ಎಸೆಸೆಲ್ಸಿ : ಕುಂದಾಪುರ ವಲಯಕ್ಕೆ ಮತ್ತೆ ಅಗ್ರಸ್ಥಾನದ ಗರಿಮೆ
ಸತತ 3 ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಂಡ ಕುಂದಾಪುರ ; ಸ್ಥಾನ ವೃದ್ಧಿಸಿಕೊಂಡ ಬೈಂದೂರು
Team Udayavani, May 2, 2019, 6:00 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ಎಸೆಸೆಲ್ಸಿ ಫಲಿತಾಂಶದಲ್ಲಿ ಉಡುಪಿ ಒಟ್ಟಾರೆ ಸ್ಥಾನದಲ್ಲಿ ಕೆಳಕ್ಕಿಳಿದಿದೆ. ಆದರೆ ಕಳೆದ ಬಾರಿಯಂತೆ ಕುಂದಾಪುರ ವಲಯವು ಶೇ. 90.93 ಫಲಿತಾಂಶ ಗಳಿಸುವ ಮೂಲಕ ಈ ಬಾರಿಯೂ ಉಡುಪಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ, ಕಾರ್ಕಳ ಎರಡನೇ ಸ್ಥಾನ, ಬ್ರಹ್ಮಾವರ 3ನೇ, ಬೈಂದೂರು ವಲಯ 4ನೇ ಹಾಗೂ ಉಡುಪಿ 5 ನೇ ಸ್ಥಾನ ಗಳಿಸಿದೆ. ಜಿಲ್ಲೆ ಶೇ. 88.11 ಫಲಿತಾಂಶ ಗಳಿಸುವ ಮೂಲಕ ರಾಜ್ಯಕ್ಕೆ 5 ನೇ ಸ್ಥಾನ ಪಡೆದಿದೆ.
ಸತತ 3 ವರ್ಷ ಅಗ್ರಸ್ಥಾನ
ಕುಂದಾಪುರ ವಲಯವೂ ಕಳೆದ 3 ವರ್ಷಗಳಿಂದ ಸತತವಾಗಿ ಅಗಸ್ಥಾನವನ್ನು ಕಾಯ್ದುಕೊಂಡಿರುವುದು ವಿಶೇಷ. ಕಳೆದ ವರ್ಷ ಕುಂದಾಪುರ – ಶೇ. 90.18, ಕಾರ್ಕಳ – ಶೇ. 89.44, ಉಡುಪಿ- ಶೇ. 87.47, ಬೈಂದೂರು – ಶೇ. 85.09 ಅನುಕ್ರಮವಾಗಿ 1 ರಿಂದ 5 ಸ್ಥಾನಗಳನ್ನು ಪಡೆದಿತ್ತು. ಕಳೆದ ಬಾರಿ 5ನೇ ಸ್ಥಾನ ಪಡೆದಿದ್ದ ಬೈಂದೂರು ವಲಯ ತನ್ನ ಫಲಿತಾಂಶವನ್ನು ಶೇ. 1.86 ರಷ್ಟು ವೃದ್ಧಿಸುವುದರೊಂದಿಗೆ ಉಡುಪಿಯನ್ನು ಹಿಂದಿಕ್ಕಿ 4 ನೇ ಸ್ಥಾನಕ್ಕೇರಿದೆ.
ಕುಂದಾಪುರ : 12 ಶಾಲೆಗಳಿಗೆ ಶೇ.100
ಕಳೆದ ಬಾರಿ 5 ಶಾಲೆಗಳು ಮಾತ್ರ ಶೇ.100 ಫಲಿತಾಂಶ ಪಡೆದಿದ್ದರೆ, ಈ ಬಾರಿ ಒಟ್ಟು 12 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿದೆ. 21 ಸರಕಾರಿ ಪ್ರೌಢಶಾಲೆಗಳಿದ್ದು, ಶೇ. 89.74, 7 ಅನುದಾನಿತ ಪ್ರೌಢಶಾಲೆಗಳಿದ್ದು, ಶೇ. 85.71 ಹಾಗೂ 13 ಅನುದಾನ ರಹಿತ ಪ್ರೌಢಶಾಲೆಗಳಿದ್ದು, ಶೇ. 96.03 ಫಲಿತಾಂಶ ಗಳಿಸಿದೆ. ಕುಂದಾಪುರ ವಲಯದಲ್ಲಿ ಒಟ್ಟು 2,262 ಮಂದಿ ಪರೀಕ್ಷೆ ಬರೆದಿದ್ದು, ಅದರಲ್ಲಿ 2,061 ಮಂದಿ ತೇರ್ಗಡೆಯಾಗಿದ್ದಾರೆ.
