ಶೃಂಗೇರಿ: “ಕೈ’ ಅಭ್ಯರ್ಥಿ ಜಯಪ್ರಕಾಶ್‌ಹೆಗ್ಡೆ ಪರ ಪತ್ನಿ ವೀಣಾ ಪ್ರಚಾರ
Team Udayavani, Apr 22, 2024, 10:22 AM IST
ಉದಯವಾಣಿ ಸಮಾಚಾರ
ಶೃಂಗೇರಿ: ಈ ಹಿಂದೆ ಕ್ಷೇತ್ರದ ಸಂಸದರಾಗಿ ಜನ ಮಾನಸದಲ್ಲಿದ್ದ ಜಯಪ್ರಕಾಶ್ ಹೆಗ್ಡೆ ಅವರನ್ನು ಮತದಾರರು ಬೆಂಬಲಿಸಬೇಕು
ಎಂದು ಜಯಪ್ರಕಾಶ್ ಹೆಗ್ಡೆ ಪತ್ನಿ ವೀಣಾ ಹೆಗ್ಡೆ ಹೇಳಿದರು.
ಅಡ್ಡಗದ್ದೆ ಗ್ರಾಪಂನ ಕಾವಡಿಯಲ್ಲಿ ಮನೆ- ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತ ಯಾಚಿಸಿ
ಅವರು ಮಾತನಾಡಿದರು.
ಕರಾವಳಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಮಸ್ಯೆ ಬಗ್ಗೆ ಅರಿವಿರುವ ಹೆಗ್ಡೆ ಅವರು ಈ ಹಿಂದೆ ಅಡಕೆ ಬೆಳೆಗಾರರ ಸಮಸ್ಯೆಗೆ ಸರಕಾರದ ಗಮನ ಸೆಳೆದಿದ್ದರು.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೇಂದ್ರ ಸರಕಾರದಿಂದ ಜಿಲ್ಲೆಗೆ ಆಗಬೇಕಿರುವ ಮತ್ತು ನನೆಗುದಿಗೆ ಬಿದ್ದಿರುವ ಯೋಜನೆ
ಚುರುಕುಗೊಳಿಸಲಾಗುತ್ತದೆ. ಮತ ದಾರರು ಮತ್ತೆ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ನೀಡಿ ಸೇವೆ ಸಲ್ಲಿಸಲು ಅವಕಾಶ
ನೀಡಬೇಕು ಎಂದು ಮನವಿ ಮಾಡಿದರು. ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಕೀಲಾ ಗುಂಡಪ್ಪ, ಕಾಂಗ್ರೆಸ್ ಮುಖಂಡ
ದೇವೇಂದ್ರ ಮತ್ತಿತರರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.