ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು: 81 ವರ್ಷಗಳ ಸನ್ಯಾಸ, 6 ವರ್ಷ ಉಪವಾಸ!
Team Udayavani, Dec 12, 2019, 5:00 AM IST
ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇದುವರೆಗೆ ಒಟ್ಟು ಆರು ವರ್ಷ ಉಪವಾಸ ಮಾಡಿರುವುದು ಒಂದು ವಿಶೇಷವೇ ಸರಿ. 1931ರ ಎ. 27ರಂದು ಜನಿಸಿದ ಇವರು ಸನ್ಯಾಸಾಶ್ರಮ ಸ್ವೀಕರಿಸಿದ್ದು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಮಾಸದ ದಶಮಿಯಂದು (1938ರ ಡಿ.3). ಅದರ ಮರುದಿನವೇ ಏಕಾದಶಿ. ಸನ್ಯಾಸಾಶ್ರಮದ ಮರುದಿನವೇ ಇವರಿಗೆ ಏಕಾದಶಿ ಉಪವಾಸ ಅಭ್ಯಾಸ ಶುರುವಾಯಿತೆನ್ನಬಹುದು. ಸನ್ಯಾಸಾಶ್ರಮ ಸ್ವೀಕರಿಸಿ 81 ವರ್ಷಗಳು ಸಂದಿವೆ.
ಪ್ರತಿ 15 ದಿನಗಳಿಗೊಮ್ಮೆ ಬರುವ ಏಕಾದಶಿಯಂತೆ ವರ್ಷಕ್ಕೆ 24 ಏಕಾದಶಿ, ವರ್ಷದಲ್ಲಿ ಎರಡು ಗ್ರಹಣ, ಒಂದು ಕೃಷ್ಣಾಷ್ಟಮಿ- ಇವುಗಳನ್ನು ಸೇರಿಸಿದರೆ ವರ್ಷಕ್ಕೆ ಕನಿಷ್ಠ 27 ದಿನ ನಿರ್ಜಲ ಉಪವಾಸ ಮಾಡುತ್ತಾರೆ. ಅವರ ಇತ್ತೀಚೆಗಿನ ಏಕಾದಶಿ ಉಪವಾಸವೆಂದರೆ ಗೀತಾ ಜಯಂತಿಯಂದು.
27 ದಿನ * 81 ವರ್ಷ = ಒಟ್ಟು 2,187 ದಿನಗಳಾಗುತ್ತವೆ. ಇದು 5 ವರ್ಷಗಳು ಮತ್ತು 362 ದಿನಗಳಿಗೆ ಸಮನಾಯಿತು. ಅಂದರೆ ಸ್ವಾಮೀಜಿ ಸುಮಾರು 6 ವರ್ಷ ಉಪವಾಸ ಮಾಡಿ ದ್ದಾರೆ. ಇದರಲ್ಲಿ ಅಧಿಕ ಮಾಸದ ಏಕಾದಶಿ ಲೆಕ್ಕ, ಶ್ರವಣೋಪವಾಸಗಳು ಸೇರಿಲ್ಲ. 27 ದಿನಗಳಿಗೊಮ್ಮೆಯ ಚಾಂದ್ರಮಾನ ತಿಂಗಳನ್ನು ಸೌರಮಾಸದ 30 ದಿನಗಳ ತಿಂಗಳಿಗೆ ಸರಿಹೊಂದಿಸಲು 4 ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ. ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಎರಡು ಏಕಾದಶಿಗಳು ಪ್ರತ್ಯೇಕ. ಏಕಾದಶಿಯ ಮರುದಿನ ಸೂರ್ಯೋದಯದ ವೇಳೆ ಶ್ರವಣ ನಕ್ಷತ್ರವಿದ್ದರೆ ದ್ವಾದಶಿಯಂದೂ ಉಪವಾಸ ಕೈಗೊಳ್ಳುತ್ತಾರೆ – ಇದು ಶ್ರವಣೋಪವಾಸ. ಇದು ವರ್ಷಕ್ಕೆ ಒಂದೆರಡು ಬಾರಿ ಬರುತ್ತದೆ. ಇದು ಸತತ ಎರಡು ದಿನಗಳ ಉಪವಾಸ.
ಮೊದಲ 8 ವರ್ಷ ಬಾಲ್ಯವಾಯಿತು. ಒಟ್ಟು 81 ವರ್ಷಗಳ ಸನ್ಯಾಸದಲ್ಲಿ ಉಪವಾಸದ ದಿನಗಳೇ 6 ವರ್ಷಗಳಾದವು. ಇಷ್ಟೊಂದು ದಿನ ಉಪವಾಸ ಮಾಡಿದವರು ಬೇರೆ ಯಾರಾದರೂ ಇರುವುದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾರಾದರೂ ಗಿನ್ನೆಸ್ ದಾಖಲೆಗೆ ಸೇರಿಸುವುದಾದರೆ ಇದೊಂದು ದಾಖಲೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.