![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jul 8, 2020, 2:35 PM IST
ಕೋಟ ; ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ.
ಹೋಮ್ ಕ್ವಾರಂಟೈನ್ ನಲ್ಲಿದ್ದ ಸಾಲಿಗ್ರಾಮ ಸಮೀಪದ ಗುಂಡ್ಮಿ ಮಾಣಿಕಟ್ಟಿ ನಿವಾಸಿ ಕೋಟ ವಿವೇಕ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕಾರ್ತಿಕ್(15) ಜುಲೈ ೭ರಂದು ಆತ್ಮಹತ್ಯೆಗೆ ಶರಣಾಗಿದ್ದ ಆದರೆ ಆತನ ಗಂಟಲು ದ್ರವ ಪರೀಕ್ಷೆಯ ವರದಿ ಇಂದು ಬಂದಿದ್ದು ವರದಿಯಲ್ಲಿ ನೆಗೆಟಿವ್ ಬಂದಿದೆ.
ಈತನ ತಾಯಿ ಚೇಂಪಿಯಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದು ಮನೆ ಮಾಲಕನಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಪ್ರಥಮ ಸಂಪರ್ಕದ ಮೇರೆಗೆ ಮನೆಕೆಲಸದಾಕೆ ಮತ್ತು ಆಕೆಯ ಮನೆಯವರನ್ನು ಹೋಮ್ ಕ್ವಾರೆಂಟೈನ್‌ನಲ್ಲಿರಲು ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಮಗನಿಗೆ ಮನೆಯಿಂದ ಹೊರಗಡೆ ಹೋಗದಂತೆ ತಾಯಿ ಬುದ್ಧಿ ಮಾತು ಹೇಳಿದ್ದಳು. ಆದರೆ ಬಾಲಕ ತಾನು ಆಟವಾಡಲು ಮನೆಯಿಂದ ಹೊರಹೋಗಬೇಕು ಎಂದು ಹಠಹಿಡಿಯುತ್ತಿದ್ದು ಸಂಜೆ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
You seem to have an Ad Blocker on.
To continue reading, please turn it off or whitelist Udayavani.