ಇಂದು ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ 

Team Udayavani, Aug 30, 2021, 8:00 AM IST

ಇಂದು ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ 

ಉಡುಪಿ/ಮಂಗಳೂರು: ಶ್ರೀಕೃಷ್ಣಮಠ ಸಹಿತ ನಾಡಿನೆಲ್ಲೆಡೆ ಸೋಮವಾರ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಮಂಗಳವಾರ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಸಾಂಪ್ರದಾಯಿಕವಾಗಿ ನಡೆ ಯ ಲಿದೆ. ದ.ಕ. ಜಿಲ್ಲೆಯಲ್ಲಿ ಸಾರ್ವ ಜನಿ ಕ ವಾಗಿ ಶ್ರೀಕೃಷ್ಣಾಷ್ಟಮಿ ಆಚರಣೆಗೆ ಅವಕಾಶ ವಿಲ್ಲದ ಕಾರಣ ಶ್ರೀಕೃಷ್ಣ ದೇವಾಲಯ ಗಳಲ್ಲಿ ಶ್ರೀದೇವರಿಗೆ ಸರಳವಾಗಿ ವಿಶೇಷ ಪೂಜೆ ನೆರವೇರಲಿದೆ. ಮನೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಶ್ರದ್ಧಾ,ಭಕ್ತಿ, ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಶ್ರೀಕೃಷ್ಣಮಠದಲ್ಲಿ ಆ. 30ರಂದು ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸು ವರು. ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ಪೂಜೆಯ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಸ್ವಾಮೀಜಿ ಮುಹೂರ್ತ ಮಾಡುವರು. ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ರಾತ್ರಿ ಮಹಾಪೂಜೆಯನ್ನೂ ನಡೆಸಿ ಮಧ್ಯರಾತ್ರಿ 12.15ಕ್ಕೆ ಸ್ವಾಮೀಜಿ ಯವರು ಇತರ ಸ್ವಾಮೀಜಿಯವರ ಜತೆಗೂಡಿ ಕೃಷ್ಣನಿಗೆ ಅಘÂìಪ್ರದಾನ ಮಾಡಲಿದ್ದಾರೆ. ಆ ಬಳಿಕ  ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅಘÂìವನ್ನು ಬಿಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಶ್ರೀಕೃಷ್ಣಮಠವನ್ನು ಪುಷ್ಪಗಳಿಂದ ಸೋಮವಾರ ಅಲಂಕರಿಸಲಾಗುತ್ತದೆ. ಆ. 30ರಂದು ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ, ಆ. 31ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರ ವರೆಗೆ, ರಥೋತ್ಸವದ ಬಳಿಕ 5 ಗಂಟೆಯಿಂದ ದರ್ಶನಾವಕಾಶವಿದೆ. ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ದರ್ಶನ ಪಡೆಯಬೇಕು. ಯಾತ್ರಾರ್ಥಿಗಳು ವಿಶ್ವಪಥದ ಮೂಲಕ, ಸುದರ್ಶನ ಪ್ರವೇಶ ಪತ್ರ ಹೊಂದಿದ ಸ್ಥಳೀಯರು ಉತ್ತರ ಮತ್ತು ದಕ್ಷಿಣ ದ್ವಾರದಿಂದ ದರ್ಶನ ಪಡೆಯಬಹುದು.

ಕೊರೊನಾ ಕಾರಣದಿಂದ ಜನರ ನೂಕುನುಗ್ಗಲಿಗೆ ಅವಕಾಶ ಕೊಟ್ಟಿಲ್ಲ. ಇದೇ ಕಾರಣದಿಂದ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಈ ವರ್ಷವೂ ಏರ್ಪಡಿಸಿಲ್ಲ. ಸರಕಾರದ ನಿಯಮಾ ನುಸಾರ ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವುದಕ್ಕೆ ಅವಕಾಶ ನೀಡಿಲ್ಲ. ಮಠದ ಸಿಬಂದಿ, ಗೋಪಾಲಕರು ಮಾತ್ರ ಭಾಗವಹಿಸಿ ಮೊಸರುಕುಡಿಕೆ ಉತ್ಸವವನ್ನು ಆಚರಿಸಲಿದ್ದಾರೆ.

ಶ್ರೀಕೃಷ್ಣಮಠದ ಎಲ್ಲ ಪೂಜೆ, ಉತ್ಸವಗ ಳನ್ನು ಆನ್‌ಲೈನ್‌ನಲ್ಲಿ ಬಿತ್ತ¤ರಿಸ ಲಾಗುತ್ತಿದೆ. ವಿವಿಧ ಸಂಘಟನೆಗಳು ಆನ್‌ಲೈನ್‌ ಸ್ಪರ್ಧೆಗಳನ್ನು ಏರ್ಪ ಡಿಸಿವೆ. ಮನೆಗಳಲ್ಲಿ ಕೃಷ್ಣಾಷ್ಟಮಿ ಆಚರಿಸು ವವರು ಮಾರುಕಟ್ಟೆಗಳಿಂದ ಬೇಕಾದ ಸಾಮಗ್ರಿಗಳನ್ನು ಖರೀದಿಸಿದ್ದು ಪೂಜೆ, ಭಜನೆ, ಅಘÂìಪ್ರದಾನಗಳಿಂದ ಕೃಷ್ಣಜಯಂತಿಯನ್ನು ನಡೆಸುತ್ತಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಕೃಷ್ಣ   ನೀತಿ ಮಾರ್ಗದ ಅಗತ್ಯ :

