ಮಣೂರಿನಲ್ಲಿ ಮನಸೆಳೆಯುವ ಭತ್ತದ ತಿರಿ


Team Udayavani, Nov 22, 2017, 2:36 AM IST

Tiri-1.jpg

ದಶಕಗಳ ಹಿಂದೆ ಕರಾವಳಿಗರಿಗೆ ಕೃಷಿಯೇ ಮೂಲ ಕಸುಬಾಗಿದ್ದ ಸಂದರ್ಭ ಬೆಳೆದ ಭತ್ತವನ್ನು ಜೋಪಾನವಾಗಿಡುವ ಸಲುವಾಗಿ ಮನೆಯ ಮುಂದೆ ದೊಡ್ಡದಾದ ಭತ್ತದ ತಿರಿ ನಿರ್ಮಿಸಲಾಗುತಿತ್ತು. ಆದರೆ ಇದೀಗ ಆಧುನಿಕರಣದ ಪರಿಣಾಮ ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಬೆಳೆದ ಬೆಳೆಯನ್ನು ನೇರವಾಗಿ ಗದ್ದೆಯಿಂದಲೇ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಭತ್ತದ ತಿರಿ ಎಲ್ಲಾ ಕಡೆ ಮಾಯವಾಗಿದೆ. ಆದರೆ ಕೋಟ ಮಣೂರಿನ ಪ್ರಗತಿಪರ ಕೃಷಿಕ ನರಸಿಂಹ ಅಡಿಗ ಹಾಗೂ ಅವರ ಮಗ ಶಿವಾನಂದ ಅಡಿಗರು ಎಷ್ಟೇ ಕಷ್ಟವಾದರು ತನ್ನ ಹಿಂದಿನವರು ಮಾಡಿಕೊಂಡ ಬಂದ ಕೃಷಿ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಮನೆಯ ಮುಂದೆ
ಬೃಹತ್‌ ಗಾತ್ರದ ತಿರಿಯನ್ನು ಇಂದಿಗೂ ನಿರ್ಮಿಸುತ್ತಿದ್ದಾರೆ.

ಈ ಬಾರಿ ಭಾರೀ ಗಾತ್ರದ ತಿರಿ
ನರಸಿಂಹ ಅಡಿಗರ ಮನೆಯಲ್ಲಿ ಈ ಬಾರಿ 600ಮುಡಿ (180) ಕ್ವಿಂಟಾಲ್‌ ಭತ್ತವನ್ನು ಬಳಸಿ, 10ಪೀಟ್‌ ಉದ್ದ, 46ಪೀಟ್‌ ಸುತ್ತಳತೆಯ ಭಾರೀ ಗಾತ್ರದ ತಿರಿಯನ್ನು ನ.18ರಂದು ನಿರ್ಮಿಸಲಾಯಿತು. 10ಮಂದಿ ಕೆಲಸದವರು ಹಾಗೂ 40ಮಂದಿ ಕೃಷಿಯಲ್ಲಿ ಆಸಕ್ತಿ ಹೊಂದಿದ ರೈತರು ಇದರ ನಿರ್ಮಾಣದಲ್ಲಿ ಸ್ವಯಂ ಸೇವಕರಾಗಿ ಕೈಜೋಡಿಸಿದರು ಹಾಗೂ ಇದಕ್ಕಾಗಿ ಪರಿಸರದ ಐದು ಮಂದಿ ರೈತರ ಭತ್ತವನ್ನು ಸಂಗ್ರಹಿಸಲಾಯಿತು. ಮುಂದಿನ ತಲೆಮಾರಿಗೆ ದಾಖಲೆಯಾಗಿಡುವ  ಸಲುವಾಗಿ ಸಂಪೂರ್ಣ ದಾಖಲೀಕರಣ ಮಾಡಲಾಯಿತು.


ತಿರಿ ನಿರ್ಮಿಸುವ ವಿಧಾನ 

ಭತ್ತದ ತಿರಿಯನ್ನು ನಿರ್ಮಿಸಲು ಪ್ರಾವೀಣ್ಯತೆ ಅಗತ್ಯ ಹಾಗೂ ಇದು ಸಂಪೂರ್ಣ ಬೈಹುಲ್ಲಿನಿಂದ ನಿರ್ಮಾಣವಾಗುತ್ತದೆ. ಮೊದಲಿಗೆ ಹುಲ್ಲಿನಿಂದ ಅಡಿಪಾಯ ನಿರ್ಮಿಸಿಕೊಂಡು ಅನಂತರ ಉದ್ದನೆಯ ಬೈಹುಲ್ಲನ್ನು ಮೇಲ್ಮುಖವಾಗಿ ಜೋಡಿಸಲಾಗುತ್ತದೆ ಹಾಗೂ ಬೈಹುಲ್ಲಿನಿಂದ ತಯಾರಿಸಿದ ಹಗ್ಗವನ್ನು ವೃತ್ತಾಕರವಾಗಿ ಸುತ್ತಿ ಮಧ್ಯ ಭಾಗದಲ್ಲಿ ಭತ್ತವನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಇದರ ಅಡಿ ಭಾಗಕ್ಕೆ ಭತ್ತದ ಹೊಟ್ಟನ್ನು ಹಾಕಿ ಅದರ ಮೇಲೆ ಭತ್ತವನ್ನು ಸುರಿಯಲಾಗುತ್ತದೆ. ತಲೆಯ ಭಾಗಕ್ಕೆ ಹುಲ್ಲಿನಿಂದ ಹೊಡಿಕೆ ನಿರ್ಮಿಸಲಾಗುತ್ತದೆ ಹಾಗೂ ಬುಡಕ್ಕೆ ಮಣ್ಣನ್ನು ಮೆತ್ತಲಾಗುತ್ತದೆ. ಕೊನೆಯದಾಗಿ ರಥದಾಕಾರದ ಆಕರ್ಷಕ ತಿರಿ ಸಿದ್ಧಗೊಳ್ಳುತ್ತದೆ.  ಹೀಗೆ ನಿರ್ಮಿಸಿದ ಭತ್ತದ ತಿರಿ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.


