Kapu ಮಾರಿಯಮ್ಮ ದೇವಿ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ

Team Udayavani, Jun 12, 2024, 12:05 AM IST

Kapu ಮಾರಿಯಮ್ಮ ದೇವಿ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ಹಂತದ ನವ ನಿರ್ಮಾಣದ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ.

ಗದ್ದುಗೆಯೇ ಪ್ರಧಾನವಾಗಿರುವ ಮಾರಿಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವಿ ಮತ್ತು ಶ್ರೀ ಉಚ್ಚಂಗಿ ದೇವಿಗೆ ದಕ್ಷಿಣ ಭಾರತದಲ್ಲೇ ಅತ್ಯಪೂರ್ವವೆಂಬಂತೆ ಇಳಕಲ್‌ ಕೆಂಪು ಶಿಲೆಯಲ್ಲಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆ.

ಮುಂದೆ ಗರ್ಭಗುಡಿಯೊಳಗೆ ವಿರಾಜಮಾನಗೊಳ್ಳಲಿರುವ ಮಾರಿಯಮ್ಮ ದೇವಿ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆಯನ್ನು ಸಮರ್ಪಿಸಿ, ಸ್ವರ್ಣ ಗದ್ದುಗೆಯಲ್ಲೇ ದೇವಿಯನ್ನು ಪ್ರತಿಷ್ಠಾಪನೆಗೊಳಿಸಬೇಕೆನ್ನುವುದು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸಂಕಲ್ಪವಾಗಿದೆ.

ಸ್ವರ್ಣ ಸಮರ್ಪಣೆಗೆ
ಭಕ್ತರಿಗೆ ಅವಕಾಶ
ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಗೆ ಸುಮಾರು 20 ಕೆಜಿ ಚಿನ್ನದಿಂದ ಸ್ವರ್ಣ ಗದ್ದುಗೆಯನ್ನು ಸಮರ್ಪಿಸಬೇಕೆಂಬ ಸಮಿತಿಯ ಆಶಯಕ್ಕೆ ದೇವಿಯ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.ತಮ್ಮ ಶಕ್ತಾನುಸಾರವಾಗಿ ಸ್ವರ್ಣ ಸಮರ್ಪಣೆಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಸಾಮೂಹಿಕವಾಗಿ ಸ್ವರ್ಣ ಸಮರ್ಪಣೆಗೆ ಅವಕಾಶ ನೀಡಲು ಸಮಿತಿಯ ಉದ್ದೇಶಿಸಿದೆ.

ಸ್ವರ್ಣ ಗದ್ದುಗೆ
ಸಮರ್ಪಣೆ ಸಮಿತಿ
ರವಿ ಸುಂದರ್‌ ಶೆಟ್ಟಿ ಮುಂಬಯಿ (ಅಧ್ಯಕ್ಷ), ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು (ಪ್ರಧಾನ ಕಾರ್ಯಾಧ್ಯಕ್ಷ), ಕಾಪು ದಿವಾಕರ ಶೆಟ್ಟಿ ಕೋತ್ವಾಲಗುತ್ತು (ಪ್ರಧಾನ ಕಾರ್ಯದರ್ಶಿ), ಹರಿಯಪ್ಪ ಕೋಟ್ಯಾನ್‌ ಮಲ್ಪೆ, ಬಿ.ಎನ್‌. ಶಂಕರ್‌ ಪೂಜಾರಿ ಬ್ರಹ್ಮಾವರ, ರತ್ನಾಕರ ಶೆಟ್ಟಿ ನಡಿಕೆರೆ, ಪ್ರಸನ್ನ ಆಚಾರ್ಯ ಕಾಪು (ಕಾರ್ಯಾಧ್ಯಕ್ಷರು), ರವಿ ಭಟ್‌ ಮಂದಾರ (ಕಾರ್ಯದರ್ಶಿ), ಎರ್ಮಾಳು ಚಂದ್ರಹಾಸ ಶೆಟ್ಟಿ ಪುಣೆ (ಕೋಶಾಧಿಕಾರಿ) ಅವರನ್ನೊಳಗೊಂಡ ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿಯನ್ನು ರಚಿಸಲಾಗಿದೆ.

ನವ ನಿರ್ಮಾಣಕ್ಕೆ
ಒಂಬತ್ತರ ನಂಟು
ನವದುರ್ಗಾ ಐಕ್ಯ ಸ್ವರೂಪಿಣೀ ಕಾಪು ಮಾರಿಯಮ್ಮನ ಸನ್ನಿಧಿಯ ನವ ನಿರ್ಮಾಣ ಕಾರ್ಯದಲ್ಲಿ ಒಂಬತ್ತರ ನಂಟನ್ನು ಜೋಡಿಸಿಕೊಳ್ಳಲಾಗಿದೆ. ಮಾರಿಗುಡಿ ನಿರ್ಮಾಣ ಕಾರ್ಯದಲ್ಲಿ 9, 99, 999, 9999, 99999 ಮತ್ತು ಅದಕ್ಕಿಂತ ಹೆಚ್ಚಿನ ಶಿಲಾಸೇವೆ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಸ್ವರ್ಣ ಗದ್ದುಗೆ ನಿರ್ಮಾಣ ಯೋಜನೆಯಲ್ಲೂ ಭಕ್ತರಿಗೆ 9 ಗ್ರಾಂ, 18 ಗ್ರಾಂ, 99 ಗ್ರಾಂ, 243 ಗ್ರಾಂ, 450 ಗ್ರಾಂ, 999 ಗ್ರಾಂ ಸ್ವರ್ಣ ಸಮರ್ಪಣೆಗೆ ಅವಕಾಶ ನೀಡಲಾಗುವುದು.

ಮಾ. 2: ಮಾರಿಯಮ್ಮ
ದೇವಿಯ ಪ್ರತಿಷ್ಠೆ
2025ರ ಮಾ. 2ರಂದು ಮಾರಿಯಮ್ಮ ದೇವಿಯ ಗದ್ದುಗೆ ಪ್ರತಿಷ್ಠೆಗೆ ದಿನ ನಿಗದಿ ಪಡಿಸಲಾಗಿದೆ. ದೇಗುಲ ಸಮರ್ಪಣೆ, ಗದ್ದುಗೆ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಪೂರ್ವದಲ್ಲಿ ಮಾರಿಗುಡಿಯ ಸಮಗ್ರ ಜೀರ್ಣೋದ್ಧಾರದ ಯೋಜನೆಗಳನ್ನು ಪೂರ್ಣಗೊಳಿಸಬೇಕೆನ್ನುವುದು ನಮ್ಮ ಆಶಯ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್‌ ಹೆಗ್ಡೆ ಕಲ್ಯ, ಪ್ರಧಾನ ಕೋಶಾಧಿಕಾರಿ ರವಿಕಿರಣ್‌, ತಂತ್ರಿಗಳು, ಅರ್ಚಕರು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈರ್‌ ಬ್ರ್ಯಾಂಡ್‌ʼ ಎಂಟ್ರಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

002

Karkala: ಎದೆ ನೋವಿನಿಂದ ಕೃಷಿಕ ಸಾವು

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

05856

Sullia: ಮರ್ಕಂಜ; ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.