ರಾಮ ಮತ್ತು ಕೃಷ್ಣ ಭಗವಂತನ ಅವತಾರವಾದರೂ ಕಾಲ ಬೇರೆ ಬೇರೆ. ಹೀಗಾಗಿ ಅವರಿಬ್ಬರ ನಡವಳಿಕೆಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು. ರಾಮಚಂದ್ರನ ನಡೆ ನೇರ ನೇರ ಇತ್ತು. ಅಲ್ಲಿ ತಪ್ಪುಗಳನ್ನು ರಾಮಚಂದ್ರ ಮಾಡುವುದಿಲ್ಲ ಅಥವಾ ತಪ್ಪು ಮಾಡದೆ ಬದುಕುವುದು ಹೇಗೆ ಎಂಬ ಸಂದೇಶ ಸಿಗುತ್ತದೆ. ಕೃಷ್ಣಾವತಾರ ಕಾಲದಲ್ಲಿ ಅದಲು ಬದಲು ಕಾಣುತ್ತದೆ. ಕಾರಣ ಸಾಮಾಜಿಕ ಸ್ಥಿತಿಗತಿಯೂ ಬದಲಾಗಿತ್ತು. ಶ್ರೀಕೃಷ್ಣ ತಪ್ಪು ಮಾಡಿದಂತೆ ಕಾಣುತ್ತದೆ. ಕಲಿಯುಗದಲ್ಲಿ ಈ ತರಹದಲ್ಲಿಯೇ ಇರಬೇಕೆಂದು ಕೃಷ್ಣ ತೋರಿಸಿಕೊಟ್ಟಿದ್ದಾನೆ.

ಶ್ರೀಕೃಷ್ಣ ಎಂದೂ ರಾಜನಾಗಲಿಲ್ಲ. ಆತ ರಾಜರು ಹೇಗಿರಬೇಕೆಂದು ತೋರಿಸಿಕೊಟ್ಟ. ಸುಮಾರು 5,000 ವರ್ಷಗಳ ಹಿಂದೆ ಮಹಿಳೆಯರು, ಗೋಪಾಲಕರಾದಿ ಕಂಸ, ಜರಾಸಂಧನಂತಹ ಉಗ್ರರಿಂದ ತತ್ತರಿಸುವಾಗ ಭಗವಂತ ಕೃಷ್ಣನಾಗಿ ಅವತರಿಸಿ ರಕ್ಷಿಸಿದ. “ಕರ್ಷತೀತಿ’ ಎಂಬಂತೆ ತನ್ನೆಡೆಗೆ ಆಕರ್ಷಿಸುವವನು ಅವನಾದ.

ಶ್ರೀಕೃಷ್ಣ ಮಾಡಿದ ಉಪಕಾರವನ್ನು ಸ್ಮರಿಸಲೋಸುಗ ಪ್ರತೀ ವರ್ಷ ಆತನ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಆತ ಎಲ್ಲೆಡೆ ಹಬ್ಬಿಕೊಂಡಿದ್ದ ದುರ್ಜನರನ್ನು ಮುಗಿಸಿದ್ದು ಲೋಕಕ್ಕೆ ಮಾಡಿದ ಉಪಕಾರ. ಈಗಲೂ ಎಲ್ಲರನ್ನು ಸದೆ ಬಡಿಯುವ ದುಷ್ಟರಿದ್ದಾರೆ. ಎಲ್ಲರನ್ನೂ ಬದುಕಲು ಬಿಡಬೇಕೆಂಬ ಕಲ್ಪನೆ ಭಾರತೀಯರದು. ಹೀಗಾಗಿಯೇ ಎಲ್ಲ ಧರ್ಮದವರಿಗೆ ಭಾರತದಲ್ಲಿ ಅವಕಾಶ ಸಿಕ್ಕಿದ್ದು. ಆದರೆ ಲೋಕಕ್ಕೆಲ್ಲ ಭಯ ಉಂಟು ಮಾಡುವ ಲೋಕ ಕಂಟಕರೂ ಮೂಡಿದರು. ಬೇರೆ ಬೇರೆ ಹೆಸರುಗಳಲ್ಲಿ ದೇಶ, ಸಮಾಜವನ್ನು ಹಾಳುಗೆಡಹುವವರು ಇದ್ದಾರೆ. ದೇಶ ಕಟ್ಟುವವರು ಕೃಷ್ಣನ ನೀತಿ ಪಾಠವನ್ನು ಅನುಸರಿಸಬೇಕು.

ಇಂದಿನ ಜಾಗತಿಕ ಪರಿಸ್ಥಿತಿ ನೋಡಿದರೆ ಕೃಷ್ಣ ಸಂದೇಶ, ಕೃಷ್ಣ ಜಯಂತಿ ಆಚರಣೆ, ಕೃಷ್ಣಮಾರ್ಗದ ನಡೆಯ ಅಗತ್ಯ ಕಂಡುಬರುತ್ತದೆ. ಮಾನವರಾಗಿ ಜನಿಸಿದ ಮೇಲೆ ಭಗವಂತನ ಕುರಿತಾದ ಜ್ಞಾನ ಸಂಪಾದಿಸಬೇಕು. ಜ್ಞಾನದ ಜತೆ ಕರ್ಮವನ್ನೂ ಮೇಳೈಸಿಕೊಂಡು ಕರ್ತವ್ಯದಲ್ಲಿ ರಾಜಕೀಯಪ್ರಜ್ಞೆಯನ್ನು ತೋರಬೇಕಾಗಿದೆ. ಶ್ರೀಕೃಷ್ಣಾಷ್ಟಮಿಯು ಕರ್ತವ್ಯಪ್ರಜ್ಞೆಯನ್ನು ಎಲ್ಲರಲ್ಲಿಯೂ ಮೂಡಿಸಲಿ. ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.

ಟಾಪ್ ನ್ಯೂಸ್

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

accident

Shirva: ರಿಕ್ಷಾ ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.