ಮಾ. 13: ಕೃಷ್ಣ ಮಠದ ಸ್ವರ್ಣಗೋಪುರಕ್ಕೆ ಚಾಲನೆ
Team Udayavani, Mar 9, 2019, 12:30 AM IST
ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಗೆ ಚಿನ್ನದ ತಗಡು ಅಳವಡಿಸುವ ಕಾರ್ಯಕ್ಕೆ ಮಾ. 13ರ ಮಧ್ಯಾಹ್ನ 12.10ಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುತ್ತದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುವರ್ಣ ಹೊದಿಕೆಯ ಪೂರ್ವಭಾವಿಯಾಗಿ
ಮಾ. 12ರಂದು ಹೋಮ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಮಾ. 13ರಂದು ಶ್ರೀಕೃಷ್ಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಿಖರ ಕಲಶವನ್ನು ಕೆಳಗಿಳಿಸಿ ಮೇಲ್ಛಾವಣಿಯ ನವೀಕರಣ ಕೆಲಸ ಆರಂಭಿಸಲಾಗುತ್ತದೆ ಎಂದರು.
ಕೆಲಸ ಪೂರ್ಣಗೊಳ್ಳುವ ವರೆಗೆ ಪೂಜೆಗಳನ್ನು ಪೂರ್ವಾಹ್ನ 11 ಗಂಟೆಗೆ ಮುಗಿಸಿ, ಗರ್ಭಗೃಹ ಬಾಗಿಲು ಮುಚ್ಚಿದ ಬಳಿಕ ಸುವರ್ಣ ಹೊದಿಕೆಯ ಕೆಲಸ ಆರಂಭಿಸಲಾಗುವುದು. ಸಂಜೆ 5 ಗಂಟೆಗೆ ಕೆಲಸ ಮುಗಿಸಿ ರಾತ್ರಿ ದೇವರಿಗೆ ನಿತ್ಯ ಪೂಜೆಯ ಬಳಿಕ ಮತ್ತೆ ಕೆಲಸ ಮುಂದುವರಿಯಲಿದೆ. ಮರುದಿನ ಕವಾಟೋದ್ಘಾಟನೆಯ ಮೊದಲು ಕೆಲಸವನ್ನು ಮುಗಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಶ್ರೀಕೃಷ್ಣ ದೇವರಿಗೆ ನಿತ್ಯ ನಡೆಯುವ ಎಲ್ಲ ಸೇವೆಗಳು ಅಬಾಧಿತವಾಗಿದ್ದು, ಉತ್ಸವಾದಿಗಳು ಯಥಾಪ್ರಕಾರ ನಡೆಯಲಿವೆ. ಆದರೆ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ಭಕ್ತರಿಗೆ ದೇವರ ದರ್ಶನಕ್ಕೆ ತೊಂದರೆಯಾಗದ ರೀತಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಮುಷ್ಟಿ ಕಾಣಿಕೆ
ದೇವಾಲಯದ ಶಿಖರ ಅವರೋಹಣ ನಡೆಸಿದರೆ, ಆ ಊರಿನಲ್ಲಿ ನೆಲೆಸಿದ ಎಲ್ಲರೂ ಬ್ರಹ್ಮಕಲಶದ ವರೆಗೆ ದೀಕ್ಷಾಬದ್ಧರಾಗಬೇಕೆಂಬ ನಿಯಮವಿದೆ. ಅದನ್ನು ಎಲ್ಲರಿಗೂ ಪಾಲಿಸಲು ಸಾಧ್ಯವಾಗದೆ ಇರುವುದರಿಂದ ಪರ್ಯಾಯ ಮಾರ್ಗವಾಗಿ ಮುಷ್ಟಿ ಕಾಣಿಕೆ ಹಾಕಲು ಅವಕಾಶ ಕಲ್ಪಿಸಲಾಗಿದೆ. ಮಾ. 12ರಿಂದ ಮಠದಲ್ಲಿ ಮುಷ್ಟಿ ಕಾಣಿಕೆ ಹುಂಡಿಯನ್ನು ಇಡಲಾಗುತ್ತದೆ. ಭಕ್ತರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ವಾಸ್ತುತಜ್ಞ ಸುಬ್ರಹ್ಮಣ್ಯ ಅವಧಾನಿ ತಿಳಿಸಿದರು. ಚಿನ್ನದ ಗೋಪುರ ನಿರ್ಮಾಣ ಉಸ್ತುವಾರಿ ಯು. ವೆಂಕಟೇಶ ಶೇಟ್ ಉಪಸ್ಥಿತರಿದ್ದರು.
23 ಕ್ಯಾರೆಟ್ ಬಂಗಾರದ ಹಾಳೆಗಳನ್ನು ತಯಾರಿಸಲಾಗಿದ್ದು, ಗೋಪುರಕ್ಕೆ ಅಳವಡಿಸುವ ಮುನ್ನ ಎನ್‌ಐಟಿಕೆಯ ಪರಿಣತರಿಂದ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಮುಂದಿನ ಮೂರು ತಿಂಗಳ ಒಳಗಾಗಿ ಸುವರ್ಣಗೋಪುರ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ.
– ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.