ಮಕ್ಕಳಿಗೆ ಶ್ರೀಕೃಷ್ಣ ವೇಷ ಹಾಕಿಸಿ ಸಂಭ್ರಮಿಸಿದ ಪೋಷಕರು
Team Udayavani, Aug 31, 2021, 3:26 AM IST
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ಕೃಷ್ಣಾಷ್ಟಮಿ ಸಂಭ್ರಮ ಮನೆಮಾಡಿದ್ದು, ನಗರದೆಲ್ಲೆಡೆ ಪೋಷಕರು ಮಕ್ಕಳಿಗೆ ಕೃಷ್ಣವೇಷ ಹಾಕಿಸಿಕೊಂಡು ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡು ಬಂತು.
ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಸೋಮವಾರ ರಥಬೀದಿ ರಂಗುರಂಗಿನಿಂದ ಕಂಗೊಳಿಸುತ್ತಿತ್ತು. ಒಂದೆಡೆ ಬಗೆಬಗೆಯ ಪುಷ್ಪಗಳು ನೋಡುಗರ ಗಮನ ಸೆಳೆದರೆ ಇನ್ನೊಂದೆಡೆ ಬಣ್ಣಬಣ್ಣದ ಆಟಿಕೆಗಳು ಕಣ್ಣಿಗೆ ರಾರಾಜಿಸುತ್ತಿದ್ದವು. ಬಿಸಿಬಿಸಿ ತಿಂಡಿ ಸವಿಯುವವರಿಗಾಗಿ ಜೋಳ, ತಣ್ಣಗಿನ ಆಹಾರ ಸೇವಿಸುವವರಿಗಾಗಿ ಸೋಡಾ, ತಾಜಾ ಜ್ಯೂಸ್ ಅಂಗಡಿಯತ್ತ ಗ್ರಾಹಕರನ್ನು ಸೆಳೆಯುತ್ತಿದ್ದವು. ಹೂ, ಹಣ್ಣುಗಳ ರಾಶಿ ಕಂಡುಬಂದವು.
ಹಾಸನ, ಚಿಕ್ಕಮಗಳೂರು, ಮೈಸೂರು, ಅರಕಲಗೋಡು ಸಹಿತ ವಿವಿಧ ಜಿಲ್ಲೆ ಗಳಿಂದ ಸುಮಾರು 100ಕ್ಕೂ ಅಧಿಕ ಹೂವಿನ ವ್ಯಾಪಾರಿಗಳು ಆಗಮಿಸಿದ್ದು ವ್ಯಾಪಾರ ಬಿರುಸಿನಿಂದ ನಡೆಯಿತು.
ಮಧ್ಯಾಹ್ನದ ವೇಳೆಗೆ ದಿಢೀರ್ ಸುರಿದ ಮಳೆಗೆ ವ್ಯಾಪಾರಸ್ಥರೆಲ್ಲ ಕಂಗಾಲಾದರು. ತಾವು ತಂದ ವಸ್ತುಗಳಿಗೆ ರಕ್ಷಣೆ ಒದಗಿಸಲೆಂದು ಕೆಲ ವ್ಯಾಪಾರಿಗಳು ಮೊದಲೇ ಪ್ಲಾಸ್ಟಿಕ್ ಹೊದಿಕೆಗಳನ್ನು ತಂದಿದ್ದರು.
ಕೃಷ್ಣ ವೇಷ ಧರಿಸಿದ ಮಕ್ಕಳು :
ಅಷ್ಟಮಿಯ ವಿವಿಧ ಬಗೆಯ ವೇಷಗಳನ್ನು ನೋಡಲು ದೂರದ ಊರಿನಿಂದ ಕಲಾಭಿಮಾನಿಗಳು ರಥಬೀದಿಗೆ ಬರುತ್ತಾರೆ. ಆದರೆ ಕೊರೊನಾದಿಂದ ಜನ್ಮಾಷ್ಟಮಿ ವೇಷ ಹಾಕುವುದಕ್ಕೆ ತಡೆಯಾಗಿದೆ. ಆದ್ದರಿಂದ ಈ ಬಾರಿ ರಥಬೀದಿಯಲ್ಲಿ ಇತರ ವೇಷಗಳು ಕಂಡುಬಂದಿಲ್ಲ. ಕೆಲ ಪೋಷಕರು ಹರಕೆ ನಿಮಿತ್ತ ಮಕ್ಕಳಿಗೆ ಕೃಷ್ಣ ವೇಷ ಹಾಕಿಸಿ ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಕಂಡು ಬಂತು. ಈ ಹಿಂದೆ ಕೃಷ್ಣ ಜನ್ಮಾಷ್ಟಮಿಯ ಹಿಂದಿನ ದಿನವೇ ರಥಬೀದಿಯಲ್ಲಿ ನೂರಾರು ವೇಷಗಳು ಕಾಣಸಿಗುತ್ತಿತ್ತು.
ಟ್ರಾಫಿಕ್ ಜಾಮ್:
ಭಕ್ತರಿಗೆ ಸೋಮವಾರ ನಗರದ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸುಗಮ ವಾಹನ ಸಂಚಾರಕ್ಕೆ ಅಡಿಯಾಗಿತ್ತು. ಬೆಳಗ್ಗಿ ನಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ವಾಹನ, ಸಾರ್ವಜನಿಕರು ಓಡಾಡಲು ಹರಸಾಹಸಪಡುವಂತಾಗಿತ್ತು. ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ರಸ್ತೆ, ಆಭರಣ ಮಳಿಗೆ ಸಮೀಪ, ಚಿತ್ತರಂಜನ್ ಸರ್ಕಲ್, ಕೋರ್ಟ್ ರೋಡ್, ಕಲ್ಸಂಕ ಮಾರ್ಗದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು.
ಲಕ್ಷ ತುಳಸೀ ಅರ್ಚನೆ :
ಸೋಮವಾರ ಶ್ರೀಕೃಷ್ಣನಿಗೆ ಲಕ್ಷತುಳಸೀ ಅರ್ಚನೆ ನಡೆಯಿತು. ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಲಕ್ಷತುಳಸೀ ಅರ್ಚನೆ ನಡೆಸಿ ಮಹಾಪೂಜೆ ನಡೆಸಿದರು.
ಇದಕ್ಕೂ ಮುನ್ನ ಕೃಷ್ಣಾಪುರ, ಅದಮಾರು, ಪಲಿಮಾರು, ಕಾಣಿಯೂರು ಮಠಾಧೀಶರು ವಿವಿಧ ಪೂಜೆಗಳನ್ನು ಸಲ್ಲಿಸಿದರು. ರಾತ್ರಿ ಮಹಾಪೂಜೆ ಬಳಿಕದ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟುವ ಸಂಪ್ರದಾಯ ಬೆಳಗ್ಗಿನ ಮಹಾಪೂಜೆ ಬಳಿಕ ನಡೆಯಿತು. ಇದರಲ್ಲಿ ಅದಮಾರು, ಪಲಿಮಾರು ಉಭಯ ಮಠಾಧೀಶರು, ಕಾಣಿಯೂರು ಶ್ರೀಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.