ಶ್ರೀಕೃಷ್ಣಮಠ: ದರ್ಶನ ಮಾರ್ಗದಲ್ಲಿ ಇನ್ನಷ್ಟು ನಾವೀನ್ಯ
Team Udayavani, Jan 9, 2021, 9:45 PM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಈ ಹಿಂದೆ ದರ್ಶನಕ್ಕೆ ತೆರಳುವ ಮಾರ್ಗವನ್ನು ಮಾರ್ಪಡಿಸಲಾಗಿತ್ತು. ಈಗ ಅದಕ್ಕೆ ಇನ್ನಷ್ಟು ನಾವೀನ್ಯವನ್ನು ಕೊಡಲಾಗಿದೆ.
ಈ ಹಿಂದೆ ರಾಜಾಂಗಣ ಬಳಿಯ ಉತ್ತರ ದ್ವಾರದಿಂದ ಭೋಜನಶಾಲೆಗೆ ಹೋಗಿ ಅಲ್ಲಿಂದ ಶ್ರೀಕೃಷ್ಣಮಠದ ಒಳಪ್ರಾಂಗಣಕ್ಕೆ ತಲುಪಿ ದರ್ಶನ ಮಾಡುವ ಮತ್ತು ಅಲ್ಲಿಂದಲೇ ಹಿಂದಿರುಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಇದರ ಅರ್ಧ ಭಾಗದ ಮಾರ್ಗ ಅದೇ ರೀತಿ ಇರಲಿದ್ದು ಇನ್ನರ್ಧ ಭಾಗದ ಮಾರ್ಗ ಬದಲಾಯಿಸಲಾಗಿದೆ. ಹೊಸ ವ್ಯವಸ್ಥೆಯಂತೆ ಮಧ್ವ ಸರೋವರದ ಪೂರ್ವದಲ್ಲಿ 1986-88ರ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರ ಪ್ರಥಮ ಪರ್ಯಾಯ ಕಾಲದಲ್ಲಿ ಶ್ರೀವಿಬುಧೇಶತೀರ್ಥ ಶ್ರೀಪಾದರು ಕಟ್ಟಿಸಿದ ಬಾತ್‌ರೂಮ್ ಸಂಕೀರ್ಣವನ್ನು ಈಗ ಯಾತ್ರಾರ್ಥಿಗಳು ಕುಳಿತುಕೊಳ್ಳಲು ಮತ್ತು ಸರತಿಸಾಲಿನಲ್ಲಿ ನಿಲ್ಲಲು ಬಳಸಲಾಗಿದೆ.
ಹೊಸ ವ್ಯವಸ್ಥೆಯಲ್ಲಿ ಯಾತ್ರಾರ್ಥಿಗಳ ತುರ್ತು ಅಗತ್ಯಕ್ಕಾಗಿ ಒಂದೆರಡು ಸ್ನಾನಗೃಹ ವನ್ನು ಇರಿಸಿಕೊಳ್ಳಲಾಗುತ್ತದೆ. ಇದನ್ನು ಕ್ಯೂ ಕಾಂಪ್ಲೆಕ್ಸ್ ಎಂದು ಕರೆಯಲಾಗುತ್ತದೆ. ಇಲ್ಲಿಂದ ಯಾತ್ರಾರ್ಥಿಗಳು ಮೊದಲ ಮಹಡಿಗೆ ಬಂದು ಅಲ್ಲಿಂದ ಮಧ್ವ ಸರೋವರದ ಬದಿಯಿಂದ ಭೋಜನಶಾಲೆಯ ಪಾರ್ಶ್ವದಲ್ಲಿ ಮುಂದುವರಿದು ಕೃಷ್ಣಮಠದ ಗರ್ಭಗುಡಿ ಮೇಲ್ಭಾಗಕ್ಕೆ ತಲುಪುತ್ತಾರೆ. ಉಳಿದಂತೆ ಹಿಂದಿನಂತೆ ಇರುತ್ತದೆ. ವಾಪಸ್ ಬರುವಾಗ ಭೋಜನ ಪ್ರಸಾದಕ್ಕೆ ಹೋಗಬಹುದು ಅಥವಾ ಕೆಳಗಿಳಿದು ಹೊರಗೆ ಬರಬಹುದು. ಇದರಿಂದ ಕ್ಯೂ ಕಾಂಪ್ಲೆಕ್ಸ್ ಏರಿದತತ್‌ಕ್ಷಣ ಮಧ್ವಸರೋವರ, ರಥಬೀದಿ, ಸ್ವರ್ಣ ಗೋಪುರ, ಕಂಡುಬರುತ್ತದೆ. ಭೋಜನಶಾಲೆಯ ಪಾರ್ಶ್ವದಲ್ಲಿ ಯಾತ್ರಾರ್ಥಿಗಳಿಗೆ ಕಷ್ಟವಾದರೆ ಕುಳಿತು ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿದವರು ಈ ಹಿಂದಿನಂತೆ ಮಹಾದ್ವಾರದ ಕಡೆಯಿಂದ ಯಾವುದೇ ಅಡೆತಡೆಗಳಿಲ್ಲದೆ ಭೇಟಿ ನೀಡಬಹುದು.
ಪರಸ್ಥಳದಿಂದ ಬಂದವರಿಗೆ ಉಡುಪಿಯ ಮಾಹಿತಿ ಸಿಗಬೇಕು, ಭಕ್ತರಿಗೆ ಸೂಕ್ತ ವ್ಯವಸ್ಥೆಯಾಗಬೇಕು ಎಂಬ ಉದ್ದೇಶವಿರಿಸಿಕೊಂಡು ಮಾರ್ಗದಲ್ಲಿ ಸ್ವಲ್ಪ ಬದಲಾವಣೆ ತಂದಿದ್ದೇವೆ. ಹಿಂದೆ ಇದ್ದ ವ್ಯವಸ್ಥೆಯಲ್ಲಿ ಅರ್ಧಾಂಶವನ್ನು ಹಾಗೇ ಉಳಿಸಿಕೊಂಡಿದ್ದೇವೆ ಮತ್ತು ಉಳಿದ ಅಂಶವನ್ನು ಯಾತ್ರಿಗಳ ಭೋಜನಕ್ಕೆ ಹೋಗುವ ಮಾರ್ಗಕ್ಕೆ ಮತ್ತು ನಿರ್ಗಮನಕ್ಕೆ ಬಳಸಿಕೊಳ್ಳುತ್ತಿದ್ದೇವೆ. –ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪರ್ಯಾಯ ಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.
ನಾನು ದೈನಂದಿನ ಭೇಟಿಯಂತೆ ಹೋಗಿ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೇಗೆ ಬಲಪಡಿಸಬಹುದು ಎಂದು ನಮ್ಮ ಪೊಲೀಸ್ ತಂಡ ಭೇಟಿ ನೀಡಿ ಸಲಹೆ ನೀಡಬಹುದು. –ವಿಷ್ಣುವರ್ಧನ್, ಎಸ್‌ಪಿ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.