ಸ್ಪೋಕನ್ ಇಂಗ್ಲಿಷ್‌ಗೆ ತರಬೇತುದಾರರ ಕೊರತೆ : ಹಾಸ್ಟೆಲ್‌ಗಳಲ್ಲೂ ಸಮಸ್ಯೆ
Team Udayavani, Aug 23, 2022, 9:17 AM IST
ಉಡುಪಿ: ಸರಕಾರಿ ಶಾಲಾ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ರಾಜ್ಯ ಸರಕಾರ ಸಜ್ಜಾಗಿದ್ದರೂ ತರಬೇತಾದ ಶಿಕ್ಷಕರ ಸಂಖ್ಯೆ ತೀರಾ ಕಡಿಮೆಯಿದೆ.
ಕೊರೊನಾ ಅನಂತರದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸಹಿತ ಒಂದನೇ ತರಗತಿಯಿಂದಲೆ ಆಂಗ್ಲ ಮಾಧ್ಯಮ ಬೋಧನೆ ಮಾಡಲಾಗುತ್ತಿದೆ. ಸರಕಾರಿ ಶಾಲೆಯ ಮಕ್ಕಳಿಗೂ ಇಂಗ್ಲಿಷ್ ಪರಿಣಾಮಕಾರಿಯಾಗಿ ಕಲಿಸಲು ಹಂತ ಹಂತವಾಗಿ ನ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಈವರೆಗೂ ಆಗಿಲ್ಲ.
ಸದ್ಯ ಆಂಗ್ಲ ಭಾಷ ತರಗತಿಯಲ್ಲಿಯೇ ಪರಿಣಾಮಕಾರಿಯಾಗಿ ಇಂಗ್ಲಿಷ್ ಕಲಿಸಲು ಬೇಕಾದ ಕ್ರಮವನ್ನು ಶಾಲಾ ಹಂತದಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 38,046 ಹಾಗೂ ನಗರ ಭಾಗದಲ್ಲಿ 5,481 ಸರಕಾರಿ ಶಾಲೆಗಳಿವೆ. 1ರಿಂದ 8ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಒಂದು ಅಥವಾ ಎರಡು ದಿನ ನ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ಚರ್ಚೆ ನಡೆಯುತ್ತಿದೆ.
ಇಂಗ್ಲಿಷ್ ಶಿಕ್ಷಕರಿಗೆ ತರಬೇತಿ
ನ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ಪ್ರತೀ ಶಾಲೆಗೂ ಕನಿಷ್ಠ ಓರ್ವ ತರಬೇತುದಾರ ಅಥವಾ ಇಂಗ್ಲಿಷ್ ಶಿಕ್ಷಕರನ್ನೇ ತರಬೇತುದಾರರಾಗಿ ಸಜ್ಜುಗೊಳಿಸಬೇಕಿದೆ. ಸದ್ಯಕ್ಕೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮೂಲಕ ಪ್ರತೀ ವರ್ಷ 2 ಸಾವಿರ ಇಂಗ್ಲಿಷ್ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ಧರಿಸಿದೆ. ಅವರ ಮೂಲಕವೇ ಮಕ್ಕಳಿಗೆ ಕಲಿಸುವ ಸಾಧ್ಯತೆಯಿದೆ.
ಹಾಸ್ಟೆಲ್‌ಗಳಲ್ಲೂ ಸಮಸ್ಯೆ
ಈಗಾಗಲೇ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿರುವ ಎಲ್ಲ ಹಾಸ್ಟೆಲ್‌ಗಳಲ್ಲೂ ನ್ಪೋಕನ್ ಇಂಗ್ಲಿಷ್ ಹಾಗೂ ನೈತಿಕ ಶಿಕ್ಷಣ ನೀಡುವ ಕಾರ್ಯ ಆರಂಭವಾಗಿದೆ. ನ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ಆಯಾ ಜಿಲ್ಲೆಗಳ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇರುವ ಇಂಗ್ಲಿಷ್ ಬೋಧಕರಿಗೆ ವಿಶೇಷ ಗೌರವ ಧನ ನೀಡಿ ಬಳಸಿಕೊಳ್ಳಲು ಸೂಚಿಸಲಾಗಿದೆ. ಆದರೆ ಬಹುತೇಕ ಜಿಲ್ಲೆಗಳಲ್ಲಿ ನ್ಪೋಕನ್ ಇಂಗ್ಲಿಷ್‌ಗೆ ತರಬೇತುದಾರರೇ ಸಿಗುತ್ತಿಲ್ಲ ಎಂಬ ದೂರು ಇದೆ. ಆದ್ದರಿಂದ ಕೆಲವು ಜಿಲ್ಲೆಗಳಲ್ಲಿ ನಿವೃತ್ತ ಇಂಗ್ಲಿಷ್ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ.
ರಾಜ್ಯದ ಹಿಂದುಳಿದ ವರ್ಗಗಳ ಇಲಾಖೆಯ ಅಧೀನದ ಎಲ್ಲ ಹಾಸ್ಟೆಲ್‌ಗಳಲ್ಲೂ ನ್ಪೋಕನ್ ಇಂಗ್ಲಿಷ್ ತರಬೇತಿ ಆರಂಭಿಸಿದ್ದೇವೆ. ತರಬೇತಿ ನೀಡಲು ಉಪನ್ಯಾಸಕರ ಕೊರತೆ ಇರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ನ್ಪೋಕನ್ ಇಂಗ್ಲಿಷ್‌ಗೆಂದೇ ಪ್ರತ್ಯೇಕ ತರಗತಿ ಇರುವುದಿಲ್ಲ. ಇಂಗ್ಲಿಷ್ ವಿಷಯದ ಬೋಧನೆ ಸಂದರ್ಭದಲ್ಲೇ ಪರಿಣಾಮಕಾರಿಯಾಗಿ ಮಾತನಾಡಲು ಕಲಿಸಲು ಬೇಕಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತರಬೇತಿ ಸಂಬಂಧ ಪ್ರತ್ಯೇಕ ಆದೇಶ ಯಾವುದೂ ಆಗಿಲ್ಲ.
– ಡಾ| ವಿಶಾಲ್ ಆರ್., ಆಯುಕ್ತರು, ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.