ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಶ್ವಾನ ಉಡುಪಿಯಲ್ಲಿ…
Team Udayavani, Nov 4, 2022, 7:30 PM IST
ಉಡುಪಿ: ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಶ್ವಾನ ರೊಡೇಷನ್ ರಿಡ್ಜ್ ಬ್ಯಾಕ್ ಈಗ ಉಡುಪಿಯ ಬ್ರಹ್ಮಗಿರಿಯಲ್ಲಿದೆ. ದಕ್ಷಿಣಾ ಆಫ್ರಿಕಾದಲ್ಲಿ ಶಿಕಾರಿ ಹಾಗೂ ಕಾವಲು ಕಾಯಲು ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.
ಭಾರತ ದೇಶದಲ್ಲಿಯೇ ಬೆರಳೆಣಿಕೆ ಸಂಖ್ಯೆಯಲ್ಲಿರುವ ಈ ಶ್ವಾನವನ್ನು ಬ್ರಹ್ಮಗಿರಿಯ ವಿಶ್ವನಾಥ ಕಾಮತ್ ಹಾಗೂ ಪ್ರಿಯಾ ಕಾಮತ್ ದಂಪತಿ ಚೆನ್ನೈಯ ಶ್ವಾನಪ್ರಿಯರೊಬ್ಬರಿಂದ 1.10 ಲ.ರೂ. ಪಾವತಿಸಿ ಖರೀದಿಸಿದ್ದಾರೆ. ಈಗಾಗಲೇ ಇವರ ಮನೆಯಲ್ಲಿ ಡಾಬರ್‌ಮನ್, ಅಮೆರಿಕನ್ ಬುಲ್ಲಿ, ಲ್ಯಾಬ್ರೆಡರ್, ಪಗ್ ತಳಿಯ ಒಟ್ಟು 9 ಶ್ವಾನಗಳಿವೆ. ಇದಕ್ಕಾಗಿ ದಿನನಿತ್ಯ ಅವರು 1 ಸಾವಿರ ರೂ.ಗಳನ್ನು ವ್ಯಯಿಸುತ್ತಾರಂತೆ.
ಸಿಂಹವನ್ನು ಕೊಲ್ಲುವ ತಾಕತ್ತು
ಇದು ಅಪಾಯಕಾರಿ ಶ್ವಾನವಾಗಿದ್ದು, ಏಕಕಾಲದಲ್ಲಿ ನಾಲ್ಕು ಶ್ವಾನಗಳು ಸೇರಿದರೆ ಒಂದು ಸಿಂಹವನ್ನು ಕೊಲ್ಲುವಷ್ಟು ತಾಕತ್ತು ಹೊಂದಿದೆ. ಈ ಶ್ವಾನದ ಭುಜದಿಂದ ಸೊಂಟದವರೆಗೆ ಪಟ್ಟಿ ಹೊಂದಿದೆ. ಕರಾವಳಿ ಕ್ಯಾನಲ್‌ನಲ್ಲಿ ಸರ್ಟಿಫೈಡ್ ಪಡೆದ ಶ್ವಾನ ಇದಾಗಿದೆ. ಕನಿಷ್ಠ 9ರಿಂದ 13 ವರ್ಷಗಳ ಕಾಲ ಇದು ಬದುಕುತ್ತದೆ.
ಚಾಂಪಿಯನ್ ಮಾಡುವ ಹಂಬಲ
ಈ ನಾಯಿಯನ್ನು ಮಾಲಕರು ಚಾಂಪಿಯನ್ ಮಾಡಿಸುವ ಉದ್ದೇಶ ಹೊಂದಿದ್ದಾರೆ. 8 ವರ್ಷಗಳ ಹಿಂದೆ ಇವರೇ ಸಾಕಿದ ಡಾಮರ್‌ಮನ್ ನ್ಯಾಶನಲ್ ಲೆವೆಲ್ ಚಾಂಪಿಯನ್ ಆಗಿತ್ತು.
ಮಕ್ಕಳಂತೆ ಸಾಕುತ್ತಿದ್ದೇವೆ
ಈ ಶ್ವಾನವನ್ನು ಮನೆಯ ಮಕ್ಕಳಂತೆ ಸಾಕಿ ಸಲಹುತ್ತಿದ್ದೇವೆ. ಪ್ರಸ್ತುತ ಇರುವ ಶ್ವಾನಗಳೂ ಯಾವುದೇ ಹಾನಿ ಮಾಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನೂ ಮನೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಶ್ವಾನಗಳ ಬಗೆಗೆ ಹಲವಾರು ಸ್ಟಾಂಪ್‌ಗ್ಳನ್ನೂ ಸಂಗ್ರಹಿಸಿದ್ದೇವೆ.
-ವಿಶ್ವನಾಥ ಕಾಮತ್, ಪ್ರಿಯಾ ಕಾಮತ್, ಶ್ವಾನದ ಮಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.