ಮಳೆ ಹಾನಿ: ನಗರಸಭೆ ಹೇಗೆ ಕೆಲಸ ಮಾಡಿತ್ತು?
Team Udayavani, Jun 1, 2018, 2:15 AM IST
ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಲೋಪವಾಗಿದೆಯೇ?
– ಇಲ್ಲ. ಜಿಲ್ಲಾಡಳಿತದ ನಿರ್ದೇಶನದಂತೆ ನಗರಸಭೆ ಎಲ್ಲ ಸಿದ್ಧತೆಗಳನ್ನೂ ಮಾಡಿ ಕೊಂಡಿತ್ತು. ಮೂರು ತಂಡಗಳು ಕಾರ್ಯಾಚರಣೆಯಲ್ಲಿವೆೆ. ಮಳೆಯ ಪ್ರಮಾಣ ಹೆಚ್ಚಿದ್ದ ಕಾರಣ ಸ್ವಲ್ಪ ಸಮಸ್ಯೆ ಎದುರಾಯಿತು.
ಚರಂಡಿ ನಿರ್ವಹಣೆ ಅವ್ಯವಸ್ಥೆಯಿಂದ ಸಮಸ್ಯೆಯಾಯಿತೇ?
– ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಚರಂಡಿ ನಿರ್ವಹಣೆ ಮಾಡಲಾಗಿತ್ತು. ಕೆಲವೆಡೆಗಳಲ್ಲಿ ಪದೇ ಪದೇ ಹೂಳು ತುಂಬಿ ಸಮಸ್ಯೆಯಾಗಿದೆ. ನಗರಸಭೆ ಸಮಾರೋ ಪಾದಿಯಲ್ಲಿ ಕೆಲಸ ಮಾಡಿದೆ.
ಗಂಭೀರ ಸಮಸ್ಯೆ ಉದ್ಭವಿಸಿದೆಯೇ?
– ಅಂತಹ ಗಂಭೀರ ಸಮಸ್ಯೆಯಾಗಿಲ್ಲ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ತೋಡುಗಳ ಸಮೀಪದಲ್ಲಿದ್ದ ಮನೆಗಳಿಗೆ ಹೋಗಿದೆ. ಮಳೆ ಕಡಿಮೆಯಾದ ಅನಂತರ ಸರಿಯಾಗಿದೆ.
ತುರ್ತು ಪರಿಹಾರ ನೀಡಲಾಗಿದೆಯೇ?
– ಮನೆ ಮೇಲೆ ಮರ ಬಿದ್ದು ಹಾನಿಯಾಗಿರುವುದಕ್ಕೆ ಸಂಬಂಧಿಸಿ ಅರ್ಜಿ ಕೊಟ್ಟರೆ ನಗರಸಭೆಯಿಂದ ಪರಿಹಾರ ಕೊಡುತ್ತೇವೆ. 2-3 ಅರ್ಜಿ ಬಂದಿದೆ. ಇನ್ನು ಮುಂದಕ್ಕೆ ಅರ್ಜಿಗಳು ಬರಬಹುದು.
ಒಳಚರಂಡಿ ಅವ್ಯವಸ್ಥೆ ಇತ್ತೇ?
– ಒಳಚರಂಡಿ ಅಂತಹ ಗಂಭೀರ ಸಮಸ್ಯೆ ಇರಲಿಲ್ಲ. ಪಂಪ್ ಹಾಳಾದಾಗ ಸ್ವಲ್ಪ ತೊಂದರೆಯಾಗುತ್ತದೆ. ಉಳಿದಂತೆ ಏನೂ ಸಮಸ್ಯೆಯಾಗಿಲ್ಲ.
ಸಹಾಯವಾಣಿ
ಬ್ರಹ್ಮಾವರ: ಜಿಲ್ಲಾ ವ್ಯಾಪ್ತಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗೆ 24×7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಅದರಂತೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯವರು ಕಚೇರಿ ದೂ: 0820-2560494 ಸಂಪರ್ಕಿಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.