ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾಮಗಾರಿ
Team Udayavani, Jan 19, 2019, 12:30 AM IST
ಹೆಬ್ರಿ: ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಹೆಬ್ರಿ ಸಮೀಪ ಕೆರೆಬೆಟ್ಟು ಶ್ರೀ ಮಹಾಲಿಂಗೇಶ್ವ ರ ಮಹಾಗಣಪತಿ ದೇವಸ್ಥಾನದ ಜೀಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಪುನ: ಪ್ರತಿಷ್ಠೆ , ನೂತನ ಗಣಪತಿ ದೇವರಗುಡಿ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ಸಾನ್ನಿಧ್ಯವು ಚಾರ ಮತ್ತು ಕಳೂ¤ರು ಗ್ರಾಮಗಳಿಗೆ ಸೇರಿದ್ದಾಗಿದ್ದು ಊರ ಪರವೂರ ಭಕ್ತರಿಂದ ಅಭಿವೃದ್ಧಿ ಕಾರ್ಯ ಆಗಬೇಕಾಗಿದೆ. ಈಗಾಗಲೇ ಪುನ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ನಿರ್ಣಯದಂತೆ ಸುಮಾರು 51 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಗಣಪತಿ ದೇವರ ನೂತನ ಗುಡಿ ನಿರ್ಮಾಣ, ಬೊಬ್ಬರ್ಯ ಗುಡಿ ನಿರ್ಮಾಣ,ಅರ್ಚಕ ನಿವಾಸ,ಸುತ್ತು ಪೌಳಿಗೆ ಕಲ್ಲು ಹಾಸುವಿಕೆ,ಪೌಳಿಯ ಹಂಚುಮಾಡಿನ ಪುನ: ದುರಸ್ತಿ,ಅಶ್ವತ ಕಟ್ಟೆ ನಿರ್ಮಾಣ,ಕೆರೆ ದುರಸ್ತಿ, ದೇವಾಲಯದ ಸುತ್ತ ಆವರಣ ಗೋಡೆ ಮೊದಲಾದ ಜೀರ್ಣೋದ್ಧಾರ ಕಾರ್ಯಗಳು ಹಾಗೂ ಅಷ್ಟಬಂಧ ಪುನ:ಪ್ರತಿಷ್ಠೆ, ಬ್ರಹ್ಮಕಲಶ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಾಗಿದೆ.
ಗ್ರಾಮೀಣ ಪ್ರದೇಶವಾದ ಇತಿಹಾಸವಿರುವ ಪುರಾತನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಕ್ತರ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದು ಈ ಮಹಾನ್ ಕಾರ್ಯಕ್ಕೆ ಧನ ಸಹಾಯ ಮಾಡುವವರು ಕರ್ನಾಟಕ ಬ್ಯಾಂಕ್, ಚಾರ ಪುನ: ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಾಲಯ , ಕೆರೆಬೆಟ್ಟು S.B A/C NO : 1782500100/29101 ಈ ಮೂಲಕ ಮಾಡಬಹುದೆಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ರತ್ನಾಕರ ಶೆಟ್ಟಿ ಕೆರೆಬೆಟ್ಟು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.