ಆಮಂತ್ರಣ ಪತ್ರಿಕೆಯಲ್ಲಿ ಶ್ರೀಕೃಷ್ಣ ಮಠ ವೈಭವ ಅನಾವರಣ
Team Udayavani, Jan 11, 2018, 6:45 AM IST
ಉಡುಪಿ: ನವಗ್ರಹ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ನೋಡಬಹುದು, ಜಯ ವಿಜಯ ದೇವರ ಸುಂದರ ಮೂರ್ತಿ ಯನ್ನು ಕಣ್ತುಂಬಿಸಿ ಕೊಳ್ಳಬಹುದು, ಮೂರು ಕಲಶಗಳ ಸಹಿತ ಚಿನ್ನದ ಹೊದಿಕೆಯ ಗರ್ಭಗುಡಿಯ ಅಪೂರ್ವ ಬಿಂಬವನ್ನೇ ನೋಡಿ ಧನ್ಯರಾಗ ಬಹುದು. ಮಾತ್ರವಲ್ಲ ಗರ್ಭಗುಡಿಯ ಹಿಂಭಾಗದ ಸುಂದರ ಚಿತ್ರಣವನ್ನು ಕೂಡ ನೋಡಬಹುದು.
ಹೌದು. ಇದಕ್ಕೆ ಶ್ರೀಕೃಷ್ಣನ ಸನ್ನಿಧಾನಕ್ಕೆ ತೆರಳಬೇಕಾಗಿಲ್ಲ. ಈ ಬಾರಿಯ ಸರ್ವಜ್ಞ ಪೀಠವೇರಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಂಡರೆ ಸಾಕು. ಹಲವು ವೈಶಿಷ್ಟé, ಆಕರ್ಷಣೆಗಳಿಂದ ಭಕ್ತ ಜನಸಮೂಹದಲ್ಲಿ ವಿಶೇಷವಾದ ಕುತೂಹಲಗಳನ್ನು ಮೂಡಿಸಿರುವ ಪಲಿಮಾರು ಶ್ರೀಗಳ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಕೂಡ ವಿಶಿಷ್ಟವೇ. ಒಟ್ಟು 12 ಪುಟಗಳುಳ್ಳ ಮುಖ್ಯ ಆಮಂತ್ರಣ ಪತ್ರಿಕೆಯ ಮುಖಪುಟ ಗರ್ಭಗುಡಿಯ ಎದುರು ಭಾಗದ ಅತ್ಯಪೂರ್ವ ನೋಟವನ್ನು ನಮ್ಮ ಕಣ್ಣಿಗೆ ಕಟ್ಟಿಕೊಡುತ್ತದೆ. ನವಗ್ರಹಕಿಂಡಿಯ ದೃಶ್ಯ ಸಮೇತವಾಗಿ ನಮಗೆ ಶ್ರೀಕೃಷ್ಣನ ಸನ್ನಿಧಾನವನ್ನು ದರ್ಶಿಸಿದ ಅನುಭವ ನೀಡುತ್ತದೆ.
ಪುಟ ತಿರುವಿದಾಗ ಮಧ್ವಾ ಚಾರ್ಯರು ಮತ್ತು ವಾದಿರಾಜರ ಸುಂದರ ಮೂರ್ತಿಗಳು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮತ್ತು ಗುರು ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು, ಅನಂತರ ಪುಟದಲ್ಲಿ ವಜ್ರ ಕವಚಧಾರಿ ಶ್ರೀಕೃಷ್ಣನ ಅಪೂರ್ವ ಚಿತ್ರ, ಮುಂದಿನ ಪುಟಗಳಲ್ಲಿ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಪರ್ಯಾಯ ಕಾರ್ಯಕ್ರಮಗಳ ವಿವರಗಳು, ಪಲಿಮಾರು ಶ್ರೀಗಳ ಪಟ್ಟದ ದೇವರಾದ ರಾಮ, ಲಕ್ಷ್ಮಣ, ಸೀತೆಯರ ವಿಗ್ರಹಗಳ ಚಿತ್ರ, ಬಂಗಾರದ ತೊಟ್ಟಿಲಿನಲ್ಲಿರುವ ಉಡುಪಿ ಶ್ರೀಕೃಷ್ಣ, ಚಿನ್ನದ ರಥ, ಲಕ್ಷ ತುಳಸಿ ಅರ್ಚನೆಯ ಶ್ರೀಕೃಷ್ಣ, ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಅಭಿಷೇಕ ಮಾಡುವ ಧನ್ಯತೆಯ ಕ್ಷಣ… ಹೀಗೆ ಒಂದೊಂದು ಪುಟವೂ ಆಕರ್ಷಕ. ಕೊನೆಯ ಪುಟ ತಿರುವಿದಾಗ ಶ್ರೀಕೃಷ್ಣನ ದರ್ಶನ ಮಾಡಿ ಗರ್ಭಗುಡಿಯ ಹಿಂಭಾಗ ಬಂದು ಪಾವನ ಭಾವ ದೊಂದಿಗೆ ಗರ್ಭಗುಡಿಯ ಸನಿಹದಿಂದ ಹೊರಡಲು ಅನುವಾಗುವ ಅನುಭವ !
ಉಗ್ರಾಣ ಅಲಂಕಾರ ಆಕರ್ಷಣೆ
ಉಡುಪಿ ಕೃಷ್ಣಮಠಕ್ಕೆ ಆಗಮಿಸುವ ಭಕ್ತರಿಗೀಗ ಇನ್ನೊಂದು ಆಕರ್ಷಣೆ ತಾಣವೆಂದರೆ ಅದು ಪರ್ಯಾಯೋತ್ಸವ “ಉಗ್ರಾಣ’. ಪ್ರತಿನಿತ್ಯ ಹೊರೆಕಾಣಿಕೆಗಳು ಸಮರ್ಪಣೆಯಾಗುತ್ತಿದ್ದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಹೊರೆಕಾಣಿಕೆಯಲ್ಲಿ ಬಂದ ಸಾಮಾಗ್ರಿಗಳನ್ನು ಆಕರ್ಷಕವಾಗಿ ಜೋಡಿಸಿಡುತ್ತಿದ್ದಾರೆ. ಹೊರೆಕಾಣಿಕೆ ಹೊತ್ತ ವಾಹನಗಳು ಉಗ್ರಾಣದತ್ತ ಆಗಮಿಸುತ್ತಿದ್ದಂತೆಯೇ ಮಹಿಳೆಯರೂ ಸೇರಿದಂತೆ ಯೋಜನೆಯ ಸದಸ್ಯರು ಅಕ್ಕಿ, ತರಕಾರಿ ಸೇರಿದಂತೆ ವಿವಿಧ ಪರಿಕರಗಳನ್ನು ನಿಗದಿತ ಸ್ಥಳದಲ್ಲಿ ಚೊಕ್ಕಟವಾಗಿ ಅತ್ಯಂತ ಉಮೇದಿನಿಂದ ಸಂಗ್ರಹಿಸಿಡುತ್ತಾರೆ.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.