ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ: ಭಕ್ತ ಜನಸಾಗರ
Team Udayavani, Sep 3, 2018, 6:00 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ರವಿವಾರ ವಿಶೇಷ ಮಹಾಪೂಜೆ, ಶ್ರೀಕೃಷ್ಣಾಘ ಪ್ರದಾನ ಸಹಿತವಾದ ಶ್ರೀಕಷ್ಣ ಜನ್ಮಾಷ್ಟಮಿ ಸಡಗರದಲ್ಲಿ ಲಕ್ಷಾಂತರ ಭಕ್ತರು ಭಾಗಿಗಳಾದರು. ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬೆಳಗ್ಗೆ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಿದರು. ಶ್ರೀ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಸುವರ್ಣ ತೊಟ್ಟಿಲಿನಲ್ಲಿ ಬಾಲಕೃಷ್ಣನ ಅಲಂಕಾರವನ್ನು ಮಾಡಿದರು. ಅನಂತರ ಭೋಜನ ಶಾಲೆಯಲ್ಲಿ ಪರ್ಯಾಯ ಶ್ರೀಗಳು ಹಾಗೂ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಕೃಷ್ಣನಿಗೆ ರಾತ್ರಿ ಪೂಜೆಯ ಸಂದರ್ಭ ಸಮರ್ಪಿಸುವ ಲಡ್ಡು ತಯಾರಿಗೆ ಚಾಲನೆ ನೀಡಿದರು. ರಾತ್ರಿ ವಿಶೇಷ ಮಹಾಪೂಜೆಯ ಬಳಿಕ 11.48ಕ್ಕೆ ಪರ್ಯಾಯ ಶ್ರೀಗಳು ಶ್ರೀಕೃಷ್ಣಾರ್ಘ್ಯ ಸಮರ್ಪಿಸಿದರು. ಅನಂತರ ಭಕ್ತರಿಂದಲೂ ಶ್ರೀಕೃಷ್ಣಾಘ ಪ್ರದಾನ ನಡೆಯಿತು.
ಭಜನೆ, ಸ್ಪರ್ಧೆ, ವೇಷ ಸಡಗರ
ಬೆಳಗ್ಗೆ ವಿಶೇಷ ಭಜನೆ, ಮುದ್ದು ಕೃಷ್ಣ ವೇಷ, ಮೊಸರು ಕಡೆಯುವುದು ಮೊದ ಲಾದ ಸ್ಪರ್ಧೆಗಳು ನಡೆದವು. ಬೆಳಗ್ಗಿ ನಿಂದಲೇ ಶ್ರೀಕೃಷ್ಣ ದೇವರ ದರ್ಶನಕ್ಕೆ ಸರದಿ ಸಾಲು ಕಂಡು ಬಂತು. ರಥಬೀದಿ ಯಲ್ಲಿಯೂ ಅಪಾರ ಸಂಖ್ಯೆ ಯಲ್ಲಿ ಭಕ್ತರು ಸೇರಿ ದ್ದರು. ರಥಬೀದಿಗೆ ಹಲವು ಹುಲಿವೇಷ ತಂಡಗಳು ಆಗಮಿಸಿ ಪರ್ಯಾಯ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡು ಬಳಿಕ ಪ್ರದರ್ಶನ ನೀಡಿದವು. ಸಂಜೆ ಪ್ರವೀಣ್ ಗೋಡ್ಕಂಡಿ ಅವರ ಸಂಗೀತ ಕಾರ್ಯಕ್ರಮ ನಡೆಯಿತು.
ಕಂಗೊಳಿಸಿದ ಮಠ
ವಿಶೇಷ ಹೂವಿನ ಅಲಂಕಾರದಿಂದ ಶ್ರೀಕೃಷ್ಣ ಮಠ ಕಂಗೊಳಿಸುತ್ತಿದೆ. ಗರ್ಭ ಗುಡಿ, ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವ ಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ ಮೊದಲಾ ದೆಡೆ ವಿಶೇಷ ಅಲಂಕಾರ ಮಾಡಲಾಗಿದೆ. ರಥಬೀದಿಯಲ್ಲಿ ರವಿ ವಾರವೂ ಹೂ ಮಾರಾಟ ಜೋರಾಗಿತ್ತು.
