ಅಂಗವಿಕಲರಿಗಾಗಿಯೇ ವಿಶೇಷ ಮತಗಟ್ಟೆ
Team Udayavani, May 6, 2018, 6:20 AM IST
ಉಡುಪಿ: ಈ ಬಾರಿ ಚುನಾವಣೆಯಲ್ಲಿ ಅಂಗವಿಕಲರು ಮತ್ತು ಅಶಕ್ತರ ಬಗ್ಗೆ ವಿಶೇಷ ಗಮನ ಹರಿಸಲಾಗಿದ್ದು, ಅಂಗವಿಕಲ ಮತಗಟ್ಟೆ ಅಧಿಕಾರಿಗಳೇ ಉಳ್ಳ ವಿಶೇಷ ಮತಗಟ್ಟೆಗಳು ಸ್ಥಾಪನೆಯಾಗಲಿವೆ.
ಗಾಲಿಕುರ್ಚಿ ವ್ಯವಸ್ಥೆ
ಸಾಮಾನ್ಯವಾಗಿ ಒಂದು ಕಟ್ಟಡದಲ್ಲಿ (ಮತದಾನ ಕೇಂದ್ರ) 2-3 ಮತಗಟ್ಟೆಗಳಿರುತ್ತವೆ. ಅಂತಹ ಮೂರು ಮತಗಟ್ಟೆಗಳಿಗೆ ಕನಿಷ್ಠ ಒಂದರಂತೆ 551ರಷ್ಟು ಗಾಲಿಕುರ್ಚಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆರೋಗ್ಯ ಇಲಾಖೆ 376, ಗ್ರಾ.ಪಂ.ಗಳು 175 ಗಾಲಿಕುರ್ಚಿಗಳನ್ನು ಹೊಂದಿಸಿಕೊಂಡಿವೆ. ಉಳಿದಂತೆ ಸುಮಾರು 175 ಗಾಲಿಕುರ್ಚಿ ಅವಶ್ಯವಿದೆ. ಅದನ್ನು ಮತದಾನದಿನ ಹೊಂದಿಸಿಕೊಳ್ಳಲಾಗುತ್ತದೆ.
328 ಬೂತ್‌ಗಳಲ್ಲಿ ಭೂತಗನ್ನಡಿ
ಮಂದ ದೃಷ್ಟಿಯುಳ್ಳವರು ಮತದಾನ ಮಾಡಲು ನೆರವಾಗುವಂತೆ ಜಿಲ್ಲೆಯ 328 ಬೂತ್‌ಗಳಲ್ಲಿ ಭೂತಗನ್ನಡಿ ಸಿದ್ಧಪಡಿಸಿ ಇಡಲಾಗುತ್ತದೆ.
ಬ್ರೈಲ್ ಲಿಪಿಯಲ್ಲಿ ಕ್ರಮಸಂಖ್ಯೆ
ಜಿಲ್ಲೆಯಲ್ಲಿ ಸುಮಾರು 580 ಮಂದಿ ಮಂದ ದೃಷ್ಟಿಯ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಒಂದು ಬೂತ್‌ನಲ್ಲಿ ಒಂದು ಭೂತಗನ್ನಡಿ ಇರುತ್ತದೆ. ಶೇ.100ರಷ್ಟು ಅಂಧತ್ವ ಹೊಂದಿರುವವರು ಸಹಾಯಕರ ನೆರವಿನಿಂದ ಮತದಾನ ಮಾಡಬಹುದು. ಬ್ರೈಲ್ ಲಿಪಿ ತಿಳಿದಿದ್ದರೆ ಅವರಾಗಿಯೇ ಸ್ವತಃ ಮತ ಹಾಕಬಹುದು. ಮತಯಂತ್ರದ ಕ್ರಮಸಂಖ್ಯೆ ಬ್ರೈಲ್ ಲಿಪಿಯಲ್ಲಿಯೂ ಇರಲಿದೆ.
ಜಿಲ್ಲೆಯಲ್ಲಿ ಒಂದು ಮತಗಟ್ಟೆ
ದೈಹಿಕ ಊನತೆ ಹೊಂದಿರುವವರು, ದೃಷ್ಟಿ, ಶ್ರವಣದೋಷ ಇತ್ಯಾದಿ ಹೊಂದಿದವರನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಒಂದು ಮತಗಟ್ಟೆ ಸಿದ್ಧಪಡಿಸಲಾಗುತ್ತದೆ.
ಇದಕ್ಕಾಗಿ ಕುಂದಾಪುರ ತೆಕ್ಕಟ್ಟೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಸಾಮಾನ್ಯರು ಕೂಡ ಮತದಾನ ಮಾಡಬಹುದು.
ಮತಗಟ್ಟೆಗೂ ಅಂಗವಿಕಲ ಅಧಿಕಾರಿಗಳು
ಸದ್ಯ ಗುರುತಿಸಲಾದ ವಿಶೇಷ ಮತಗಟ್ಟೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 22 ಮಂದಿ ಅಂಗವಿಕಲ ಮತದಾರರಿದ್ದಾರೆ ಎಂದು ಗುರುತಿಸಲಾಗಿದೆ. ಇಲ್ಲಿ 4 ಮಂದಿ ಅಂಗವಿಕಲರೇ ಮತಗಟ್ಟೆ ಅಧಿಕಾರಿ, ಓರ್ವ ಸಿಬಂದಿ ಇರಲಿದ್ದಾರೆ.
ಏನೇನು ವ್ಯವಸ್ಥೆ?
ಅಶಕ್ತರಿಗಾಗಿ ಇರುವ ಮತಗಟ್ಟೆಯಲ್ಲಿ ಶೌಚಾಲಯ, ರ್‍ಯಾಂಪ್, ಗಾಲಿಕುರ್ಚಿ, ವಾಕರ್, ಸ್ಟಿಕ್ ಇತ್ಯಾದಿ ಸಿದ್ಧವಿರು ತ್ತವೆ. ವಿಕಲಚೇತನ ಅಧಿಕಾರಿ ಮತ್ತು ಸಿಬಂದಿ ಅದೇ ಮತಗಟ್ಟೆಯಲ್ಲಿ ಉಳಿದುಕೊಳ್ಳಬೇಕಾಗಿ ಬಂದರೆ ಅದಕ್ಕೆ ಪೂರಕವಾಗಿ ಬೆಡ್ ವ್ಯವಸ್ಥೆ ಕೂಡ ಮಾಡಿಕೊಡಲಾಗುತ್ತದೆ.
ಜಿಲ್ಲೆಯಲ್ಲಿರುವ ಅಶಕ್ತ ಮತದಾರರು
ಬೈಂದೂರು :1786
ಕುಂದಾಪುರ: 2143
ಕಾಪು: 1316
ಉಡುಪಿ: 1390
ಕಾರ್ಕಳ: 1419
– ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.