ವರುಷ ಕಳೆದರೂ ಸುನೀಲ್ ಸಂಬಧಿಕರ ಪತ್ತೆ ಇಲ್ಲ
Team Udayavani, Nov 29, 2018, 2:10 AM IST
ಮಲ್ಪೆ: ಅಪಘಾತದಲ್ಲಿ ತೀವ್ರ ಜಖಂಗೊಂಡು ಚಿಕಿತ್ಸೆಗೆ ಸ್ಪಂದಿಸದೇ ನೇಜಾರಿನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಸುನೀಲ್ (32) ಎಂಬಾತನನ್ನು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಅವರು ವರ್ಷದ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಮಾನವೀಯತೆ ತೋರದಿದ್ದಲ್ಲಿ ಯುವಕನ ಜೀವಕ್ಕೆ ಅಪಾಯ ನಿಶ್ಚಿತವಾಗಿತ್ತು. ಆ ವೇಳೆಯಲ್ಲಿ ಅವರು ಸಂಬಂಧಿಕರ ಪತ್ತೆಗೆ ಮಾಧ್ಯಮ ಪ್ರಕಟನೆ ನೀಡಿದ್ದರೂ ಸಂಬಂಧಿಕರಾರೂ ಬಂದಿರಲಿಲ್ಲ. ಚಿಂತಾಜನಕ ಸ್ಥಿತಿಯಲ್ಲಿದ್ದ ಆ ಯುವಕನನ್ನು ವಿಶು ಶೆಟ್ಟಿ ಅವರು ತಾವೇ ಜವಾಬ್ದಾರಿ ಹೊತ್ತು ಆಸರೆಗಾಗಿ ಕುಂದಾಪುರದ ಖಾಸಗಿ ಆಶ್ರಮಕ್ಕೆ ದಾಖಲು ಮಾಡಿದ್ದರು.
ಆಶ್ರಮದಲ್ಲಿ ಯುವಕ ತಿಂಗಳೊಳಗಾಗಿ ಆರೋಗ್ಯದಲ್ಲಿ ಸುಧಾರಿಸಿಕೊಂಡು ಎದ್ದು ತಿರುಗಾಡಲು ಪ್ರಾರಂಭಿಸಿದ. ತನ್ನ ಕೆಲಸವನ್ನು ತಾನು ಮಾಡಿಕೊಳ್ಳುವಷ್ಟು ಸ್ವತಂತ್ರನಾದ. ಒಂಟಿ ಬದುಕು ಸಾಧ್ಯವಿಲ್ಲದೆ ತನ್ನ ಮಡದಿ, ಮಗುವಿನೊಂದಿಗೆ ಸೇರಲು ಹವಣಿಸುತ್ತಿದ್ದ ಆತ, ತನ್ನನ್ನು ಮಡದಿ ಮಗುವಿನೊಂದಿಗೆ ಸೇರಿಸುವಂತೆ ಶೆಟ್ಟಿ ಅವರಲ್ಲಿ ವಿನಂತಿಸುತ್ತಿದ್ದ, ಅದರಂತೆ ಅವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಲಿಖಿತ ಮನವಿ ಮಾಡಿದ್ದರು. ಆದರೆ ವರುಷ ಒಂದಾದರೂ ಸುನೀಲನ ಸಂಬಂಧಿಕರಾಗಲಿ, ಪತ್ನಿಯಾಗಲಿ ಸ್ಪಂದನೆ ನೀಡದೆ ಇರುವುದರಿಂದ ಸುನೀಲನ ಮುಂದಿನ ಭವಿಷ್ಯಕ್ಕಾಗಿ ವಿಶುಶೆಟ್ಟಿ ಅವರು ಇದೀಗ ಕಾನೂನಿನ ಮೊರೆ ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.