ಹದಗೆಟ್ಟ ಸೂಡ ಭಗತ್ ಸಿಂಗ್ ರಸ್ತೆ: ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ
ಘನವಾಹನಗಳ ಸಂಚಾರ ನಿಷೇಧ ಫಲಕಕ್ಕೆ ಬೆಲೆ ಇಲ್ಲ ; ರಾತ್ರಿ ವೇಳೆ ಬಾಡಿಗೆ ವಾಹನಗಳೂ ಬರಲ್ಲ
Team Udayavani, May 14, 2019, 6:00 AM IST
ಬೆಳ್ಮಣ್: ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾ.ಪಂ. ವ್ಯಾಪ್ತಿಯ ಸೂಡದಿಂದ ನಂದಳಿಕೆ ಸಂಪರ್ಕಿಸುವ ಭಗತ್ ಸಿಂಗ್ ತೀರ ಹದಗೆಟ್ಟದ್ದು ಸಣ್ಣ ಪುಟ್ಟ ವಾಹನಗಳು ಒಡಾಟವೂ ಕಷ್ಟವಾಗಿದೆ. ರಸ್ತೆ ಯುದ್ದಕ್ಕೂ ಜಲ್ಲಿಕಲ್ಲುಗಳು ಎದ್ದು ಹೋಗಿ ಹೊಂಡ ಗುಂಡಿಗಳು ನಿರ್ಮಾಣಗೊಂಡಿದ್ದು ಪಾದಚಾರಿಗಳ ಸಂಚಾರಕ್ಕೂ ಅಯೋಗ್ಯ ಎಂಬಂತಾಗಿದೆ.
ಉಡುಪಿ,ಮಣಿಪಾಲಕ್ಕೆ ಹತ್ತಿರದ ರಸ್ತೆ
ನಂದಳಿಕೆ ಗ್ರಾಮದಿಂದ ಸೂಡ ಮಾರ್ಗವಾಗಿ ಉಡುಪಿ, ಮಂಚಕಲ್, ಪಳ್ಳಿ, ಮೂಡುಬೆಳ್ಳೆ ಮಣಿಪಾಲ ತಲುಪಲು ಬಹು ಹತ್ತಿರದ ರಸ್ತೆ ಇದಾಗಿದೆ. ಅದರೆ ಇದೀಗ ಹೊಂಡ ಗುಂಡಿ ತುಂಬಿದ ಪರಿಣಾಮ ವಾಹನ ಸವಾರರು ಸುಮಾರು 7 -8 ಕಿ.ಮೀ. ಸುತ್ತಿ ಬಳಸಿ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲ ವರ್ಷಗಳ ಹಿಂದೆ ಈ ರಸ್ತೆ ಡಾಮರೀಕರಣಗೊಂಡರೂ ಕೆಲವೇ ತಿಂಗಳಲ್ಲಿ ಎಲ್ಲವೂ ಕಿತ್ತು ಹೋಗಿದೆ.
ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುವ ಪರಿಣಾಮ ವಾಹನ ಸವಾರರು ಹರಸಾಹಸ ಪಡಬೇಕಾಗಿದೆ. ಸ್ವಲ್ಪ ಎಡವಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಬೈಕ್ ಸವಾರರಂತೂ ನಿತ್ಯ ಬಿದ್ದೇಳುವ ಸ್ಥಿತಿ ರಸ್ತೆಯದ್ದು.
ಎಚ್ಚರಿಕೆ ಫಲಕಕಕ್ಕೆ ಬೆಲೆಯಿಲ್ಲ
ಈ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸಬಾರದು ಎಂಬ ಎಚ್ಚರಿಕೆ ಫಲಕ ಅಳವಡಿಸಿದರೂ ಸಂಚಾರ ನಡೆಸುವ ಘನ ವಾಹನಗಳ ಸಂಖ್ಯೆ ಮಾತ್ರ ಕಡಿಮೆ ಯಾಗಿಲ್ಲ. ಸೂಡ ನಂದಳಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಕಲ್ಲಿನ ಕೋರೆಗಳಿರುವ ಕಾರಣ ಜಲ್ಲಿ ಕಲ್ಲುಗಳನ್ನು ತುಂಬಿದ ಲಾರಿ, ಟಿಪ್ಪರ್ ನಂತಹ ಘನ ವಾಹನಗಳು ಉಡುಪಿ, ಮಣಿಪಾಲವನ್ನು ತಲುಪಲು ಈ ಮಾರ್ಗವನ್ನೇ ಅವಲಂಬಿಸಿವೆ.
ರಾತ್ರಿ ಸಂದರ್ಭ ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವ ಪರಿಣಾಮ ಸ್ಥಳೀಯರಿಗೆ ಬಹಳ ಸಮಸ್ಯೆಯಾಗುತ್ತಿದೆ. ರಸ್ತೆ ಇಷ್ಟು ಹದಗೆಟ್ಟಿದ್ದರೂ ಸಮಬಂಧಿಸಿದ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಸ್ಥಳೀಯ ಜನಪ್ರತಿನಿಧಿ ಗಳು, ಶಾಸಕರು ಹಾಗೂ ಅ ಧಿಕಾರಿಗಳು ಈ ರಸ್ತೆಯ ದುರಸ್ತಿ ಬಗ್ಗೆ ಕೂಡಲೇ ಚಿಂತನೆ ನಡೆಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮಳೆಗಾಲಕ್ಕೆ
ತಾತ್ಕಾಲಿಕ ದುರಸ್ತಿ
ಪಂಚಾಯತ್ ಅನುದಾನದಲ್ಲಿ ರಸ್ತೆ ದುರಸ್ತಿ ಕಷ್ಟಸಾಧ್ಯ. ಜಿ.ಪಂ. ಅಥವಾ ಶಾಸಕರ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಮಳೆಗಾಲಕ್ಕೂ ಮುನ್ನ ತಾತ್ಕಾಲಿಕ ರಸ್ತೆ ದುರಸ್ತಿ ಮಾಡಲಾಗುವುದು.
-ಪ್ರಕಾಶ್, ಪಿಡಿಒ, ಬೆಳ್ಮಣ್ ಗ್ರಾ.ಪಂ.
ಕ್ರಮ ಕೈಗೊಳ್ಳಿ
ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡ ಗುಂಡಿಗಳಿರುವ ಪರಿಣಾಮ ಸಣ್ಣ ಪುಟ್ಟ ವಾಹನಗಳ ಸಂಚಾರವೂ ಕಷ್ಟ ಸಾಧ್ಯ. ರಸ್ತೆ ದುರಸ್ತಿ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
-ಅವಿನಾಶ್,ಸ್ಥಳೀಯರು
-ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.