ಸುದೀರ್ಘ‌ ಅರ್ಚಕಸೇವೆ, ಅಲಂಕಾರದಲ್ಲಿ ಎತ್ತಿದಕೈ

Team Udayavani, Mar 15, 2018, 6:15 AM IST

bilagi-bhat.jpg

ಉಡುಪಿ: ಗೌಡಸಾರಸ್ವತ ಸಮಾಜದ ಪ್ರತಿಷ್ಠಿತ ದೇವಳವಾದ ಉಡುಪಿಯ ಶ್ರೀ ಲಕ್ಷ್ಮೀವೆಂಕಟರಮಣ ದೇವಳಕ್ಕೆ ಶತಮಾನೋತ್ತರ ಇತಿಹಾಸವಿದ್ದರೆ ಇದರಲ್ಲಿ 25 ವರ್ಷ ವೆಂಕಟರಮಣ ದೇವರಿಗೆ ಅರ್ಚಕರಾಗಿ ಸೇವೆ ಸಲ್ಲಿಸಿದವರು ವೇ|ಮೂ| ಬೀಳಗಿ ಶ್ರೀ ಲಕ್ಷ್ಮೀವೆಂಕಟರಮಣ ದಾಮೋದರ ಭಟ್ಟರು. 

122 ವರ್ಷಗಳ ಹಿಂದೆ ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮದ್‌ ವರದೇಂದ್ರತೀರ್ಥ ಶ್ರೀಪಾದರಿಂದ ಪ್ರತಿಷ್ಠಿತಗೊಂಡ ಈ ದೇವಳದಲ್ಲಿ ಭಟ್ಟರು 37 ವರ್ಷಗಳಿಂದ  ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ 25 ವರ್ಷ ವೆಂಕಟರಮಣನಿಗೆ, ಉಳಿದ ವರ್ಷಗಳಲ್ಲಿ ಪರಿವಾರದೇವರಿಗೆ ಅರ್ಚಕರಾಗಿ ಸೇವೆ ಸಂದಿದೆ. ಮಾ. 18 ಯುಗಾದಿಯಂದು ಇವರ 25ನೆಯ ವರ್ಷದ ವೆಂಟಕರಮಣನ ಅರ್ಚಕ ಸೇವೆ ಮುಕ್ತಾಯಗೊಳ್ಳುತ್ತಿದೆ. ಇವರು ಮೂಲತಃ ಶಿರಸಿ ತಾಲೂಕಿನ ಬಿಳಿಗಿಯವರಾದ ಕಾರಣ ಬಿಳಿಗಿ ಭಟ್ಟರೆಂದೇ ಜನಜನಿತ.  ಸ್ವಾತಂತ್ರ್ಯ ಸಿಕ್ಕಿದ ವರ್ಷ ಜನಿಸಿದ ಭಟ್ಟರು ಪ್ರಾಥಮಿಕ ಶಿಕ್ಷಣವನ್ನು ಬಿಳಿಗಿಯಲ್ಲಿ ಪೂರೈಸಿ ವೈದಿಕ ಶಿಕ್ಷಣ, ಜ್ಯೋತಿಷ್ಯಶಾಸ್ತ್ರದ ಶಿಕ್ಷಣವನ್ನು ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪಡೆದರು. ಬಿಳಿಗಿ ಭಟ್ಟರು ಗೋಕರ್ಣ ಮಠದ ಶ್ರೀಮದ್‌ ದ್ವಾರಕಾನಾಥ  ಸ್ವಾಮಿಗಳಲ್ಲಿದ್ದಾಗ ಇವರ ವೈದಿಕ ಶಿಕ್ಷಣದ ಪ್ರಾವೀಣ್ಯ ನೋಡಿ, ದೇವಳದ ಧರ್ಮದರ್ಶಿ, ಉದ್ಯಮಿ ಐರೋಡಿ ರಾಧಾಕೃಷ್ಣ ಪೈಯವರು ಅರ್ಚಕರಾಗಿ ಬರಲು ವಿನಂತಿಸಿದರು.  ಆ ಪ್ರಕಾರ ಭಟ್ಟರು ಉಡುಪಿಗೆ ಅರ್ಚಕರಾಗಿ ಸೇರ್ಪಡೆಗೊಂಡರು. ಉಡುಪಿಗೆ ಬಂದ ಅನಂತರ ವಿ| ಹಯಗ್ರೀವ ಆಚಾರ್ಯರಲ್ಲಿ ವೇದಾಂತ, ವ್ಯಾಕರಣಗಳನ್ನು ಕಲಿತರು.

