ವಿದ್ಯುತ್‌, ನೀರಿನ ಸಮಸ್ಯೆಗೆ ಏಕಕಾಲಕ್ಕೆ ಪರಿಹಾರ!


Team Udayavani, Apr 8, 2018, 7:00 AM IST

2103kota1e.jpg

ಕೋಟ: ಕರಾವಳಿಯಲ್ಲಿ ನೀರಿನ ಬವಣೆ, ವಿದ್ಯುತ್‌ ಬವಣೆ ಹೊಸತೇನಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ಸುರಿವ ಮಳೆ, ವ್ಯಾಪಕ ಬಿಸಿಲನ್ನೇ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಸಾಸ್ತಾನದ ಪದವೀಧರರೊಬ್ಬರು ಹೊಸ ಪ್ಲಾನ್‌ ಮಾಡಿದ್ದಾರೆ. 

ಬಾಳುRದ್ರುವಿನ ಡಿಪ್ಲೊಮಾ ಪದವೀಧರ ಶ್ರೀಕಾಂತ್‌ ಆಚಾರ್ಯ ಅವರು, ವಿನೂತನ ತಂತ್ರಜ್ಞಾನದ ಪ್ರಸ್ತಾವನೆಯನ್ನು ಸಿದ್ಧ ಪಡಿಸಿ, ಕೇಂದ್ರ ಜಲಮಂಡಳಿಗೆ ಕಳುಹಿಸಿದ್ದಾರೆ. ಇದಕ್ಕೆ ಮೆಚ್ಚುಗೆ ಬಂದಿದ್ದು, ಕೇಂದ್ರ ವಿಜ್ಞಾನ-ತಂತ್ರಜ್ಞಾನ ಇಲಾಖೆಗೆ ರವಾನೆಯಾಗಿದೆ. 

ಏನಿದು ಯೋಜನೆ?
ಸಮುದ್ರದಲ್ಲಿ  ಸುಮಾರು 500-1,000 ಮೀಟರ್‌ಗೂ ದೊಡ್ಡ ಡಿಶ್‌ ಆ್ಯಂಟೆನಾ ಮಾದರಿ ಪ್ಯಾನೆಲ್‌ಗ‌ಳನ್ನು ನಿರ್ಮಿಸಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು. ಬಳಿಕ ಅದನ್ನು ಶುದ್ಧೀಕರಿಸಿ ಕುಡಿವ ನೀರಾಗಿ ಬಳಸಿಕೊಳ್ಳಬಹುದು. ಇದರೊಂದಿಗೆ ಆ್ಯಂಟೆನಾ ಮೇಲ್ಭಾಗದಲ್ಲಿ ಸೌರ ಫ‌ಲಕವನ್ನು ಅಳವಡಿಸಿದರೆ, ಇದರಿಂದ ದೊಡ್ಡ ಮಟ್ಟದಲ್ಲಿ ಸೌರ ವಿದ್ಯುತ್‌ ಕೂಡ ಉತ್ಪಾದಿಸಬಹುದು. ದೇಶಾದ್ಯಂತ ಈ ರೀತಿಯ ಯೋಜನೆ ಕೈಗೊಂಡರೆ, ನೀರು ಹಾಗೂ ಸೋಲಾರ್‌ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎನ್ನುವುದು ಯೋಜನೆಯ ಸಾರಾಂಶ. 
 
ಕೇಂದ್ರ ಜಲಮಂಡಳಿ ಪ್ರಶಂಸೆ
ಯೋಜನೆ ಬಗ್ಗೆ ಅಧ್ಯಯನ ಬಳಿಕ ನೀಲಿ ನಕ್ಷೆಯನ್ನು ಶ್ರೀಕಾಂತ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ರವಾನಿಸಿದ್ದರು. ಅದನ್ನು ಜಲಮಂಡಳಿಗೆ ಸಲ್ಲಿಸುವಂತೆ ಉತ್ತರ ಬಂದಿದ್ದು, ಹಾಗೆ ಅಲ್ಲಿಗೆ ಕಳಿಸಿದ್ದರು. ಯೋಜನೆ ಬಗ್ಗೆ ಜಲಮಂಡಳಿ ಪ್ರಶಂಸೆ ವ್ಯಕ್ತಪಡಿಸಿದ್ದು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಅದನ್ನು ಕಳುಹಿಸಲಾಗಿದೆ.  

