ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ
ಸುವರ್ಣ ಗೋಪುರ ಸಮರ್ಪಣೋತ್ಸವ ಸಂಭ್ರಮ
Team Udayavani, Jun 5, 2019, 6:10 AM IST
ಉಡುಪಿ: ಶ್ರೀ ಕೃಷ್ಣಮಠದ ಸುವರ್ಣ ಗೋಪುರ ಸಮರ್ಪಣೋತ್ಸವದ ಅಂಗವಾಗಿ ಮಂಗಳವಾರ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಆಶ್ರಯದಲ್ಲಿ ಶ್ರೀ ಕೃಷ್ಣಮಠಕ್ಕೆ ಹಸುರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹಸುರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಜೋಡುಕಟ್ಟೆಯಿಂದ ಆರಂಭ ಗೊಂಡ ಮೆರವಣಿಗೆಯು ಕವಿ ಮುದ್ದಣ
ಮಾರ್ಗದ ಮೂಲಕ ಸಂಸ್ಕೃತ ಕಾಲೇಜು, ರಥಬೀದಿ ಮೂಲಕ ಶ್ರೀ ಕೃಷ್ಣಮಠಕ್ಕೆ ತೆರಳಿತು.
ರಥಬೀದಿ ವ್ಯಾಪಾರಸ್ಥರು, ಕಾಪು ಮಹಿಷಮರ್ದಿನಿ ಸಮೂಹ ಸಂಸ್ಥೆ, ಮಹಾಲಿಂಗೇಶ್ವರ ಗೆಳೆಯರ ಬಳಗ ಬ್ರಹ್ಮಾವರ, ವಿಶ್ವಕರ್ಮ ಒಕ್ಕೂಟ ಉಡುಪಿ, ದ.ಕ., ಸಹಿತ ಮೈಸೂರು, ಮಂಗಳೂರು, ಸುರತ್ಕಲ್, ಸಾಸ್ತಾನ, ನೀಲಾವರ, ಬ್ರಹ್ಮಾವರ ಬೈಕಾಡಿಯ ಸುಮಾರು 125ಕ್ಕೂ ಅಧಿಕ ವಾಹನಗಳು ಮೆರವಣಿಗೆಯಲ್ಲಿ ಸಾಗಿ ಬಂದವು.
ಗಮನ ಸೆಳೆದ ಅಂಶ
– ಪೇಜಾವರ ಮುಸ್ಲಿಂ ಅಭಿಮಾನಿ ಬಳಗದ ವತಿಯಿಂದ 6 ಸಾವಿರ ಲೀಟರ್ ಕುಡಿಯುವ ನೀರು ಹಾಗೂ ವಿವಿಧ ಬಗೆಯ ತರಕಾರಿಗಳನ್ನು ಎರಡು ವಾಹನಗಳಲ್ಲಿ ತರಲಾಯಿತು.
– ಪೂರ್ಣಪ್ರಜ್ಞ ಕಾಲೇಜಿನ ವತಿಯಿಂದ ಪ್ರಥಮ ಬಾರಿಗೆ 77 ಚೀಲ ಅಕ್ಕಿ ಹಾಗೂ ವಿದ್ಯೋದಯ ಶಾಲೆಯ ವತಿಯಿಂದ 50 ಚೀಲ ಅಕ್ಕಿಯನ್ನು ಹೊರೆಕಾಣಿಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
– ಮಟ್ಟುಗುಳ್ಳವನ್ನು ಪಲ್ಲಕಿಯಲ್ಲಿ ಹೊತ್ತು ತರಲಾಯಿತು.
ಅಂಗವಿಕಲರಿಂದ ಹೊರೆಕಾಣಿಕೆ
ಜಗದೀಶ್ ಭಟ್ ನೇತೃತ್ವದಲ್ಲಿ ಸುಮಾರು 15ರಷ್ಟು ಅಂಗವಿಕಲರು ದ್ವಿಚಕ್ರ ವಾಹನಗಳಲ್ಲಿ ಹೊರೆಕಾಣಿಕೆಯನ್ನು ಸಮರ್ಪಿಸಿದರು. ಮೆರವಣಿಗೆಯ ಮುಂದಿದ್ದ ಆನೆ ಸುಭದ್ರೆಯ ಹಿಂಭಾಗದಲ್ಲಿ ಚೆಂಡೆ, ಭಜನೆ, ನಾಸಿಕ್ ಬ್ಯಾಂಡ್ ಸಹಿತ ತೆರೆದ ವಾಹನಗಳು ಗಮನಸೆಳೆದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
Dharmasthala: ಭಾರತೀಯ ಆಧ್ಯಾತ್ಮಿಕ ತವರೂರು ಶ್ರೀ ಕ್ಷೇತ್ರ ಧರ್ಮಸ್ಥಳ: ಜಗದೀಪ್ ಧನ್‌ಕರ್
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Dharmasthala ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.