ರಟ್ಟಾಡಿ: ಶ್ರೀ ರಟ್ಟೇಶ್ವರ ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಡಬ್ಬ, ಸಿಸಿ ಕೆಮರಾದ ಹಾರ್ಡ್ ಡಿಸ್ಕ್ ಕಳವು
Team Udayavani, Dec 30, 2022, 11:58 PM IST
ಸಿದ್ದಾಪುರ: ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿಯ ಶ್ರೀ ರಟ್ಟೇಶ್ವರ ದೇವಸ್ಥಾನದ ಒಳ ಪ್ರವೇಶಿಸಿದ ಕಳ್ಳರು, ಹೆಬ್ಟಾಗಿಲು ಬಳಿ ಇರುವ ಕಾಣಿಕೆ ಡಬ್ಬ ಹಾಗೂ ಸಿಸಿ ಕೆಮರಾದ ಹಾರ್ಡ್ ಡಿಸ್ಕ್ ಕಳವು ಮಾಡಿದ ಘಟನೆ ಡಿ. 25ರಂದು ನಡೆದಿದೆ. ದೇವಸ್ಥಾನದ ಆಡಳಿತ ಮಂಡಳಿ ತಡವಾಗಿ ದೂರು ನೀಡಿದ್ದಾರೆ.
ಕಳ್ಳರು ದೇವಸ್ಥಾನದ ಗರ್ಭ ಗುಡಿಯ ಬಾಗಿಲು ತೆರೆಯಲಿಲ್ಲ. ಹೊರಭಾಗದ ಕಾಣಿಕೆ ಡಬ್ಬ ಮತ್ತು ನಾಗ ದೇವರ ಹತ್ತಿರ ಇರುವ ಬೀಗ ಒಡೆದಿದ್ದು, ಡಬ್ಬಿಯಲ್ಲಿದ್ದ ಸುಮಾರು 40 ಸಾವಿರ ರೂ. ಕಳವು ಮಾಡಿದ್ದಾರೆ.
ಕಚೇರಿಯ ಬಾಗಿಲು ಮುರಿದು ಒಳ ಪ್ರವೇಶಿಸಿ, ಸಿಸಿ ಕೆಮರಾದ ಹಾರ್ಡ್ ಡಿಸ್ಕ್ ಕಳವು ಮಾಡಿದ್ದಾರೆ. ಇದರ ಮೌಲ್ಯ ಅಂದಾಜು 7 ಸಾವಿರ ರೂ., ಗಿದೆ. ಒಟ್ಟು ಅಂದಾಜು 47 ಸಾವಿರ ಕಳ್ಳತನವಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.