5 ಸಾವಿರ ವಿಷ ಸರ್ಪಗಳ ಹಿಡಿದು ದಾಖಲೆ ನಿರ್ಮಿಸಿದ ಶ್ರೀಧರ ಐತಾಳ್
ಅಳಿವಿನಂಚಿನಲ್ಲಿರುವ ಉರಗ ಸಂತತಿ ರಕ್ಷಣೆಯ ತುಡಿತ
Team Udayavani, Feb 10, 2020, 7:30 AM IST
ಕೋಟೇಶ್ವರ: ಆಟವಾಡುವ ಪ್ರಾಯದಲ್ಲೇ ಸುತ್ತಮುತ್ತಲಿನ ಹಾವುಗಳನ್ನು ಚಾಕ ಚಕ್ಯತೆಯಿಂದ ಹಿಡಿಯುವ ಹವ್ಯಾಸ ಬೆಳೆಸಿಕೊಂಡಿರುವ ಶ್ರೀಧರ ಐತಾಳ್ ಅವರು ಇದೀಗ ತಮ್ಮ 68 ರ ಇಳಿ ವಯಸ್ಸಿನಲ್ಲಿ ಒಟ್ಟು 5 ಸಾವಿರ ಹಾವುಗಳನ್ನು ಹಿಡಿಯುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕೋಟೇಶ್ವರದ ದಿ|ಕುಪ್ಪ ಐತಾಳ್ ಹಾಗು ಗಂಗಾ ಭಾಗೀರಥಿ ಯಮ್ಮನವರ ಪುತ್ರ ಶ್ರೀಧರ ಐತಾಳರು ಆಸುಪಾಸಿನ ಗ್ರಾಮಸ್ಥರಿಗೆಲ್ಲ ಹಾವು ಐತಾಳರೆಂದೇ ಪರಿಚಿತರು. ಕುಂದಾಪುರ ಹಾಗು ಬೈಂದೂರು ತಾಲೂಕಿನ ವಿವಿಧ ಗ್ರಾಮಗಳ ಮನೆ, ಅಂಗಡಿ ಹೀಗೆ ವಿವಿಧೆಡೆ ಕಾಣಿಸಿಕೊಳ್ಳುವ ವಿಷಪೂರಿತ ನಾಗರ ಹಾವು, ಕನ್ನಡಿ ಹಾವು ಹೀಗೆ ಯಾವುದೇ ಹಾವಿರಲಿ ಥಟ್ಟನೆ ಕರೆ ಹೋಗುವುದು ಐತಾಳರಿಗೆ. ಅಲ್ಲಿಗೆ ಆಗಮಿಸುವ ಐತಾಳರು ಹಾವಿರುವ ಜಾಗ ಗುರುತಿಸಿ ಚಾಕಚಕ್ಯತೆಯಿಂದ ಅವುಗಳನ್ನು ಹಿಡಿಯುತ್ತಾರೆ. ಅದನ್ನು ಕೊಡಪಾನವೊಂದಕ್ಕೆ ಹಾಕಿ ಬಾಯಿಕಟ್ಟಿ ಅರಣ್ಯ ಪ್ರದೇಶಕ್ಕೆ ಬಿಡುವ ಪರಿಪಾಠ ಹೊಂದಿದ್ದಾರೆ. ನಿತ್ಯ ಕನಿಷ್ಠ 3 -4 ನಾಗರಹಾವುಗಳನ್ನು ಹಿಡಿಯು ತ್ತಿರುವ ಐತಾಳರು ಈಗಾಗಲೇ 5 ಸಾವಿರ ಹಾವು ಹಿಡಿದಿದ್ದಾರೆ.
ಕೈಯಲ್ಲಿ ಕೋಲು ಮಾತ್ರ
ಕರೆದಲ್ಲಿಗೆ ಕೋಲು ಹಿಡಿದು ಧಾವಿಸುವ ಐತಾಳರು ಹಾವು ಹಿಡಿಯಲು ಬಳಸುವುದು ಒಂದು ಕೋಲು ಮಾತ್ರ. ಹಾವು ಅಡಗಿ ರುವ ಜಾಗಕ್ಕೆ ಹೋಗಿ ಅದನ್ನು ಕಂಡೊ ಡನೆ ಕುಂದಾಪುರ ಕನ್ನಡದಲ್ಲಿ ಪ್ರೀತಿಯಿಂದ ಮಾತನಾಡಿಸುವ ಪರಿ ಎಂಥವರನ್ನೂ ಚಕಿತಗೊಳಿ ಸುತ್ತದೆ. ಕ್ಷಣಾರ್ಧದಲ್ಲಿ ಹಾವನ್ನು ಹಿಡಿಯುವ ಅವರ ಕೈಯಲ್ಲಿ ಗರುಡ ರೇಖೆ ಇದೆ ಎಂಬ ಜನರ ಭಾವನೆಗೆ ಅವರದ್ದು ನಗುವೇ ಉತ್ತರ. ದೂರದ ಸೋಮೇಶ್ವರ,ಬೆಳ್ವೆ, ಆರ್ಡಿ, ಮಡಾಮಕ್ಕಿ, ಬೈಂದೂರು, ಶಿರೂರು, ಕೊಲ್ಲೂರು, ಮುಂತಾದೆಡೆ ಹೋಗುತ್ತಾರೆ.
