ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಚೂರ್ಣೋತ್ಸವ
Team Udayavani, Jan 15, 2023, 8:25 PM IST
ಉಡುಪಿ : ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವದ ಅಂಗವಾಗಿ ರವಿವಾರ ಚೂರ್ಣೋತ್ಸವ (ಹಗಲು ರಥೋತ್ಸವ) ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.
ಜ. 9ರಂದು ಆರಂಭಗೊಂಡ ವಾರ್ಷಿಕ ಸಪ್ತೋತ್ಸವವು ಚೂರ್ಣೋತ್ಸವದೊಂದಿಗೆ ಸಮಾಪನಗೊಂಡಿತು. ಬೆಳಗ್ಗೆ ಪರ್ಯಾಯ ಶ್ರೀಪಾದರು ಮಹಾಪೂಜೆಯನ್ನು ಮುಗಿಸಿದ ಬಳಿಕ ಚೂರ್ಣೋತ್ಸವ ಆರಂಭಗೊಂಡಿತು. ಬ್ರಹ್ಮರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ಸಾವಿರಾರು ಭಕ್ತರ ಸಮ್ಮುಖ ಪ್ರದಕ್ಷಿಣೆ ಬಂದು ಪಲ್ಲಪೂಜೆ, ವಸಂತಮಹಲ್‌ನಲ್ಲಿ ಅಷ್ಟಾವಧಾನ, ಓಲಗಮಂಟಪ ಪೂಜೆ ನಡೆಯಿತು.
ಅನಂತರ ಮಧ್ವ ಸರೋವರದಲ್ಲಿ ಉತ್ಸವಮೂರ್ತಿ ಸಹಿತವಾಗಿ ಮಠಾಧೀಶರು ಅವಭೃಥ ಸ್ನಾನ ಮಾಡಿ ಸಪ್ತೋತ್ಸವವನ್ನು ಕೃಷ್ಣಾರ್ಪಣಗೈದರು. ರಥೋತ್ಸವದ ವೇಳೆ ಸಾವಿರಾರು ಭಕ್ತರು ರಥವನ್ನು ಎಳೆದರು. ಉತ್ಸವದಲ್ಲಿ ಪಲಿಮಾರು ಹಿರಿಯ, ಕಿರಿಯ, ಪೇಜಾವರ, ಕಾಣಿಯೂರು, ಅದಮಾರು, ಸೋದೆ, ಶೀರೂರು ಸ್ವಾಮೀಜಿಯವರು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.
ಇದನ್ನೂ ಓದಿ: ಏಕದಿನ ಕ್ರಿಕೆಟ್ ನಲ್ಲಿ ದಾಖಲೆ ಅಂತರದ ಗೆಲುವು; ಭಾರತದ ಹೊಸ ದಾಖಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.