ಬೈಂದೂರು : 5 ಶಾಲೆಗಳಿಗೆ ಶೇ.100
ಬೈಂದೂರು ವಲಯದಲ್ಲಿ ಒಟ್ಟು 5 ಶಾಲೆಗಳು ಶೇ. 100 ಫಲಿತಾಂಶ ಗಳಿಸಿದೆ. ಚಿತ್ತೂರು ಸರಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ಶಾಲೆ, ಶುಭದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಿರಿಮಂಜೇಶ್ವರ, ವಿವೇಕಾನಂದ ಪ್ರೌಢಶಾಲೆ ಉಪ್ಪುಂದ, ಎಚ್‌ಎಂಎಂಎಸ್ ಬೈಂದೂರು ಪ್ರೌಢಶಾಲೆ ಶೇ. 100 ಪ್ರತಿಶತ ಫಲಿತಾಂಶ ಪಡೆದಿದೆ. ಒಟ್ಟು 1,901 ಮಂದಿ ಪರೀಕ್ಷೆ ಬರೆದಿದ್ದು, 1,672 ಮಂದಿ ತೇರ್ಗಡೆಯಾಗಿದ್ದಾರೆ.
ಕಾರ್ಕಳ ತಾ. ಜಿಲ್ಲೆಗೆ ದ್ವಿತೀಯ
ಕಾರ್ಕಳ ತಾಲೂಕು ಎಸೆಸೆಲ್ಸಿ ಫಲಿತಾಂಶದಲ್ಲಿ ಶೇ.88.63 ಫಲಿತಾಂಶ ದಾಖಲಿಸಿ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದೆ. ಪರೀಕ್ಷೆಗೆ ಹಾಜರಾದ 2667 ವಿದ್ಯಾರ್ಥಿಗಳ ಪೈಕಿ 2364 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 1326 ಗಂಡು, 1341 ಹೆಣ್ಣು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, 1133 ಗಂಡು ಹಾಗೂ 1231 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾರ್ಕಳ ತಾ. ಶೇ.90 ಫಲಿತಾಂಶ ದಾಖಲಿಸಿತ್ತು. 2 ಸರಕಾರಿ, 3 ಅನುದಾನಿತ, 6 ಅನುದಾನರಹಿತ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.
ಎಲ್ಲರ ಪರಿಶ್ರಮ
ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಶೇ.100 ಫಲಿತಾಂಶ ಗಳಿಸಿದ್ದರೆ, ಆ ವಿಷಯಗಳ ಶಿಕ್ಷಕರನ್ನು ಗೌರವಿಸುವ ಪರಿಪಾಠ ಮಾಡಲಾಗಿದ್ದು, ಈ ಬಾರಿ ಇದು ದ್ವಿಗುಣವಾಗಿದೆ. ಪ್ರತಿ ತಿಂಗಳಿಗೊಮ್ಮೆ ಮುಖ್ಯ ಶಿಕ್ಷಕರ ಸಭೆ ಕರೆದು ಫಲಿತಾಂಶ ವೃದ್ಧಿಸುವ ಕುರಿತು ಚರ್ಚಿಸಲಾಗುತ್ತಿತ್ತು.
– ಅಶೋಕ್ ಕಾಮತ್,
ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ
ಫಲ ನೀಡಿದ
“ಟಾರ್ಗೆಟ್-90′
ಈ ಬಾರಿ “ಟಾರ್ಗೆಟ್ 90 ಪ್ಲಸ್’ ಯೋಜನೆ ಮೂಲಕ ಹಿಂದಿಗಿಂತ ಹೆಚ್ಚಿನ ಫಲಿತಾಂಶ ಗಳಿಸಿದ್ದೇವೆ. ಮುಖ್ಯ ಶಿಕ್ಷಕರ ಸಭೆ ಕರೆದು ಫಲಿತಾಂಶ ಹೆಚ್ಚಿಸುವ ಕುರಿತಂತೆ ಚರ್ಚಿಸಲಾಗಿದೆ. ಎಲ್ಲ ಶಿಕ್ಷಕರು, ಮುಖ್ಯ ಶಿಕ್ಷಕರು ಹಾಗೂ ಮಕ್ಕಳ ನಿರಂತರ ಪರಿಶ್ರಮದಿಂದ ಉತ್ತಮ ಫಲಿತಾಂಶ ಬಂದಿದೆ.
– ಜ್ಯೋತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು
ಮಿಷನ್ 100
ಕಳೆದ ಎರಡು ತಿಂಗಳಿನಿಂದ ಮಿಷನ್ 100 ಎಸ್‌ಎಸ್‌ಎಲ್‌ಸಿ ಕಾರ್ಕಳ ಅಭಿಯಾನವನ್ನು ಆರಂಭಿಸಿದ್ದೇವೆ. ಇದರ ಪೂರ್ಣಫಲ ಮುಂದಿನ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ನಿಚ್ಚಳವಾಗಿ ದೊರೆಯಲಿದೆ.
-ಶಶಿಧರ್ ಜಿ.ಎಸ್.,
ಕ್ಷೇತ್ರ ಶಿಕ್ಷಣಾ ಧಿಕಾರಿ, ಕಾರ್ಕಳ
ಲಯವಾರು ಫಲಿತಾಂಶ (ಶೇ.)
ಕುಂದಾಪುರ – 90.93
ಕಾರ್ಕಳ- 88.63
ಬ್ರಹ್ಮಾವರ – 88.39
ಬೈಂದೂರು – 87.95
ಉಡುಪಿ – 85.62
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.