ಶ್ರೀ ಕೃಷ್ಣಾಷ್ಟಮಿ: ವೃದ್ಧಶ್ರಮದ ನೆರವಿಗೆ “ಮಾರಿಕಾಡು’ ವೇಷ
Team Udayavani, Sep 12, 2017, 7:10 AM IST
ಉಡುಪಿ: ಉಡುಪಿಯ ನಾಡಹಬ್ಬ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಳೆದ 4 ವರ್ಷಗಳಿಂದ ವೇಷ ಹಾಕಿ ಸಂಗ್ರಹವಾದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ನೀಡುತ್ತಿದ್ದು, ಈ ಬಾರಿ ಮಾರಿಕಾಡು ಎನ್ನುವ ವೇಷ ಧರಿಸಿ, ಅದರಿಂದ ಗಳಿಸಿದ ಹಣವನ್ನು ಕೊರಂಗ್ರಪಾಡಿಯ ಕಲ್ವಾರಿ ವೃದ್ಧಾಶ್ರಮಕ್ಕೆ ನೀಡುವುದಾಗಿ ವೇಷಧಾರಿ ರಾಮಾಂಜಿ ನಮ್ಮ ಭೂಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 4 ವರ್ಷಗಳಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆಯ ವಸ್ತುವನ್ನಿರಿಸಿಕೊಂಡು ಕೃಷ್ಣಾಷ್ಟಮಿ ವೇಳೆ ನಾಗಾಸಾಧು, ಮಾಯಾನ್ ಸಂಸ್ಕೃತಿಯ ಬುಡಕಟ್ಟು ಜನ, ಕೇರಳದ ತೈಯಂ, ದ. ಆಫ್ರಿಕಾದ ಬುಡಕಟ್ಟು ಜನಾಂಗದ ಅಪಕಲಿಪಟು ವೇಷ ಧರಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಈ ಬಾರಿ ಶೇಕ್ಸ್‌ಪೀಯರ್‌ನ ಮ್ಯಾಕ್‌ಬೆತ್ ನಾಟಕದಿಂದ ಆಯ್ದ ಅದನ್ನು ಡಾ| ಚಂದ್ರಶೇಖರ್ ಕಂಬಾರರು ಕನ್ನಡಕ್ಕೆ ಮಾರಿಕಾಡು ಎನ್ನುವುದಾಗಿ ರೂಪಾಂತರಿಸಿದ್ದು, ಆ ವೇಷ ಧರಿಸಿ ವೃದ್ಧಾಶ್ರಮಕ್ಕೆ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಮಾರಿಕಾಡು ಎಂದರೆ ಪರಿಸರ ಸಂರಕ್ಷಣೆ ಕಾಳಜಿ, ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಎದುರಾಗುವ ಆಪತ್ತಿನ ಕುರಿತ ಸಂದೇಶವು ಇದೆ ಎಂದರು.
ನಾನು ವೇಷ ಧರಿಸಿ ಎಲ್ಲರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈ ವೇಷವನ್ನು ವೀಕ್ಷಿಸಿದವರು, ಸ್ನೇಹಿತರು, ಹಿತೈಷಿಗಳು ನನ್ನ ಸಿಂಡಿಕೇಟ್ ಬ್ಯಾಂಕಿನ ಕುಂಜಿಬೆಟ್ಟು ಶಾಖೆಯ ಕಾತೆ ಸಂಖ್ಯೆ : 01862210042226, ಐಎಫ್ ಸಿ ಕೋಡ್ : SYNB 0000186 ಖಾತೆಗೆ ಹಣ ಜಮೆ ಮಾಡಬಹುದು ಎಂದು ರಾಮಾಂಜಿ ಮನವಿ ಮಾಡಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿತ್ಯಾನಂದ ಒಳಕಾಡು, ರೋಹಿತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.