ಸೂರ್ಗೋಳಿ ಶಾಲೆ : ಊರವರಿಂದ ತರಕಾರಿ ತೋಟ ನಿರ್ಮಾಣ
Team Udayavani, Jul 22, 2019, 5:15 AM IST
ಕುಂದಾಪುರ: ಸೂರ್ಗೋಳಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ರವಿವಾರ ಎಸ್.ಡಿ.ಎಂ.ಸಿ. ಮತ್ತು ಪೋಷಕರ ಪರಿಷತ್ತು, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಸಹಕಾರದಲ್ಲಿ ನಮ್ಮ ಶಾಲೆ ನಮ್ಮ ತೋಟ ಯೋಜನೆಯಲ್ಲಿ ನೂತನ ತರಕಾರಿ ತೋಟ ನಿರ್ಮಾಣ ಮಾಡಲಾಯಿತು.
ಸುಮಾರು 5 ಸೆಂಟ್ಸ್ ಸ್ಥಳವನ್ನು ಉಳುಮೆ ಮಾಡಿ ಜೈವಿಕ ಬೇಲಿ ರಚಿಸಲಾಯಿತು. ಬದನೆ, ಬೆಂಡೆ, ಹೀರೆ, ಸುವರ್ಣ, ಸೋರೆ ಗಿಡಗಳನ್ನು ನೆಡಲಾಯಿತು. ಪೋಷಕರು ಸ್ವಯಂಸೇವಕರಾಗಿ ತೋಟವನ್ನು ನಿರ್ಮಿಸಿದರು.ಕುಂದಾಪುರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ಸಂಜೀವ ನಾಯ್ಕ ಗಿಡ ನೀಡುವುದರ ಮೂಲಕ ಚಾಲನೆ ನೀಡಲಾಯಿತು.
ತಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಶೆಟ್ಟಿ, ರಮೇಶ್ ಹಾಲಂಬಿ, ನಾಗರಾಜ್ ನಕ್ಕತ್ತಾಯ, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.
ಪ್ರಕಾಶ್ ಅಲ್ಸೆ ಬೇಲಿ ಸಾಮಗ್ರಿಗಳನ್ನು, ಶೇಖರ್ ನಾಯ್ಕ ಸೆಟ್ಟೊಳ್ಳಿ ಪೈಪ್ ಲೈನ್ ಕೊಡುಗೆ, ಎಸ್‌ಡಿಎಂಸಿ ಅಧ್ಯಕ್ಷ ಬಾಬಣ್ಣ ಸೂರ್ಗೋಳಿ ಮತ್ತು ಸೂರ್ಯ ನಾಯ್ಕ ಸಾಗಾಟ ವೆಚ್ಚ, ಚಂದ್ರ ಶೇಖರ ನಾಯ್ಕ ಗೊಬ್ಬರವನ್ನು ಕೊಡುಗೆಯಾಗಿ ನೀಡಿದರು.
ಪೋಷಕರಾದ ಕೃಷ್ಣ ನಾಯ್ಕ, ಸದಾಶಿವ, ಚಂದ್ರ ನಾಯ್ಕ, ನಾರಾಯಣ ನಾಯ್ಕ, ಸತೀಶ್, ಬಾಬಣ್ಣ ನಾಯ್ಕ, ಕೃಷ್ಣ ನಾಯ್ಕ, ಮೋಹನ್ ನಾಯ್ಕ, ವೆಂಕಟೇಶ್ ನಾಯ್ಕ, ಲಕ್ಷ್ಮಣ ನಾಯ್ಕ, ಸಂಜೀವ ನಾಯ್ಕ, ಪುಟ್ಟಯ್ಯ ನಾಯ್ಕ, ಸುರೇಶ್ ನಾಯ್ಕ ಮತ್ತಿತರರು ಭಾಗಿಯಾದರು.
ಶಿಕ್ಷಕರಾದ ದೇವ ನಾಯ್ಕ, ಶ್ರೀನಿವಾಸ್, ನಾಗರತ್ನ, ವನಿತಾ, ಆಶಾ ಸಹಕರಿಸಿದರು. ಮುಖ್ಯ ಶಿಕ್ಷಕ ಸದಾನಂದ ನಾಯಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್ ಸ್ಟಾರ್
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.