ಕೇವಲ ಒಂದೋ ಎರಡೋ ಬಾರಿ ಹಾವಿನ ಕಡಿತದಿಂದ ಗಾಯಗೊಂಡಿದ್ದ ಅವರು ಸ್ವಯಂ ಔಷಧ ಪ್ರಯೋಗದಿಂದ ಗುಣಮುಖರಾಗಿದ್ದರು. ಹಾವು ಹಿಡಿಯು ವುದಕ್ಕೆ ನಿರ್ದಿಷ್ಟ ಶುಲ್ಕ ಬಯಸದ ಐತಾಳರು ಜನರು ಸಂತೋಷ ದಿಂದ ನೀಡುವ ಹಣವನ್ನಷ್ಟೇ ಪಡೆದು ತೃಪ್ತರಾಗುತ್ತಾರೆ.
ಔಷಧೋಪಚಾರ
ವಾಹನಗಳ ಚಕ್ರಕ್ಕೆ ಸಿಲುಕಿ ಅಥವಾ ಮುಂಗುಸಿಯಂತಹ ಪ್ರಾಣಿಗಳಿಂದ ದಾಳಿಗೊಳಗಾಗಿ ಗಾಯಗೊಂಡ ಹಾವುಗಳು ಕಂಡುಬಂದರೆ ಅವುಗಳನ್ನು ತಮ್ಮ ಮನೆಯ ಪ್ರತ್ಯೇಕ ಕೊಠಡಿಯಲ್ಲಿರಿಸಿ ಗಿಡಮೂಲಿಕೆಗಳನ್ನು ಬಳಸಿ ಶುಶ್ರೂಷೆ ಮಾಡಿ ಗುಣವಾದ ಮೇಲೆ ಬಿಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಹಾವುಗಳು ಮೃತಪಟ್ಟರೆ ವಿಧಿವಿಧಾನ ಪೂರೈಸಲು ಸಂಬಂಧಪಟ್ಟವರಿಗೆ ಹೇಳುತ್ತಾರೆ. ಚಿಕಿತ್ಸೆಗೆ ಸ್ಪಂದಿಸುವ ನಾಗರ ಹಾವಿಗೆ ನೀರು, ಮೊಟ್ಟೆ ಇನ್ನಿತರ ಆಹಾರವನ್ನು ನೀಡಿ ಅವುಗಳ ಮೈ ಸವರುವ ಪರಿ ಎಂಥವರನ್ನು ಮೈ ಜುಮ್ ಎನ್ನಿಸುತ್ತದೆ.
ಉರಗೋದ್ಯಾನದ ಆಶಯ
ಸರಕಾರವು ಗ್ರಾಮೀಣ ಪ್ರದೇಶದ ಸರಕಾರಿ ಜಾಗದಲ್ಲಿ ಉರಗೋದ್ಯಾನಕ್ಕೆ ಅವಕಾಶ ನೀಡಿದಲ್ಲಿ ಅವುಗಳ ಸಂತತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಸೇವೆ ಮಾಡಲು ಸಿದ್ಧನಿದ್ದೇನೆ. ಆ ಮೂಲಕ ನಶಿಸುತ್ತಿರುವ ಸಂತತಿ ಉಳಿಸಲು ಬದ್ಧನಾಗಿದ್ದೇನೆ ಎಂದು ಹೇಳುತ್ತಾರೆ. ಶ್ರೀಧರ ಐತಾಳರ ಸಾಹಸ ಪ್ರವೃತ್ತಿಯು ನಶಿಸಿ ಹೋಗುತ್ತಿರುವ ಹಾವುಗಳ ಸಂತತಿಗೊಂದು ಪ್ರೇರಕ ಶಕ್ತಿ. ಅವರ ಉರಗೋದ್ಯಾನದ ಕನಸು ನನಸಾಗಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು.
-ಗಣೇಶ್ ಶೆಟ್ಟಿ ಮೊಳಹಳ್ಳಿ ಪರಿಸರಪ್ರೇಮಿ
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
Dec. 29: ಪಡುಬಿದ್ರಿಯಲ್ಲಿ ಅಂತರ್‌ರಾಜ್ಯ ಬಂಟ ಕ್ರೀಡೋತ್ಸವ – ಎಂಆರ್‌ಜಿ ಟ್ರೋಫಿ
Udupi: ಕಲ್ಸಂಕ ಜಂಕ್ಷನ್; ಹಗಲು-ರಾತ್ರಿ ಟ್ರಾಫಿಕ್ ಕಿರಿಕಿರಿ
Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!
Kundapura: ಎಲ್ಲೆಡೆ ಹರಡಿದೆ ಕ್ರಿಸ್ಮಸ್ ಸಡಗರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.