ಕೆಲ ಸರಕಾರಿ ಕಿ.ಪ್ರಾ. ಶಾಲೆಗೆ ಬೇಕಿದೆ ಖಾಯಂ ಶಿಕ್ಷಕರು
ಶಿಕ್ಷಣ ಸಚಿವರಿಗೆ ಮನವಿ ಮಾಡಿದರೂ ಸಿಗದ ಸ್ಪಂದನೆ ; ಜೂನ್‌ನಿಂದಲೇ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ
Team Udayavani, Oct 6, 2019, 5:13 AM IST
ಹಾಲಾಡಿ: ಇಲ್ಲಿಗೆ ಸಮೀಪದ ಅಮಾಸೆಬೈಲು ಗ್ರಾಮದ “ಸರಕಾರಿ ಕಿರಿಯ ಪ್ರಾಥಮಿಕ ಶಾಲೆ “ಕೆಲ’ ಇಲ್ಲಿಗೆ ಖಾಯಂ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಕೊರತೆಯಿಂದ ಶಾಲೆ ಮುಚ್ಚುವುದು ಎಲ್ಲೆಡೆ ಸರ್ವೇ ಸಾಮಾನ್ಯವಾದರೆ, ಇಲ್ಲಿ ಶಿಕ್ಷಕರೇ ಇಲ್ಲದ ಕಾರಣ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ. ಈ ಬಗ್ಗೆ ಶಿಕ್ಷಣ ಸಚಿವರಿಗೂ ಮನವಿ ಸಲ್ಲಿಸಿದರೂ, ಪ್ರಯೋಜನ ಮಾತ್ರ ಶೂನ್ಯ.
ಪಶ್ಚಿಮ ಘಟ್ಟದ ತಪ್ಪಲಿ ನಲ್ಲಿರುವ ಪ್ರಕೃತಿ ದತ್ತ ಸೌಂದರ್ಯದ ಮಧ್ಯೆ ಇರುವ, ನಕ್ಸಲ್ ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿರುವ ಅಮಾಸೆಬೈಲು ಗ್ರಾಮದಲ್ಲಿರುವ “ಕೆಲ’ ಎನ್ನುವ ಪುಟ್ಟ ಊರಿನಲ್ಲಿರುವ ಈ ಶಾಲೆಯೀಗ ಖಾಯಂ ಶಿಕ್ಷಕರಿಲ್ಲದ ಕಾರಣ ಮುಚ್ಚುವ ಭೀತಿಯಲ್ಲಿದೆ.
ಸುಮಾರು 45 ವರ್ಷಗಳ ಇತಿಹಾಸವಿರುವ ಈ ಸರಕಾರಿ ಕಿ.ಪ್ರಾ. ಶಾಲೆ ಕೆಲದಲ್ಲಿ ಈಗ 18 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಇಲ್ಲಿ ಇದ್ದ ಶಿಕ್ಷಕರಿಗೆ ನಿವೃತ್ತಿಯಾಗಿದ್ದು, ಆ ಬಳಿಕ ಇಲ್ಲಿಗೆ ಪ್ರಭಾರ ನೆಲೆಯಲ್ಲಿ ಓರ್ವರನ್ನು ನಿಯೋಜಿಸಲಾಗಿದೆ. ಆದರೆ ಅವರು ಎಷ್ಟು ದಿನ ಇರುತ್ತಾರೆ ಎನ್ನುವ ಆತಂಕ ಪೋಷಕರದ್ದು. ಮತ್ತೂರ್ವರು ಅತಿಥಿ ಶಿಕ್ಷಕರಿದ್ದಾರೆ.
ಬೇರೆ ಶಾಲೆಗೆ ಹೋಗಲು ಸಮಸ್ಯೆ
ಇದು ತೀರಾ ಗ್ರಾಮೀಣ ಭಾಗದ ಶಾಲೆಯಾಗಿದ್ದು, ಇಲ್ಲಿ ವಾಸಿಸುವ ಜನರು ಕೂಡ ಬಡ ಕುಟುಂಬದವರಾಗಿದ್ದಾರೆ. ದೂರದ ಖಾಸಗಿ ಶಾಲೆಗೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಪಕ್ಕದ ಶಾಲೆಗೆ ಹೋಗೋಣವೆಂದರೆ, 5ರಿಂದ 10 ಕಿ.ಮೀ. ವರೆಗೂ ನಿರ್ಜನ ಕಾಡಿನ ಮಧ್ಯೆ ನಡೆದೇ ಹೋಗಬೇಕಾದ ದುಃಸ್ಥಿತಿ. ಇದರಿಂದ ಈ ಶಾಲೆಯನ್ನು ಶಿಕ್ಷಕರಿಲ್ಲದೆ ಮುಚ್ಚಿ, ಇಲ್ಲಿನ ಮಕ್ಕಳನ್ನು ಹತ್ತಿರದ ಶಾಲೆಗೆ ಕಳುಹಿಸುವ ಯೋಜನೆ ಸಚಿವರು ಹಾಗೂ ಇಲಾಖೆಯದ್ದು ಎನ್ನುವ ಮಾಹಿತಿ ತಿಳಿದು ಬಂದಿದೆ. ಆದರೆ ವಾಹನದ ಮೂಲಕ ಬೇರೊಂದು ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೆತ್ತವರಿಗೆ ಕಷ್ಟವಾಗಲಿದ್ದು, ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತರಾಗಬಹುದು ಎನ್ನುವ ಆತಂಕ ಊರವರದ್ದು.
