ಏಕಕಾಲದಲ್ಲಿ 90 ಮಂದಿ ಕಲಾವಿದರಿಂದ ವೀಣಾವಾದನ
Team Udayavani, Jul 2, 2018, 3:30 AM IST
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣ ರವಿವಾರ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಕರಾವಳಿಯಲ್ಲಿ ಪ್ರಥಮ ಬಾರಿಗೆ ಎಂಬಂತೆ ಏಕಕಾಲದಲ್ಲಿ 90 ವೀಣೆಗಳ ವಾದನ ಉಡುಪಿಯಲ್ಲಿ ಅಪೂರ್ವ ಸಂಗೀತ ಲೋಕವನ್ನು ಸೃಷ್ಟಿಸಿತು. ಪರ್ಯಾಯ ಶ್ರೀ ಪಲಿಮಾರು ಹೃಷಿಕೇಷ ಮಠ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಮಣಿಪಾಲದ ಡಾ| ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಾಜಾಂಗಣದಲ್ಲಿ ‘ಕಲಾಸ್ಪಂದನ’ ಮಣಿಪಾಲದ 23ನೇ ವಾರ್ಷಿಕೋತ್ಸವ ಪ್ರಯುಕ್ತ ‘ವೀಣಾ ವೃಂದ’ ಜರಗಿತು.
11 ವರ್ಷದ ಬಾಲಕ ಬಾಲಕಿಯರಿಂದ ಹಿಡಿದು 68 ವರ್ಷದ ಹಿರಿಯ ವೀಣಾ ವಾದಕಿಯವರೆಗೆ ವಿವಿಧ ವಯೋಮಾನದ ವೀಣಾ ವಾದಕರು ಸಂಗೀತ ಸುಧೆ ಹರಿಸಿದರು. 13 ಮಂದಿ ಪುರುಷರು, 77 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು. ವೀಣಾ ವಿದ್ಯಾರ್ಥಿಗಳ ಜತೆ ವೀಣಾ ವಿದ್ವತ್ ಪಡೆದವರ ಸಮಾಗಮವೂ ಆಯಿತು. ವೈದ್ಯರು, ಎಂಜಿನಿಯರ್ ಗಳು ಕೂಡ ಇದ್ದರು. ಅಂಧ ವೀಣಾ ವಾದಕಿ ವಿದುಷಿ ಅರುಣಾ ಕುಮಾರಿ ಕೂಡ ತಂಡದಲ್ಲಿದ್ದರು. ವಿಪಂಚಿ ಬಳಗದ ಪವನ ಅವರು ವೀಣಾ ವೃಂದದ ನೇತೃತ್ವ ವಹಿಸಿದ್ದರು.
‘ತುಳಸಿದಳ’ಗಳಾಗಿ ನಾದನಮನ
ಪರ್ಯಾಯ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನಿಗೆ ನಿತ್ಯ ಲಕ್ಷ ತುಳಸಿ ಅರ್ಚನೆ ಮಾಡುತ್ತಿದ್ದಾರೆ. ತುಳಸಿಗೆ ವಿಶೇಷ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ‘ವೀಣಾವೃಂದ’ ಕಾರ್ಯಕ್ರಮದಲ್ಲಿ ಕೂಡ 90 ಮಂದಿಯೂ ಹಸಿರು ಬಟ್ಟೆಯನ್ನು ತೊಟ್ಟು ‘ತುಳಸಿದಳ’ಗಳಾಗಿ ಒಂದೂವರೆ ಗಂಟೆ ಕಾಲ ನಾದ ಹೊಮ್ಮಿಸಿ ನೆರೆದ ಸಾವಿರ ಮಂದಿಯ ಮನಗೆದ್ದರು. ಶ್ರೀಕೃಷ್ಣನಿಗೆ ನಾದ ನಮನ ಸಮರ್ಪಿಸಿದರು. ತ್ಯಾಗರಾಜರ ‘ತುಳಸೀ ದಳ’, ಪುರಂದರದಾಸರು, ಜಗನ್ನಾಥ ದಾಸರು ರಚಿಸಿದ ದಾಸರ ಪದಗಳು, ದ್ವಾದಶ ಸ್ತೋತ್ರ, ವಾದಿರಾಜರ ಶ್ಲೋಕಗಳನ್ನು ನುಡಿಸಲಾಯಿತು. ಡಾ| ಬಾಲಚಂದ್ರ ಆಚಾರ್ ಮತ್ತು ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.