ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ

ಭಗವದನುಗ್ರಹ, ಹರಿಗುರುಗಳ ಆಶೀರ್ವಾದದಿಂದಾಗಿ ನಿರಂತರ ದೇವತಾ ಕಾರ್ಯ : ಶೀ ಸಂಯಮೀಂದ್ರ ತೀರ್ಥ ಸ್ವಾಮೀಜಿ

Team Udayavani, Dec 27, 2024, 9:20 PM IST

13

ಕಾಪು: ಗೌಡ ಸಾರಸ್ವತ ಸಮಾಜವು ದೇವತಾರಾಧನೆಗೆ ವಿಶೇಷ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದೆ. ಕಾಪು ಪೇಟೆಗೆ ವೆಂಕಟರಮಣ ದೇವರು ಇಷ್ಠದೇವರಾಗಿ, ಮಾರಿಯಮ್ಮ ದೇವಿಯು ಜಗನ್ಮಾತೆಯಾಗಿದ್ದಾಳೆ. ಭಗವದನುಗ್ರಹ ಮತ್ತು ಹರಿಗುರುಗಳ ಆಶೀರ್ವಾದದಿಂದಾಗಿ ಇಲ್ಲಿ ನಿತ್ಯ ನಿರಂತರವಾಗಿ ವಿವಿಧ ಜೀರ್ಣೋದ್ಧಾರಾ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ, ಇದು ಮುಂದುವರಿಯಲಿ ಎಂದು ಶ್ರೀ ಕಾಶೀ ಮಠಾಧಿಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ಹೇಳಿದರು.

ಕಾಪು ಪೇಟೆ ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ದಿ| ಡಾ| ಬಾಲಕೃಷ್ಣ ಭಟ್ ಹಾಗೂ ದಿ| ಸುಗುಣಾ ಭಟ್ ಅವರ ಸ್ಮರಣಾರ್ಥ ಅವರ ಮಕ್ಕಳಾದ ಡಾ| ನಾಗಾನಂದ ಭಟ್ ಮತ್ತು ಸಹೋದರರು ಸೇವಾ ರೂಪದಲ್ಲಿ ಸಮರ್ಪಿಸಿದ ನೂತನ ಭಂಡಿ ರಥ, ರಜತ ಗರುಡ ವಾಹನ ಮತ್ತು ಶೇಷ ವಾಹನವನ್ನು ಶುಕ್ರವಾರ ದೇವರಿಗೆ ಸಮರ್ಪಿಸಿ, ಬಳಿಕ ಅವರು ಆಶೀರ್ವಚನ ನೀಡಿದರು.

ದೇವರ ಸಾನಿಧ್ಯವೃದ್ಧಿ, ಜನರ ಉತ್ಸಾಹವೃದ್ಧಿಗೆ ಉತ್ಸವಗಳು ಅತೀ ಅವಶ್ಯಕವಾಗಿವೆ. ಭಗವಂತನು ರಥಾರೂಢವಾಗಿ ಸಂಚರಿಸುವಾಗ ಎಲ್ಲರ ಮೇಲೆ ದೇವರ ದೃಷ್ಠಿ ಬೀಳಲು ಸಾಧ್ಯವಿದೆ. ವೆಂಕಟರಮಣ ದೇವರು ಉತ್ಸವ ಪ್ರಿಯನಾಗಿದ್ದು ಗರುಡ ವಾಹನನಾಗಿ, ಶೇಷ ಶಯನನಾಗಿ ಸಂಚರಿಸುವ ಮೂಲಕ ಕಾಪು ಪೇಟೆ ಮತ್ತು ಸಮಾಜಕ್ಕೆ ಬಂದಿರುವ ದುರಿತಗಳನ್ನು ದೂರ ಮಾಡುತ್ತಾನೆ. ನೂತನ ಭಂಡಿ ರಥ, ರಜತ ಗರುಡ ಮತ್ತು ಶೇಷ ಶಯನ ಸಮರ್ಪಣೆಯ ಮೂಲಕ ಡಾ| ನಾಗಾನಂದ ಭಟ್ ಮತ್ತು ಸಹೋದರರು ದೇವರಿಗೆ ಅತ್ಯಂತ ಪ್ರಿಯವಾದ ಸೇವೆಯನ್ನು ಮಾಡಿದ್ದಾರೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಕಮಲಾಕ್ಷ ಭಟ್ ಮತ್ತು ವೈದಿಕ ವೃಂದದವರ ನೇತೃತ್ವದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ ಮತ್ತು ಶೇಷ ವಾಹನ ಸಮರ್ಪಣಾಪೂರ್ವಕ ಧಾರ್ಮಿಕ ವಿಽ ವಿಧಾನಗಳನ್ನು ನೆರವೇರಿಸಲಾಯಿತು.

ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಪ್ರಸಾದ್ ಗೋಕುಲ್‌ದಾಸ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋಕುಲದಾಸ್ ಆನಂದರಾಯ ಶೆಣೈ, ಕೋಶಾಽಕಾರಿ ಕೆ. ಲಕ್ಷ್ಮೀ ನಾರಾಯಣ ನಾಯಕ್, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್, ರಾಜೇಶ್ ಮಾಧವರಾಯ ಶೆಣೈ, ರಾಮ ಶಶಿಧರ ನಾಯಕ್, ಶ್ರೀಕಾಂತ್ ಲಕ್ಷ್ಮೀನಾರಾಯಣ ಭಟ್, ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ್ ಕಾಮತ್, ಮೋಹನದಾಸ್ ಕಿಣಿ, ಕೃಷ್ಣಾನಂದ ನಾಯಕ್, ರಾಜೇಶ್ ಶೆಣೈ ಮಜೂರು, ಸುನೀಲ್ ಪೈ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಲ್ಲೇಶ್ವರಂ ಕಾಶೀ ಮಠದ ಕಾರ್ಯದರ್ಶಿ ನಾರಾಯಣ ಶೆಣೈ, ಶಿರ್ವ ಮಹಾಲಸಾ ನಾರಾಯಣೀ ದೇವಸ್ಥಾನದ ಅರ್ಚಕ ವೇ| ಮೂ| ರವಿ ಭಟ್, ಮಹಾಲಸಾ ನಾರಾಯಣೀ ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ಶೆಣೈ, ಮೂಲ್ಕಿ ವೆಂಕಟರಮಣ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿ ಸದಸ್ಯರು, ಕಾಪು ಭಟ್ ಕುಟುಂಬದ ಹಿರಿಯರಾದ ಲಕ್ಷ್ಮೀ ನಾರಾಯಣ ಭಟ್, ಸೇವಾಕರ್ತರಾದ ಡಾ| ನಾಗಾನಂದ ಭಟ್ ಮತ್ತು ಡಾ| ಸುವರ್ಣ ಎನ್. ಭಟ್ ದಂಪತಿ, ಮಗ ಆಶ್ಲೇಷ್ ಭಟ್, ಸೊಸೆ ಲಾವಣ್ಯ ಭಟ್, ಸಹೋದರರಾದ ಉದಯ ಶಂಕರ ಭಟ್, ಬ್ರಹ್ಮಾನಂದ ಭಟ್, ಡಾ| ರಾಮ್‌ಪ್ರಸಾದ್ ಭಟ್, ಪರಮಾನಂದ ಭಟ್, ಪೂರ್ಣಾನಂದ ಭಟ್ ಹಾಗೂ ಕಾಪು ಪೇಟೆಯ ಹತ್ತು ಸಮಸ್ಥರು, ಊರ ಪರವೂರ ಭಜಕರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

ex-pm

EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್‌ ಅಂತ್ಯಕ್ರಿಯೆ

9-shivamogga

Shivamogga: ಮುಂದುವರಿದ ಕರಡಿಗಳ ಹಾವಳಿ; ಸ್ಥಳೀಯರಲ್ಲಿ ತೀವ್ರ ಆತಂಕ

New Year:ಹೊಸ ವರುಷ-ಹೊಸ ಹರುಷ 2025:ಕಾಲಚಕ್ರ ಮತ್ತೆ ತಿರುಗಿದೆ…ಹೊಸತು ಕಾಯುತ್ತಿದೆ!

New Year:ಹೊಸ ವರುಷ-ಹೊಸ ಹರುಷ 2025:ಕಾಲಚಕ್ರ ಮತ್ತೆ ತಿರುಗಿದೆ…ಹೊಸತು ಕಾಯುತ್ತಿದೆ!

ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

INDvAUS: ನಿತೀಶ್‌ ಕುಮಾರ್‌ ಆಕರ್ಷಕ ಶತಕ; ಫಾಲೋಆನ್‌ ಅವಮಾನದಿಂದ ಪಾರು

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

accident

Udupi: ಬೈಕ್‌ ಢಿಕ್ಕಿ; ವ್ಯಕ್ತಿಗೆ ಗಾಯ; ಪ್ರಕರಣ ದಾಖಲು

2

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

complaint

Udupi: ಕಾರ್ಮಿಕನ ಬೈಕ್‌ ಕಳ್ಳತನ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

10-kaup

Kaup: ಬೈಕ್ ಗೆ ಕಾರು ಢಿಕ್ಕಿ; ಸವಾರ ಗಂಭೀರ

3

Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್‌!

2

Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ

1(1

Sullia: ಪ್ಲಾಟ್‌ಫಾರ್ಮ್ ಎತ್ತರಿಸುವ ಕಾರ್ಯ ಪೂರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.