ವೆಂಕಟೇಶನಿಗೆ ಚಿನ್ನದ ಕಿರೀಟ
Team Udayavani, Aug 3, 2017, 7:20 AM IST
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ವೆಂಕಟೇಶ ನಿಗೆ ಕನ್ನರ್ಪಾಡಿ ನಿವಾಸಿ ಐ. ಶ್ರೀನಿವಾಸ ನಾಯಕ್, ಶಾರದಾ ನಾಯಕ್ ಮತ್ತು ಮಕ್ಕಳು ಚಿನ್ನದ ಕಿರೀಟವನ್ನು ಭಜನ ಸಪ್ತಾಹದ ಅವಧಿಯಲ್ಲಿ ಸಮರ್ಪಿಸಿದ್ದಾರೆ.
ಸುಮಾರು 10 ಇಂಚು ಎತ್ತರದ ಬೆಳ್ಳಿಯ ಕಿರೀಟ ತಯಾರಿಸಿ ಅದಕ್ಕೆ ಚಿನ್ನದ ತಗಡನ್ನು ಹೊದೆಸಲಾಗಿದೆ. 1960-70ರ ದಶಕದಲ್ಲಿ ಶ್ರೀನಿವಾಸ ನಾಯಕ್ ಅವರು ಕಲ್ಪನಾ ಟಾಕೀಸ್ ಬಳಿ ಕಾರನ್ನು ನಡೆಸುತ್ತಿದ್ದು “ಕಾರಾ ಶಿನ್ ಮಾಮ್’ ಎಂದು ಚಿರಪರಿಚಿತರಾಗಿದ್ದರು. ಸಾಮಾನ್ಯ ಆರ್ಥಿಕ ಹಿನ್ನೆಲೆಯ ಕುಟುಂಬ ಈ ಸೇವೆಯನ್ನು ನಡೆಸಿದೆ. ಇವರು ಈ ಹಿಂದೆ ವೆಂಕಟೇಶನಿಗೆ ತಿರುಪತಿಯ ಚಿನ್ನದ ನಾಮವನ್ನು ಸಮರ್ಪಿಸಿದ್ದು ಇದು ಪ್ರತಿ ಶನಿವಾರದ ಅಲಂಕಾರಕ್ಕೆ ಬಳಕೆಯಾಗುತ್ತಿದೆ.