ಗುರುಗಳ ಮಾರ್ಗದರ್ಶನದಲ್ಲಿ ಶ್ರೀಕೃಷ್ಣ ಪೂಜೆ

ಭಾವೀ ಪರ್ಯಾಯ ಅದಮಾರು ಶ್ರೀಗಳಿಗೆ ಪೌರಸಮ್ಮಾನ

Team Udayavani, Jan 9, 2020, 5:40 AM IST

08012020ASTRO52

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂಜಾದೀಕ್ಷಿತರಾಗಲಿರುವ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಬುಧವಾರ ನಗರಸಭೆ ವತಿಯಿಂದ ಪೌರಾಡಳಿತ ಮತ್ತು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಪೌರಸಮ್ಮಾನ ನೀಡಿ ಗೌರವಿಸಿದರು.

ಆಶ್ರಮ ನೀಡಿದ ಮತ್ತು ವಿದ್ಯೆ ನೀಡಿದ ಗುರುಗಳಿಬ್ಬರ ಮಾರ್ಗದರ್ಶನದಲ್ಲಿ ಶ್ರೀಕೃಷ್ಣ ಪೂಜೆಯನ್ನು ನಡೆಸುವುದಾಗಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.

ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿ ಶುಭಕೋರಿದರು. ಶ್ರೀ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಇಂದಿನ ಯುವಕ- ಯುವತಿಯರಿಗೆ ಧರ್ಮವನ್ನು ಅರ್ಥವಾಗುವಂತೆ ಹೇಳಬೇಕಾಗಿದೆ. ಆಚಾರದಷ್ಟೇ ತಣ್ತೀಕ್ಕೂ ಆದ್ಯತೆ ನೀಡಬೇಕಾಗಿದೆ. ಶ್ರೀಕೃಷ್ಣ ಕರ್ಮ ಯೋಗಿಯಾದರೂ ಜ್ಞಾನಮಾರ್ಗಕ್ಕೆ ಆದ್ಯತೆ ನೀಡಿದಂತೆ ತಣ್ತೀಪ್ರಸಾರಕ್ಕೆ ಆದ್ಯತೆ ಸಿಗಬೇಕಾಗಿದೆ ಎಂದು ಅಭಿನಂದನ ಭಾಷಣ ಮಾಡಿದ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಅವರು ಹೇಳಿದರು.

ಶ್ರೀ ವಿಬುಧೇಶತೀರ್ಥರು ಶಿಕ್ಷಣದ ಗುಣಮಟ್ಟವನ್ನು ಕಾಪಾಡುವಲ್ಲಿ ವಿಶೇಷ ಆಸ್ಥೆ ವಹಿಸಿದವರು, ಶ್ರೀ ವಿಶ್ವಪ್ರಿಯತೀರ್ಥರು ಧರ್ಮದ ಸಾರಾಂಶವನ್ನು ಹೇಳುವಲ್ಲಿ ನಿಷ್ಣಾತರು. ಅಂಥ‌ವರ ಪರಂಪರೆಯಲ್ಲಿ ಬಂದ ಶ್ರೀ ಈಶಪ್ರಿಯತೀರ್ಥರಿಂದ ಉದಾತ್ತ ಸೇವೆಗಳು ಸಲ್ಲುವಂತಾಗಲಿ ಎಂದರು.

ಪರಿಸರ ಕಾಳಜಿಗೆ ಶ್ಲಾಘನೆ
ಸ್ವಾಮೀಜಿ ಅವರ ಪರಿಸರ ಕಾಳಜಿ ಶ್ಲಾಘನೀಯ. ಜಗತ್ತಿನೆಲ್ಲೆಡೆ ಪರಿಸರ ಮಾಲಿನ್ಯ ಉಂಟಾಗಿರುವ ಈ ಸಂದರ್ಭದಲ್ಲಿ ಪರಿಸರವನ್ನು ಉಳಿಸುವ ಕಾಳಜಿ ತೋರಬೇಕಾಗಿದೆ. ಸರಕಾರ ಸಂಪೂರ್ಣ ಸಹಕಾರವನ್ನು ಪರ್ಯಾಯಕ್ಕೆ ನೀಡಲಿದೆ ಎಂದು ಸಚಿವ ಅಶೋಕ್‌ ಹೇಳಿದರು.

