ಬನ್ನಂಜೆ ದೇವಸ್ಥಾನ: ಶಿವರಾತ್ರಿ, ರಥೋತ್ಸವಕ್ಕೆ ಚಾಲನೆ
Team Udayavani, Mar 3, 2019, 12:40 AM IST
ಉಡುಪಿ: ದೇವರು ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಉಳಿಸುವ ಶಕ್ತಿ ಭಾರತೀಯ ಸಂಸ್ಕೃತಿಗೆ ಇದೆ. ಅದನ್ನು ಮಕ್ಕಳಿಗೆ ಅರ್ಥೈ ಸುವ ಜವಾಬ್ದಾರಿ ಪೋಷಕರದು ಎಂದುಅಂಬಲಪಾಡಿ ಶ್ರೀ ಜನಾರ್ದನ ಮಹಾ ಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ತಿಳಿಸಿದ್ದಾರೆ.ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಾಶಿವರಾತ್ರಿ ಹಾಗೂ ರಥೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಶ್ರೀಕೃಷ್ಣ ಮಠಕ್ಕೂ ನೇರವಾದ ಸಂಬಂಧವಿದೆ. ಮಧ್ವಾಚಾ ರ್ಯರು ಈ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇಂದಿಗೂ ಅಷ್ಟ ಮಠಗಳ ಶ್ರೀಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದರು.
ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಟಿ.ಜೆ. ಹೆಗ್ಡೆ, ಆದಿಉಡುಪಿ ಪ್ರೌಢ – ಪ್ರಾಥಮಿಕ ಶಾಲೆಯ ಸಂಚಾಲಕ ಶಶಿಕಾಂತ್ ತಂತ್ರಿ, ನಂದಾ ಗೋಲ್ಡ್ ಮಾಲಕ ಸದಾನಂದ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಪ್ರಭಾಕರ ಶೆಟ್ಟಿ ಬನ್ನಂಜೆ, ಸುದೇಶ್ ಶೇಟ್, ವಾಸುದೇವ ಉಪಾಧ್ಯಾಯ, ಸತೀಶ್ ಭಂಡಾರಿ, ನಿತ್ಯಾನಂದ ಬನ್ನಂಜೆ, ಅರುಂಧತಿ ಉಪಸ್ಥಿತರಿದ್ದರು.
ವಿದ್ವಾನ್ ಶ್ರೀಧರ ರಾವ್ ಭರತನಾಟ್ಯ ಪ್ರಸ್ತುತಪಡಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಪೂಜಾರಿ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.