ಶಿಕ್ಷಣ ಸಚಿವರಿಗೂ ಮನವಿ
ಈ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ ಎನ್ನುವುದನ್ನು ಈ ಊರಿನ ನೆರಳು ಎನ್ನುವ ತಂಡವು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆದರೆ ಇದು ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿಗೆ ಶಿಕ್ಷಕರು ಬರಲು ಒಪ್ಪುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಇಲ್ಲಿನ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟು, ಸಮೀಪದ ಶಾಲೆಯಲ್ಲಿ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದರು.
ಇಲ್ಲಿಗೆ ಬರಲು ಹಿಂದೇಟು
ಇದು ತೀರಾ ಗ್ರಾಮೀಣ, ಮಾತ್ರವಲ್ಲದೆ ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿಗೆ ಶಿಕ್ಷಕರಾಗಿ ಬರಲು ಹಲವರು ಹಿಂದೇಟು ಹಾಕಿರುವುದೇ ಇಲ್ಲಿನ ಖಾಯ ಶಿಕ್ಷಕರ ಸಮಸ್ಯೆಗೆ ಮುಖ್ಯ ಕಾರಣ. 10 ವರ್ಷಗಳ ಹಿಂದೆ ಈ ಶಾಲೆಯಲ್ಲಿ ಇಬ್ಬರು ಖಾಯಂ ಶಿಕ್ಷಕರಿದ್ದರು. ಆಗ ವಿದ್ಯಾರ್ಥಿಗಳು ಕೂಡ ತುಂಬಾ ಇದ್ದರು. ಈಗ ಶಿಕ್ಷಕರಿಲ್ಲದೆ, ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಶಿಕ್ಷಣ ಇಲಾಖೆಯು ಖಾಯಂ ಶಿಕ್ಷಕರನ್ನು ನಿಯೋಜಿಸಲು ಮುಂದಾದರೂ ಇಲ್ಲಿಗೆ ಯಾರೂ ಕೂಡ ಬರಲು ಒಪ್ಪುವುದಿಲ್ಲ. ಹಾಗಾಗಿ ಆಗಾಗ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರನ್ನೇ ನಿಯೋಜಿಸಬೇಕಾಗುತ್ತದೆ ಎನ್ನುವುದು ಇಲಾಖೆಯ ಸಮಜಾಯಿಷಿ.
ಖಾಯಂ ಶಿಕ್ಷಕರು ಬರಲಿ
ಪದೇ ಪದೇ ಶಿಕ್ಷಣಾಧಿಕಾರಿಗಳು ಎರಡು ಮೂರು ತಿಂಗಳು ಬಿಟ್ಟು ನಿವೃತ್ತರಾಗುವ ಪಕ್ಕದ ಶಾಲೆಯ ಶಿಕ್ಷಕರನ್ನು ನಮ್ಮ ಶಾಲೆಗೆ ನೀಡಿ ಕೇವಲ ತಾತ್ಕಾಲಿಕ ಪರಿಹಾರ ನೀಡಿ ಸಮಾಧಾನ ಮಾಡಲು ನೋಡುತ್ತಿದ್ದಾರೆ. ಈ ಬಗ್ಗೆ ನಾವು ಶಿಕ್ಷಣ ಸಚಿವರಿಗೂ ಮನವಿ ಮಾಡಿದ್ದು, ಈಗ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಈ ಶಾಲೆಗೂ ಕೂಡ ಖಾಯಂ ಶಿಕ್ಷಕರನ್ನು ಕೊಡುವಂತಾಗಲಿ.
– ಆದರ್ಶ್ ಕೆಲ, ಊರವರು
ತಾತ್ಕಾಲಿಕ ನಿಯೋಜನೆ
ಅಲ್ಲಿನ ಮಕ್ಕಳಿಗೆ ಈಗ ತೊಂದರೆಯಾಗ ದಂತೆ ಸಮೀಪದ ಶಾಲೆಯ ಶಿಕ್ಷಕರೊಬ್ಬ ರನ್ನು ತಾತ್ಕಲಿಕವಾಗಿ ನಿಯೋಜಿಸಲಾಗಿದೆ. ಒಬ್ಬರು ಗೌರವ ಶಿಕ್ಷಕರಿದ್ದಾರೆ. ಶಿಕ್ಷಕರ ನೇಮಕಾತಿ, ನಿಯೋಜನೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅದರಲ್ಲಿ ಈ ಶಾಲೆಗೆ ಒಬ್ಬರು ಖಾಯಂ ಶಿಕ್ಷಕರನ್ನು ನೀಡುವ ಕುರಿತಂತೆ ಗಮನಹರಿಸಲಾಗುವುದು.
– ಅಶೋಕ ಕಾಮತ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.