ಹಿಂದಿನ ಎಸ್‌ಪಿ ಅಣ್ಣಾಮಲೈ ಶುಭಾಶಂಸನೆಗೈದರು. ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಿ. ಜಗದೀಶ್‌, ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌, ವಿನಯಕುಮಾರ ಸೊರಕೆ, ಮಾಜಿ ಶಾಸಕ ಯು.ಆರ್‌.ಸಭಾಪತಿ, ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಅದಮಾರು ಮಠದ ದಿವಾನ್‌ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಉಪಸ್ಥಿತರಿದ್ದರು.

ವೆಬ್‌ಸೈಟ್‌ ಅನಾವರಣ
ದಿಯಾ ಸಿಸ್ಟಮ್ಸ್‌ನವರು ಅಭಿವೃದ್ಧಿಪಡಿಸಿದ ಅದಮಾರು ಮಠದ ವೆಬ್‌ಸೈಟ್‌ನ್ನು ಪಲಿಮಾರು ಶ್ರೀಗಳು ಬಿಡುಗಡೆಗೊಳಿಸಿದರು. ವೆಬ್‌ಸೈಟ್‌ ಕುರಿತು ರಾಜಿತ್‌ ವಿವರಿಸಿದರು. ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ಸ್ವಾಗತಿಸಿ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್‌ ಪ್ರಸ್ತಾವನೆಗೈದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕ ಡಾ| ಟಿ.ಎಸ್‌. ರಮೇಶ್‌ ಕಾರ್ಯಕ್ರಮ ನಿರ್ವಹಿಸಿದರು.

ಬದ್ಧತೆಯಿಂದ ನಿರ್ವಹಣೆ
ನಾನು ಯಾವುದೇ ಕೆಲಸಗಳನ್ನು ಮುಂಚಿತವಾಗಿ ಮಾಡುತ್ತೇನೆ ಎಂದು ಹೇಳುವುದಿಲ್ಲ. ಆದರೆ ಆ ಕೆಲಸಗಳನ್ನು ಮಾಡಲು ಬದ್ಧನಾಗಿ ಅದನ್ನು ಮುಗಿಸಲು ಪ್ರಯತ್ನಿಸುತ್ತೇನೆ. ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಈಗಲೇ ಘೋಷಿಸುವುದಿಲ್ಲ. ಆದರೆ ಅದರ ಬಗ್ಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪಲಿಮಾರು ಸ್ವಾಮೀಜಿ ಅವರು ನಮ್ಮ ಪರ್ಯಾಯದ ಅವಧಿಯಲ್ಲಿ ಎರಡು ವರ್ಷ ನಮ್ಮೊಡನೆ ಇದ್ದು, ಶಾಸ್ತ್ರ ಪಾಠಗಳನ್ನು ಹೇಳುವುದಾಗಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಚಿರಋಣಿ ಎಂದು ತಿಳಿಸಿದರು.

ಟಾಪ್ ನ್ಯೂಸ್

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Priyank-Kharghe

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

Will Rohit retire after the Sydney Test?

Rohit Sharma; ಸಿಡ್ನಿ ಟೆಸ್ಟ್‌  ಬಳಿಕ ರೋಹಿತ್‌ ವಿದಾಯ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮ

ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮ

Udupi: ಗೀತಾರ್ಥ ಚಿಂತನೆ 142: “ಧೀರ’ ಯಾರು?

Udupi: ಗೀತಾರ್ಥ ಚಿಂತನೆ 142: “ಧೀರ’ ಯಾರು?

ವಿಶ್ವಕರ್ಮ ಯೋಜನೆ ಸಮರ್ಪಕ ಅನುಷ್ಠಾನಕ್ಕೆ : ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಂಸದ ಕೋಟ ಪತ್ರ

ವಿಶ್ವಕರ್ಮ ಯೋಜನೆ ಸಮರ್ಪಕ ಅನುಷ್ಠಾನಕ್ಕೆ : ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಂಸದ ಕೋಟ ಪತ್ರ

Udupi: ರೈಲಿನಲ್ಲಿ ಬ್ಯಾಗ್‌ ಬಾಕಿ, ಸುರಕ್ಷಿತವಾಗಿ ಮರಳಿ ಪಡೆದ ಯಾತ್ರಿಕ

Udupi: ರೈಲಿನಲ್ಲಿ ಬ್ಯಾಗ್‌ ಬಾಕಿ, ಸುರಕ್ಷಿತವಾಗಿ ಮರಳಿ ಪಡೆದ ಯಾತ್ರಿಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.