ಶೀರೂರು ಶ್ರೀಗಳ ನೆನಪಿನಲ್ಲಿ…
ಜುಲೈಯಲ್ಲಿ ಅಸ್ತಂಗತರಾದ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ನೆನಪಿನಲ್ಲಿ ಶೀರೂರು ಮಠ, ಸೋದೆ ಮಠ ಮತ್ತು ರಂಜನ್ ಕಲ್ಕೂರ ಅವರ ಪ್ರಾಯೋಜ ಕತ್ವ ದಲ್ಲಿ ವಿಟ್ಲಪಿಂಡಿ ಸಂದರ್ಭ ಶೀರೂರು ಮಠದ ಎದುರು ಹುಲಿ ವೇಷ ಸ್ಪರ್ಧೆ ನಡೆಯಲಿದೆ. ಬೈಲಕೆರೆ ಫ್ರೆಂಡ್ಸ್ ತಂಡ ಶೀರೂರು ಶ್ರೀಗಳ ಹೆಸರಿನಲ್ಲಿ ಹುಲಿವೇಷ ಹಾಕಿದೆ. ಶೀರೂರು ಶ್ರೀಗಳು ವಿಟ್ಲ ಪಿಂಡಿ ಯಂದು ಹುಲಿವೇಷ ಸ್ಪರ್ಧೆ ಸೇರಿ ದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ಗಳನ್ನು ಆಯೋಜಿಸುತ್ತಿದ್ದ ಹಿನ್ನೆಲೆ ಯಲ್ಲಿ ರಥಬೀದಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪೊಲೀಸ್ ಕಣ್ಗಾವಲು
ಸೋಮವಾರ ರಥಬೀದಿ ಮತ್ತು ಸುತ್ತಮುತ್ತ ಲಕ್ಷಾಂತರ ಮಂದಿ ಸೇರಲಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ. ಮೆಟಲ್ ಡಿಟೆಕ್ಟರ್‌ಗಳನ್ನು ಈಗಾಗಲೇ ಅಳ ವಡಿಸ ಲಾಗಿದೆ. ಪೊಲೀಸರು ಮಫ್ತಿ ಯಲ್ಲಿಯೂ ಇದ್ದು ಸರಗಳ್ಳರು ಸೇರಿ ದಂತೆ ಸಾರ್ವಜನಿಕರಿಗೆ ಕಿರುಕುಳ ನೀಡು ವವರ ಮೇಲೆ ಕಣ್ಣಿಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ವಿಟ್ಲಪಿಂಡಿ ವೈಭವ
ಸೋಮವಾರ ಶ್ರೀಕೃಷ್ಣ ಮಠದಲ್ಲಿ 3 ಗಂಟೆಯ ವೇಳೆಗೆ ವಿಟ್ಲಪಿಂಡಿ (ಮೊಸರು ಕುಡಿಕೆ) ಉತ್ಸವ ಜರಗಲಿದೆ. ಗೋಪಾಲಕ ರಿಂದ ಮೊಸರು ಕುಡಿಕೆ ಒಡೆ ಯುವ ಕಾರ್ಯಕ್ರಮ, ಅಡಿಕೆ ಮರ ಏರುವ ಸ್ಪರ್ಧೆ, ಹುಲಿವೇಷ ಸ್ಪರ್ಧೆ ಇತ್ಯಾದಿ ಸಂಪನ್ನಗೊಳ್ಳಲಿವೆ. ಶ್ರೀಕೃಷ್ಣನ ಮೃಣ್ಮಯ ಮೂರ್ತಿ ಸಹಿತ ವಾದ ರಥೋತ್ಸವ ನಡೆಯಲಿದೆ. ಉತ್ಸವದಲ್ಲಿ ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳೂ ಇರುತ್ತವೆ. ಬೆಳಗ್ಗೆ 10.30ರಿಂದ ನಗರದ ವಿವಿಧೆಡೆ ಮುಂಬಯಿಯ ಆಲಾರೆ ಗೋವಿಂದ ತಂಡದಿಂದ ದಹೀ ಹಂಡಿ (ಮೊಸರು ಕುಡಿಕೆ) ನಡೆಯಲಿದೆ.
ಹಾಲುಪಾಯಸ ಸಹಿತ ಅನ್ನಪ್ರಸಾದ
ಸೋಮವಾರ ಬೆಳಗ್ಗೆ ಮಹಾ ಪೂಜೆ ನಡೆಯಲಿದೆ. 11ರಿಂದ ರಾಜಾಂಗಣ ದಲ್ಲಿ ಹಾಲು ಪಾಯಸ ಮತ್ತು ಗುಂಡಿಟ್ಟು ಲಡ್ಡು ಸಹಿತವಾದ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯ ಕ್ರಮ ಗಳು ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.