ಅಕ್ಷರದಾಹಿಗಳ ಬಾಳಿಗೆ ಬೆಳಕಾಗಿ ನಿಂತ ಕನ್ನಡ ಜ್ಞಾನ ದೇಗುಲ

ಕಟಪಾಡಿ ಶ್ರೀ ವೆಂಕಟರಮಣ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

Team Udayavani, Nov 12, 2019, 5:00 AM IST

1011KPT1E2A

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಕಟಪಾಡಿ: ಪರಿಸರದ ಮಕ್ಕಳು ವಿದ್ಯಾಭ್ಯಾಸ ಪಡೆಯಬೇಕು. ಅಕ್ಷರ ಜ್ಞಾನದ ದೀವಿಗೆಯನ್ನು ಬೆಳಗುವಂತಾಗಬೇಕೆಂಬ ಮಹದಭಿಲಾಷೆಯಿಂದ ಕಟಪಾಡಿ ಪೇಟೆವೆಂಕಟರಮಣ ದೇಗುಲದ ಬಳಿ ಅಕ್ಷರವನ್ನು ಬಿತ್ತಿದ ಚರಡಪ್ಪ ಶ್ಯಾನುಬಾಗ್‌ ಅವರ ಕನಸಿಗೆ ಸುದೀರ್ಘ‌ 126 ವರ್ಷ.

1893ರಲ್ಲಿ ಬೆಳಗಿದ ಅಕ್ಷರ ಜ್ಯೋತಿ 1914ರಲ್ಲಿ ಅಡಳಿತ ಮಂಡಳಿಯೊಂದರ ಅಸ್ತಿತ್ವದೊಂದಿಗೆ, 1915ರ ಶುಭ ಘಳಿಗೆಯಲ್ಲಿ ಹೆಂಚಿನ ಕಟ್ಟಡವಾಗಿ ಸ್ವರೂಪ ಪಡೆದು ಅದೆಷ್ಟೋ ಅಕ್ಷರ ದಾಹಿಗಳ ಬಾಳಿಗೆ ಬೆಳಕಾಗಿ ಬದುಕನ್ನು ಕಟ್ಟಿ ಕೊಡುವ ಮೂಲಕ ಸಮಾಜವನ್ನು ಸುಸಂಸ್ಕೃತ, ಸಂಪದ್ಭರಿತವಾಗಿರಿಸಿದ ಕೀರ್ತಿ ಕಟಪಾಡಿಯ ಶ್ರಿ ವೆಂಕಟರಮಣ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ(ಎಸ್‌ವಿಎಸ್‌)ಯದ್ದು. ಪಾಂಗಾಳ ನಾಯಕ್‌ ಮನೆತನದವರು ನೀಡಿದ ಸುಮಾರು 2 ಎಕರೆಯಷ್ಟು ಸ್ಥಳದಲ್ಲಿ ಪೇಟೆ ವೆಂಕಟರಮಣ ದೇವರು ಮೊದಲು ವನಭೋಜನ ಪಡೆಯುವ ಸ್ಥಳದಲ್ಲಿ ,ಅನುಗ್ರಹದೊಂದಿಗೆ ಕನ್ನಡ ಶಾಲೆಯೊಂದು ಸುಸಜ್ಜಿತವಾಗಿ ತಲೆ ಎತ್ತಿ ನಿಂತಿದೆ.

ಶಾಲೆಯಿಂದ ಹಲವು ವಿಶೇಷ ಯೋಜನೆಗಳು
ನೂರು ವರ್ಷ ಪೂರೈಸಿದಾಗ ಕನ್ನಡ ಶಾಲೆಯು ಹೊಂದಿದ್ದ ಸಂಭ್ರಮವು ಶತಮಾನದಂಚಿಗೆ ಸರಿಯುತ್ತಿದೆ. ಆಧುನಿಕ ಶಿಕ್ಷಣದ ಪರಿವರ್ತನೆಗೆ ಅನುಗುಣವಾಗಿ ಎಸ್‌ವಿಎಸ್‌ ವಿದ್ಯಾವರ್ಧಕ ಸಂಘವು ಅಕ್ಷರ ಯಜ್ಞವನ್ನು ಮುಂದುವರೆಸುತ್ತಿದೆ. ಬಯೋಗ್ಯಾಸ್‌ ಘಟಕ ಸ್ಥಾಪಿಸಿ ಗುಣಮಟ್ಟದ ಅನ್ನದಾಸೋಹ, ತ್ಯಾಜ್ಯಕ್ಕೆ ಮುಕ್ತಿ ಕಂಡುಕೊಂಡಿದ್ದು, ತರಕಾರಿ, ಹೂದೋಟಕ್ಕೆ ಸಿದ್ಧತೆ ನಡೆಯುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ಸುಮಾರು 203 ವಿದ್ಯಾರ್ಥಿಗಳಿಗೂ ಲಭಿಸುತ್ತಿದೆ. ಓರ್ವ ಮುಖ್ಯೋಪಾಧ್ಯಾಯ ಮತ್ತು 7 ಗೌ.ಶಿಕ್ಷಕರು ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದಾರೆ. ಅಂದಿನ ಮುಖ್ಯೋಪಾಧ್ಯಾಯಿನಿ ಸುಲೋಚನಾ ಕೊಡವೂರು ಜಿಲ್ಲಾ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದು ಸ್ಮರಣೀಯ.