ನೈಸರ್ಗಿಕ ವಿಕೋಪದಿಂದ ರಕ್ಷಣೆ
ಸಮುದ್ರದಲ್ಲಿ ಭದ್ರ ಅಡಿಪಾಯ ಹಾಕಿ ಪ್ಯಾನೆಲ್‌ಗ‌ಳನ್ನು ನಿರ್ಮಿಸುವುದರಿಂದ ಮಳೆಗಾಲದಲ್ಲಿ  ಕಡಲ್ಕೊರೆತ ತಡೆಗಟ್ಟಲು ಸಹಾಯವಾಗುತ್ತದೆ. ಇದರೊಂದಿಗೆ ಮೀನುಗಾರಿಕೆ ದ್ವೀಪಸ್ತಂಭವಾಗಿ, ಕರಾವಳಿ ಕಾವಲಿಗೂ ಅನುಕೂಲವಾಗುವಂತೆ ಮಾರ್ಪಡಿಸಿಕೊಳ್ಳಬಹುದು ಎನ್ನಲಾಗಿದೆ.  

ಸಮುದ್ರದಲ್ಲೇ 
ನಿರ್ಮಾಣ ಯಾಕೆ?  

ಭೂಮಿಯ ಮೇಲೆ ನಿರ್ಮಿಸಿದರೆ  ಜಾಗದ ಲಭ್ಯತೆ, ಕಾನೂನು ತೊಡಕುಗಳು ಬರಬಹುದು. ಸಮುದ್ರದಲ್ಲಿ ಸೂರ್ಯನ ಶಾಖ ಅಧಿಕ. ಇನ್ನು ಮಳೆಗಾಲದಲ್ಲಿ ನೀರು ಸಮುದ್ರಕ್ಕೆ ಬೀಳುವ ಮೊದಲು ಶೇಖರಿಸುವುದರಿಂದ ಶುದ್ಧ ನೀರು ಲಭ್ಯ. ಇದರ ಶುದ್ಧೀಕರಣವೂ ಸುಲಭ. ಈ ಕಾರಣಗಳಿಂದ ಸಮುದ್ರವೇ ಸೂಕ್ತ. ಸರಕಾರ ಸ್ಪಂದಿಸಿದರೆ ಇದನ್ನು ಸಾವಿರಾರು ಮನೆಗಳಿಗೆ ಶುದ್ಧ ನೀರು, ವಿದ್ಯುತ್‌ ನೀಡುವ ಯೋಜನೆಯನ್ನಾಗಿಸಬಹುದು ಎನ್ನುತ್ತಾರೆ ಶ್ರೀಕಾಂತ್‌. 

ಕ್ರಾಂತಿ ಮೂಡಿಸುವ ಹಂಬಲ
ಕುಡಿಯುವ  ನೀರು, ವಿದ್ಯುತ್‌ ಸಮಸ್ಯೆ ಕುರಿತು ಆಲೋಚಿಸುವಾಗ ಈ ಆಲೋಚನೆ ಹೊಳೆಯಿತು. ಇದಕ್ಕೆ ಪೂರಕವಾದ ನೀಲನಕ್ಷೆ ಸಿದ್ಧಪಡಿಸಿ ಜಲಮಂಡಳಿಗೆ ಕಳುಹಿಸಿದ್ದೆ. ಅಲ್ಲಿಂದ ಪ್ರಶಂಸೆ ವ್ಯಕ್ತವಾಗಿರುವುದು ಖುಷಿಯಾಗಿದೆ.  ಮುಂದೆ ಇದೊಂದು ದೊಡ್ಡ ಯೋಜನೆಯಾಗಿ ಕ್ರಾಂತಿ ಮೂಡಿಸಬೇಕು ಎನ್ನುವ ಆಸೆ ಇದೆ.
-ಶ್ರೀಕಾಂತ್‌ ಆಚಾರ್ಯ,  ಬಾಳುRದ್ರು

– ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ

Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ

Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ

Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ

ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ

Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ

Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.