ಭತ್ತಕ್ಕೆ ಭದ್ರತೆ

ತಿರಿಯೊಳಗೆ ಸಂರಕ್ಷಿಸಲ್ಪಟ್ಟ ಭತ್ತ ವರ್ಷ ಕಳೆದರೂ ಹಾಳಾಗುವುದಿಲ್ಲ ಹಾಗೂ ಅದರ ಒಳಗೆ ಸಣ್ಣ ಇರವೆ ಕೂಡ ಪ್ರವೇಶವಾಗದಷ್ಟು ಭದ್ರತೆ ಇರುತ್ತದೆ. ಬೆಲೆ ಕುಸಿತ ಮುಂತಾದ ಸಂದರ್ಭದಲ್ಲಿ ಸಂಗ್ರಹಕ್ಕೆ ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಬದಲಾದ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ, ಆಚರಣೆಗಳು ಬದಲಾಗುತ್ತಿರುವ ಸಂದರ್ಭ ಭತ್ತದ ತಿರಿಗಳು ಪ್ರದರ್ಶನದ ವಸ್ತುಗಳಾಗಿ ಮಾರ್ಪಟ್ಟಿದೆ. ಮೊದಲು 
ಪ್ರತಿ ಮನೆಗಳಲ್ಲಿ ಕಾಣಸಿಗುತ್ತಿದ್ದು ತಿರಿ ಇದೀಗ ನಾಲ್ಕಾರು ಗ್ರಾಮಗಳನ್ನು ಹುಡುಕಿದರು ಕಾಣದಾಗಿದೆ. ಇಂತಹ ಸಂದರ್ಭ ನರಸಿಂಹ ಅಡಿಗ ಹಾಗೂ ಶಿವಾನಂದ ಅಡಿಗರು ಸಾವಿರಾರು ರೂ ವ್ಯಯಿಸಿ 600ಮುಡಿ ತಿರಿ ನಿರ್ಮಿಸಿರುವುದು ದಾಖಲೆಯಾಗಿದೆ.

ತಿರಿ ನೋಡಿ ಹೆಣ್ಣು  ಕೊಡುತ್ತಿದ್ದರು ! 
ಹಿಂದೆ ತಿರಿ ಎನ್ನುವಂತಹದ್ದು ವ್ಯಕ್ತಿಯ ಗೌರವದ ಪ್ರತೀಕವಾಗಿತ್ತು ಹಾಗೂ ಶ್ರೀಮಂತಿಕೆ ಅಳೆಯಲು ಮಾಪನವಾಗಿತ್ತು. ಹೆಣ್ಣು – ಗಂಡಿನ ಸಂಬಂಧ ಬೆಸೆಯುವ ಸಂದರ್ಭ ಮನೆಯ ಮುಂದಿನ ತಿರಿ, ಬೈಹುಲ್ಲಿನ ಕುತ್ತರಿಗಳನ್ನು  ನೋಡಿ ಹೆಣ್ಣು ಕೊಡುವ ಸಂಪ್ರದಾಯ ಇತ್ತು. ಆದರೆ ದುಬಾರಿ ವೆಚ್ಚ ತಗಲುವುದರಿಂದ ಹಾಗೂ ಕಾರ್ಮಿಕರ ಕೊರತೆಯಿಂದ ಇದನ್ನು ನಿರ್ಮಿಸುವವರ ಸಂಖ್ಯೆ  ಇದೀಗ ತುಂಬಾ ಕ್ಷೀಣಿಸಿದೆ.


ಹಿಂದೆ ಭತ್ತದ ತಿರಿ ರೈತನ ಪ್ರತಿಷ್ಠೆಯ ಸಂಕೇತವಾಗಿತ್ತು. ಭತ್ತವನ್ನು ಹಾಳಾಗದಂತೆ ಸಂಗ್ರಹಿಸಲು ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಇದೀಗ ಆಧುನೀಕರಣದ ಪರಿಣಾಮ ಭತ್ತದ ತಿರಿ, ಹುಲ್ಲು ಕುತ್ತರಿ, ಮೇಟಿ ಕಂಬ ಎಲ್ಲವೂ ಮಾಯವಾಗಿದೆ. ನಮ್ಮ ಮುಂದಿನ ಜನಾಂಗಕ್ಕೆ  ಇದನ್ನು ಪರಿಚಯಿಸಬೇಕು ಎನ್ನುವ  ಉದ್ದೇಶದಿಂದ  ನಮ್ಮ ಮನೆಯಲ್ಲಿ ಪ್ರತಿ ವರ್ಷ ಸಾವಿರಾರು ರೂ ಖರ್ಚು ಮಾಡಿ ತಿರಿ ನಿರ್ಮಿಸ್ತುತೇವೆ. ಈ ಬಾರಿ ದಾಖಲೀಕರಣಗೊಳಿಸುವ ಸಲುವಾಗಿ 5ಮಂದಿ ರೈತರಿಂದ ಭತ್ತ ಸಂಗ್ರಹಿಸಿ 600ಮುಡಿ ತಿರಿ ನಿರ್ಮಿಸಿದ್ದೇವೆ.
– ಶಿವಾನಂದ ಅಡಿಗ ಮಣೂರು,  ಕೃಷಿಕ

-ರಾಜೇಶ ಗಾಣಿಗ ಅಚ್ಲಾಡಿ, ಕೋಟ


ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.