ಮೊದಲ ವರ್ಷ ಲಕ್ಷ್ಮೀ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ, ಅನಂತರದಲ್ಲಿ ವೆಂಕಟರಮಣ ಸನ್ನಿಧಿಯ ಪೂಜಾ ಕೈಂಕರ್ಯವು ದೊರಕಿತು. ಅದಾಗಿ 21 ವರ್ಷ ಪರ್ಯಂತ ವೆಂಕಟರಮಣನ ಸನ್ನಿಧಿಯಲ್ಲೆ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದರು. ಇವರಿಗೆ ಮೊದಲಿನಿಂದಲೂ ಬಂದ ದೈವದತ್ತವಾದ ಅನುಗ್ರಹದಿಂದ ದೇವರ ಅಲಂಕಾರಗಳನ್ನುನಡೆಸುವಲ್ಲಿ ಸಿದ್ಧಹಸ್ತ ರಾದರು.  ಇವರ ಅಲಂಕಾರ ಸೇವೆಯನ್ನು ಗಮನಿಸಿ ಕೈವಲ್ಯ ಮಠದ ಶ್ರೀಮದ್‌ ಸಚ್ಚಿದಾನಂದ ಗೌಡಪಾದಾಚಾರ್ಯರು “ಅಲಂಕಾರ ವಿಶಾರದ’ ಬಿರುದನ್ನು ನೀಡಿದ್ದಾರೆ.

ದೇಗುಲದ ಮಹಿಳಾ ಮಂಡಳಿಯವರಿಗೆ ಭಟ್ಟರು ನಾನಾತರದ ವ್ರತಾಚರಣೆ, ಧಾರ್ಮಿಕ ಕಾರ್ಯಕ್ರಮಗಳ ಪರಿಚಯ ಮತ್ತು ಮಾರ್ಗದರ್ಶನಗಳನ್ನಿತ್ತು ಉತ್ತೇಜಿಸಿ ದರು. ಇವರು ಪರಾನ್ನ ಭೋಜನ ನಿಷೇಧ ವ್ರತವನ್ನು 37 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇವರು ಧಾರ್ಮಿಕ ಜಾಗೃತಿಗಾಗಿ ಸರಳ ಪ್ರಕಟನೆಗಳನ್ನು ಹೊರತಂದಿದ್ದಾರೆ.  ಭಟ್ಟರು ಜ್ಯೋತಿಷ್ಯಶಾಸ್ತ್ರದಲ್ಲಿ ನೈಪುಣ್ಯ ಪಡೆದವರಿದ್ದಾರೆ. ಸುಲಭ ಪರಿಹಾರದ ಮಾರ್ಗದರ್ಶನ ಇವರ ವೈಶಿಷ್ಟé.  

ಅಲಂಕಾರಪ್ರಿಯನಿಗೆ ಅಲಂಕಾರಸೇವಕ
ಭಜನ ಸಪ್ತಾಹಗಳಲ್ಲಿ ಬಿಳಿಗಿ ಭಟ್ಟರು ಮಾಡಿದ ವಿಶೇಷ ಅಲಂಕಾರಗಳು ಪ್ರಸಿದ್ಧವಾಗಿದೆ. ಅನಂತಶಯನ, ಗಂಧಲೇಪಿತ ವೆಂಕಟರಮಣ, ಪಾರ್ಥಸಾರಥಿ, ವಿಠೊಭ, ಸೂರ್ಯನಾರಾಯಣ, ಕಾಳಿಯಮರ್ದನ ಕೃಷ್ಣ, ವಟಪತ್ರಶಾಯಿ, ಮತ್ಸಾéವತಾರ, ಕೂರ್ಮಾವತಾರ, ಗಜಲಕ್ಷಿ¾à, ಸರಸ್ವತಿ, ಗರುಡ ವಾಹನ, ಶ್ರೀದೇವಿ ಭೂದೇವಿ ಸಹಿತ ವೆಂಕಟರಮಣ, ದುರ್ಗಾದೇವಿ ಪೂಲಂಗಿ ಅಲಂಕಾರ, ರಾಮಚಂದ್ರ, ಸತ್ಯಭಾಮಾ, ಜೋಕಾಲೆ ವೆಂಕಟರಮಣ ಹೀಗೆ ನಾನಾ ಬಗೆಯಾಗಿ ಅಲಂಕರಿಸಿದ್ದಾರೆ. 

ಟಾಪ್ ನ್ಯೂಸ್

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.