ವೈದ್ಯ ಲೋಕಕ್ಕೆ ಕೊಡುಗೆ
ಮಣಿಪುರ, ಉದ್ಯಾವರ ಹೊಳೆಯನ್ನು ದೋಣಿ ಮೂಲಕ ದಾಟಿಕೊಂಡು ಹಾಗೂ ಕಾಪು, ಪಾಂಗಾಳದ ಶಿಕ್ಷಣಾಕಾಂಕ್ಷಿಗಳು ಶಿಕ್ಷಣವನ್ನು ಪಡೆದಿರುತ್ತಾರೆ. ಆ ಮೂಲಕ ಖ್ಯಾತ ನರರೋಗ ತಜ್ಞ ಡಾಣಕೆ.ಆರ್‌.ಶೆಟ್ಟಿ, ಸ್ಕಿನ್‌ ಸ್ಪೆಷಲಿಸ್ಟ್‌ ಡಾಣಜೆ.ಎನ್‌.ಶೆಟ್ಟಿ, ಕೆಎಂಸಿ ಸರ್ಜನ್‌ ಡಾಣರಾಜ್‌ಗೊàಪಾಲ್‌ ಶೆಣೈ, ಆಥೋìಪೆಡಿಕ್‌ ಡಾಣಸುರೇಶ್‌ ಶೆಣೈ, ಮಿಷನ್‌ ಆಸ್ಪತ್ರೆಯ ಇನ್‌ಚಾರ್ಜ್‌ ಡಾಣಗಣೇಶ್‌ ಕಾಮತ್‌, ಡಾಣರವೀಂದ್ರನಾಥ ಎ. ಶೆಟ್ಟಿ ಮೊದಲಾದ ವೈದ್ಯ ಲೋಕದ ಅಚ್ಚರಿಗಳ ಕೊಡುಗೆ ಎಸ್‌ವಿಎಸ್‌ ಕನ್ನಡ ಶಾಲೆಯದ್ದು.

ರಾಜಕೀಯ ಕ್ಷೇತ್ರಕ್ಕೂ ಕೊಡುಗೆ
ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಜಿ.ಎಂ. ಆದ ಸಂತೋಷ್‌ ಕಾಮತ್‌, ಕೆನರಾ ಬ್ಯಾಂಕ್‌ನ ರಮೇಶ್‌ ಪೈ, ಮೊದಲಾದವರನ್ನು ಬ್ಯಾಂಕಿಂಗ್‌ ಕ್ಷೇತ್ರಕ್ಕೆ, ಕರ್ನಾಟಕದ ಮಂತ್ರಿಯಾಗಿ ದಕ್ಷ ರಾಜಕಾರಣಿ ದಿಣ ವಸಂತ ವಿ.ಸಾಲ್ಯಾನ್‌, ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಸಹಿತ ಅನೇಕರು ರಾಜಕೀಯ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದು, ಅನಿವಾಸಿ ಭಾರತೀಯ ಉದ್ಯಮಿ ಹಿಲರಿ ಪಿಂಟೋ, ಇಂಡಿಯನ್‌ ಆಯಿಲ್‌ನ ಕೆ. ಉಲ್ಲಾಸ್‌ ಕಾಮತ್‌, ಉದ್ಯಮಿ ಪಾಂಗಾಳ ರಬೀಂದ್ರ ನಾಯಕ್‌, ಇಂದ್ರಾಳಿ ಶಾಲೆಯೊಂದರ ಮುಖ್ಯಸ್ಥ ವಿನಾಯಕ ಕಿಣಿ ಕೂಡಾ ಇದೇ ಕಟಪಾಡಿ ಎಸ್‌ವಿಎಸ್‌ ಕನ್ನಡ ಶಾಲೆಯ ಹಳೆ ವಿದ್ಯಾರ್ಥಿಗಳು ಎಂದು ಶಾಲಾಡಳಿತ ಮಂಡಳಿ ಮಾಹಿತಿ ನೀಡಿದೆ.

ಮಕ್ಕಳ ಸಂಖ್ಯೆಗನುಗುಣವಾಗಿ ಅಧ್ಯಾಪಕರ ನೇಮಕಾತಿಯಾಗಲಿ. ದುರಸ್ತಿ ಕಾರ್ಯಕ್ಕೆ ಅನುದಾನ ಒದಗಿಸಲಿ.ಸರಕಾರದ ಎಲ್ಲಾ ಸವಲತ್ತುಗಳು ಅನುದಾನಿತ ಶಾಲಾ ಮಕ್ಕಳಿಗೂ ಲಭಿಸುವಂತಾಗಲಿ .
-ಶ್ರೀಧರ ಭಟ್‌, ಮುಖ್ಯೋಪಾಧ್ಯಾಯ

ಅಂಬಾಡಿ ಬೀಡು ಪ್ರದೇಶದಿಂದ ಬಂದು ಕಲಿತು ಮೌಲ್ಯಯುತ ಶಿಕ್ಷಣದ ಗಟ್ಟಿ ತಳಹದಿಯ ಮೂಲಕ ಈ ಶಾಲೆ ನನ್ನ ಬಾಳಿಗೆ ಬೆಳಕು ನೀಡಿದೆ. ಇಂದು ವೈದ್ಯನಾಗಿ ಕಟಪಾಡಿ ಜನರ ಸೇವೆಯನ್ನು ನಡೆಸುವಂತಾಗಿದೆ .
-ಡಾ.ಎ.ರವೀಂದ್ರನಾಥ ಶೆಟ್ಟಿ ,
ವೈದ್ಯ, ಕಟಪಾಡಿ( ಹಳೆ ವಿದ್ಯಾರ್ಥಿ)

ವಿಜಯ ಆಚಾರ್ಯ ಕಟಪಾಡಿ

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.