ಪುರುಷೋತ್ತಮ ಮಾಸಾಚರಣೆ, ಭಕ್ತರಿಂದ 2.15ಲಕ್ಷ ಪ್ರದಕ್ಷಿಣೆ
Team Udayavani, Jun 2, 2018, 2:30 AM IST
ಹೆಬ್ರಿ: ಅಧಿಕ ಮಾಸದ ನಿಮಿತ್ತ ಶ್ರೀ ಪುರುಷೋತ್ತಮ ಮಾಸಾಚರಣೆ ಅಂಗವಾಗಿ ಹೆಬ್ರಿ ದೇವಸ್ಥಾನದಲ್ಲಿ ಮೇ 16ರಿಂದ ಜೂ.13ರವರೆಗೆ ಲಕ್ಷ ಪ್ರದಕ್ಷಿಣೆ ನಮಸ್ಕಾರ ನಡೆಯುತ್ತಿದ್ದು ಸಂಕಲ್ಪದಲ್ಲಿ ಸುಮಾರು 215ಭಕ್ತರಿಂದ 2.15ಲಕ್ಷ ಪ್ರದಕ್ಷಿಣಿ ನಡೆಯುತ್ತಿದೆ ಭಕ್ತರು ಭಗವನ್ನಾಮ ಹೇಳುತ್ತ, ಓರ್ವರು ನಿತ್ಯ 33 ಪ್ರದಕ್ಷಿಣೆ ಬರುತ್ತಾರೆ. ಇದರಿಂದ 30 ದಿವಸಗಳಲ್ಲಿ 990 ಪ್ರದಕ್ಷಿಣೆಯಂತೆ 108 ಭಕ್ತರು ಪ್ರದಕ್ಷಿಣೆ ನಡೆಸಿದರೆ, ಲಕ್ಷ ಪ್ರದಕ್ಷಿಣೆಯಾಗಲಿದೆ. ಬೆಳಗ್ಗೆ 5.30ರಿಂದ ಸಂಜೆ 7.30ರ ವರೆಗೆ ಭಕ್ತರು ಪ್ರದಕ್ಷಿಣೆ ಸಂಕಲ್ಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 33 ತಿಂಗಳ ಹಿಂದೆ ಇದೇ ರೀತಿ ನಡೆದ ಕಾರ್ಯಕ್ರಮದಲ್ಲಿ 350 ಮಂದಿ ಪಾಲ್ಗೊಂಡಿದ್ದರು.
ಏನಿದು ಅಧಿಕ ಮಾಸ
ಚೈತ್ರ ಯುಗಾದಿಯಿಂದ ಚೈತ್ರಾದಿಯ ತನಕದ ವರ್ಷ ಚಾಂದ್ರ ಸಂವತ್ಸರವೆನಿಸಿದೆ. ಇದರಲ್ಲಿ ಸುಮಾರು 354 ದಿನಗಳಿರುತ್ತವೆ. ಮೇಷದಿಂದ ಮೇಷ ಸಂಕ್ರಮಣದವರೆಗೆ ವರ್ಷ ಸಂವತ್ಸರ ಇದರಲ್ಲಿ 365.25 ದಿವಸಗಳಿರುತ್ತವೆ. ಹೀಗೆ ಸೌರ ಚಂದ್ರಗಳಲ್ಲಿ ವರ್ಷಕ್ಕೆ 11 ದಿನದ ವ್ಯತ್ಯಾಸ ಬೀಳುತ್ತದೆ. 33 ತಿಂಗಳುಗಳಿಗೊಮ್ಮೆ ಬರುವ ಈ ಮಾಸ ವಿಶೇಷ. ಯುವ ಚಂದ್ರ ಮಾಸದಲ್ಲಿ ಸಂಕ್ರಾಂತಿ ಇಲ್ಲದಿದ್ದರೆ ಅದು ಅಧಿಕ ಮಾಸ. ಒಂದು ಮಾಸದಲ್ಲಿ 2 ಸಂಕ್ರಾಂತಿ ಬಂದರೆ ಅದು ಕ್ಷಯ ಮಾಸ. ಕ್ಷಯ ಮಾಸದ ಹಿಂದೆ ಮತ್ತು ಮುಂದಿನ 2 ತಿಂಗಳುಗಳು ದ್ವಿಸಂಕ್ರಾಂತವಾಗಿದ್ದು ಅಧಿಕ ಮಾಸಗಳಾಗಿರುತ್ತವೆ. ಇಂತಹ ಕ್ಷಯ ಮಾಸ ಒದಗಿಸುವುದು 140 ವರ್ಷಗಳಿಗೊಮ್ಮೆ ಮಾತ್ರವಾಗಿದ್ದು ಕ್ಷಯಮಾಸವುಳ್ಳ ವರ್ಷದಲ್ಲಿ 13 ತಿಂಗಳು ಇರುತ್ತದೆ.
100 ಪ್ರದಕ್ಷಿಣೆ ಸಂಕಲ್ಪ
ಈಗಾಗಲೇ ಲಕ್ಷಪ್ರದಕ್ಷಿಣೆ ಆರಂಭಗೊಂಡಿದ್ದು ಇದುವರೆಗೆ ಬರಲು ಅನಾನುಕೂಲವಾದವರಿಗೆ ಜೂ.13ರ ಒಳಗೆ 100 ಪ್ರದಕ್ಷಿಣಿ ಬರುವುದರ ಮೂಲಕ ಸಂಕಲ್ಪದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂಕಲ್ಪದ ಕೊನೆಯದಿನ ಪುರುಷೋತ್ತಮ ಪೂಜೆ, ಸಾಮೂಹಿಕ ಸತ್ಯನಾರಾಯಾಣ ಪೂಜೆ ನಡೆಯಲಿದೆ.
ಅಧಿಕ ಫಲ ಪ್ರಾಪ್ತಿ
ಅಧಿಕ ಮಾಸದ 30 ದಿನಗಳಲ್ಲಿ 33 ಭಗವನ್ನಾಮ ಉಚ್ಚರಿಸುತ್ತಾ ಪ್ರತಿನಿತ್ಯ ಮೂವತ್ತ ಮೂರು ಪ್ರದಕ್ಷಿಣೆ, ಭಗವಂತನ ಪ್ರಾರ್ಥನೆಯಿಂದ ಅಧಿಕ ಫಲದೊರೆಯುವುದು.
– ಗಿಲ್ಲಾಳಿ ವಾದಿರಾಜ ಆಚಾರ್ಯ, ಹೆಬ್ರಿ ಅನಂತಪದ್ಮನಾಭ ದೇವಸ್ಥಾನದ ಅರ್ಚಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.