ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ಸಾಂಸ್ಕೃತಿಕ – ಸಭಾ ಕಾರ್ಯಕ್ರಮ
Team Udayavani, Jan 19, 2018, 10:04 AM IST
ಉಡುಪಿ: ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ಕಿನ್ನಿಮೂಲ್ಕಿ ಉಡುಪಿ ಅವರಿಂದ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮವು ಬುಧವಾರ ನಡೆಯಿತು.
ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಉದ್ಘಾಟಿಸಿ, ಪ್ರತೀ ಪರ್ಯಾಯ ಸಂದರ್ಭ ವೈಭವದ ಕಾರ್ಯಕ್ರಮ ಆಯೋಜನೆ ಮಾಡುವು ದಲ್ಲದೆ, ಹಲವಾರು ಸಮಾಜಮುಖೀ ಕಾರ್ಯಕ್ರಮ ಗಳನ್ನು ಹಮ್ಮಿ ಕೊಂಡು ಬರುತ್ತಿರುವ ಈ ಸಂಘ ಟನೆಯ ನಿರ್ದೇಶಕ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಸೇವಾಕಾರ್ಯ ಶ್ಲಾಘನೀಯ ಎಂದರು.
ರಿಕ್ಷಾ ಯೂನಿಯನ್ ಸದಸ್ಯರಿಗೆ ವಿಮೆ
ಅಧ್ಯಕ್ಷತೆ ವಹಿಸಿದ್ದ ಉಡುಪಿ ಅದಾನಿ ಯುಪಿಸಿಎಲ್‌ಜಂಟಿ ಅಧ್ಯಕ್ಷ ಕೆ. ಕಿಶೋರ್ ಆಳ್ವ ಅವರು ನೂತನ ರಿಕ್ಷಾ ಚಾಲಕರು-ಮಾಲಕರ ಸಂಘ (ಯಶೋದಾ ಆಟೋರಿಕ್ಷಾ ಅಸೋಸಿಯೇಶನ್, ಉಡುಪಿ ಜಿಲ್ಲೆ) ವನ್ನು ಉದ್ಘಾಟಿಸಿದರು. ಸಚಿವ ಪ್ರಮೋದ್ ಮಧ್ವರಾಜ್ ಶುಭ ಹಾರೈಸಿದರು. ಆಸ್ಕರ್ ಫೆರ್ನಾಂಡಿಸ್ ಶುಭ ಹಾರೈಸಿದರು. ಡಾ| ನಿ.ಬೀ. ವಿಜಯ ಬಲ್ಲಾಳ್ ಶುಭಾಶಂಸನೆಗೈದರು.
ಗೌರವ ಅತಿಥಿಗಳಾಗಿ ಬ್ಲೋಸಂ ಫೆರ್ನಾಂಡಿಸ್, ಮೀನಾಕ್ಷಿ ಮಾಧವ ಬನ್ನಂಜೆ, ಅಮೃತಾ ಕೃಷ್ಣಮೂರ್ತಿ, ಯಶ್‌ಪಾಲ್ ಸುವರ್ಣ, ಅಧ್ಯಕ್ಷ ಎಂ.ಎ. ಗಫೂರ್, ಡಾ| ಜಿ.ಎಸ್. ಚಂದ್ರಶೇಖರ್, ಡಾ| ಕೃಷ್ಣಪ್ರಸಾದ್, ನರಸಿಂಹ ಮೂರ್ತಿ, ವಿಶ್ವಾಸ್ ಪಿ. ಅಮೀನ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಜಯಕರ ಶೆಟ್ಟಿ ಇಂದ್ರಾಳಿ, ಕೆ. ಉದಯ್ ಕುಮಾರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮುನಿಯಾಲ್, ನಾಗರಾಜ್ ಸುವರ್ಣ ಕೊಡವೂರು, ದಿನೇಶ್ ಜಿ. ಸುವರ್ಣ ಬಾಪುತೋಟ, ದಿನೇಶ್ ಪುತ್ರನ್, ಆನಂದ ಪಿ. ಸುವರ್ಣ, ಸಾದಿಕ್ ಅಹಮ್ಮದ್, ಸಂಜೀವ ಎ., ನಿರುಪಮಾ ಪ್ರಸಾದ್ ಶೆಟ್ಟಿ, ನವೀನ್ ಶೆಟ್ಟಿ, ಶಿರಾಜ್ ಪಾಟಿ, ಸತೀಶ ಪೂಜಾರಿ, ರವಿ ಶೆಟ್ಟಿ, ಡಿ. ಮಂಜುನಾಥಯ್ಯ, ರಘುನಾಥ ಕೋಟ್ಯಾನ್, ನಾಗೇಶ್ ಪೂಜಾರಿ ಕನ್ನರ್ಪಾಡಿ, ದಿನೇಶ್ ಕಿಣಿ ಭಾಗವಹಿಸಿದ್ದರು.
ಪರಿಕರ ವಿತರಣೆ – ಸಮ್ಮಾನ
ಇದೇ ಸಂದರ್ಭ 23 ಶಾಲೆಗಳಿಗೆ ನ್ಪೋರ್ಟ್ಸ್ ಕಿಟ್, 20 ಅಂಗನವಾಡಿ ಮಕ್ಕಳಿಗೆ ಆಟೋಟ ಸಾಮಗ್ರಿ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವನ್ನು ವಿತರಿಸಲಾಯಿತು. ನಿರೂಪಕ ಪ್ರೇಮ್ ಕುಮಾರ್, ಪ್ರಭಾಶಂಕರ ಪದ್ಮಶಾಲಿ ಅವರನ್ನು ಸಮ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಚೈತ್ರಾ ಸಾಲ್ಯಾನ್ ಎರ್ಮಾಳ್, ಚಲನಚಿತ್ರ ನಟರಾದ ಚಿರುಶ್ರೀ ಅಂಚನ್, ಸುಕೃತ ವಾಗ್ಲೆ, ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ, ಕನ್ನಡ ಸಿನೆಮಾ ನ್ಯಾಶನಲ್ ಅವಾರ್ಡ್ ವಿನ್ನರ್ ವಿನೀತ್ ಕುಮಾರ್, ಸೌರವ್ ಭಂಡಾರಿ, ದೇಹದಾಡ್ಯì ಪಟು ಉಮೇಶ್ ಮಟ್ಟು ಅವರನ್ನು ಸಮ್ಮಾನಿಸಲಾಯಿತು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.