ್ಣನ್ನು ತೆರವುಗೊಳಿಸಲಾಗುವುದು.
– ವಸಂತಿ ಶೆಟ್ಟಿ, ನಗರಸಭಾ ಸದಸ್ಯರು, ಅಂಬಲಪಾಡಿ

– ಚೇತನ್‌ ಪಡುಬಿದ್ರಿ

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.