ನ. 29: ಸಂತ ಸಿಸಿಲೀಸ್ ವಿದ್ಯಾಸಂಸ್ಥೆಗಳ ಶತಮಾನೋತ್ಸವ
Team Udayavani, Nov 29, 2018, 2:35 AM IST
ಉಡುಪಿ: ಸೈಂಟ್ ಸಿಸಿಲಿ ಕಾನ್ವೆಂಟ್ ಮತ್ತು ವಿದ್ಯಾಸಂಸ್ಥೆಗಳ ಶತಮಾನೋತ್ಸವ ಸಮಾರಂಭವು ಶಾಲಾ ಆವರಣದಲ್ಲಿ ನ. 29ರ ಸಂಜೆ 5ಕ್ಕೆ ಜರಗಲಿದೆ. ಅದೇ ದಿನ ಬೆಳಗ್ಗೆ 10ಕ್ಕೆ ಮಂಗಳೂರಿನ ಧರ್ಮಾಧ್ಯಕ್ಷ ಅ| ವಂ| ಪೀಟರ್ ಪಾವ್ಲ್ ಸಲ್ಡಾನ ಅವರ ನೇತೃತ್ವದಲ್ಲಿ ಬಲಿಪೂಜೆ, ಸಂಜೆ 4.30ಕ್ಕೆ ಶತಮಾನೋತ್ಸವ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆಗೊಳ್ಳಲಿದ್ದು, ನ. 30ರಂದು ಹಳೆವಿದ್ಯಾರ್ಥಿಗಳ ದಿನಾಚರಣೆ ನಡೆಯಲಿದೆ.
ಸಭಾ ಕಾಯಕ್ರಮದಲ್ಲಿ ಉಡುಪಿ ಧರ್ಮ ಪ್ರಾಂತದ ಬಿಷಪ್ ಅ|ವಂ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಅಪೋಸ್ಟೋಲಿಕ್ ಕಾರ್ಮೆಲ್‌ನ ಸುಪೀರಿಯರ್ ಜನರಲ್ ಎಂ. ಸುಶೀಲ್ ಎ.ಸಿ., ಜಿ.ಪಂ. ಅಧ್ಯಕ್ಷ ದಿನಕರ ಬಾಬು, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭೆ ಸದಸ್ಯೆ ರಶ್ಮಿ ಸಿ. ಭಟ್, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸೀಸ್, ಡಿಡಿಪಿಯು ಸುಬ್ರಹ್ಮಣ್ಯ ಜೋಷಿ, ಡಿಡಿಪಿಐ ಶೇಷಶಯನ ಕಾರಿಂಜ , ಬಿಇಒ ಲೋಕೇಶಪ್ಪ, ಉದ್ಯಮಿ ಡಾ| ಜಿ. ಶಂಕರ್, ಪ್ರೊವಿಜನಲ್ ಸುಪೀರಿಯರ್ ಕಾರ್ಮೆಲ್ ರೀಟಾ ಎ.ಸಿ., ಮದರ್ ಆಫ್ ಸಾರೋಸ್ ಚರ್ಚಿನ ಧರ್ಮಗುರು ಅ|ವಂ| ವೆಲೇರಿಯನ್ ಮೆಂಡೋನ್ಸಾ ಉಪಸ್ಥಿತರಿರುವರು.
ಸಂಸ್ಥೆಯ ಸಾಧನೆ
ಹೆಣ್ಮಕ್ಕಳಿಗೆ ಶಿಕ್ಷಣ ನೀಡುವ ಸದುದ್ದೇಶದಿಂದ 1918ರಲ್ಲಿ ಆರಂಭಗೊಂಡ ಈ ವಿದ್ಯಾಸಂಸ್ಥೆಯು ಈ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದೆ. ಅಂದು 9 ವಿದ್ಯಾರ್ಥಿನಿಯರೊಂದಿಗೆ ಆರಂಭಗೊಂಡ ಸಂಸ್ಥೆಯು ಪ್ರಸ್ತುತ 2,374 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದಲ್ಲದೆ ಸೈಂಟ್ ಸಿಸಿಲೀಸ್ ಕಾನ್ವೆಂಟ್, ಸೈಂಟ್ ಸಿಸಿಲೀಸ್ ಕಾಂಪೊಸಿಟ್ ಪಿ.ಯು. ಕಾಲೇಜು, ಸೈಂಟ್ ಸಿಸಿಲೀಸ್ ಇಂಗ್ಲಿಷ್/ಕನ್ನಡ ಹೈಸ್ಕೂಲ್, ಸೈಂಟ್ ಸಿಸಿಲೀಸ್ ಕನ್ನಡ/ಇಂಗ್ಲಿಷ್ ಹಿ.ಪ್ರಾ. ಶಾಲೆ, ಸೈಂಟ್ ಸಿಸಿಲೀಸ್ ಪ್ರಿಪರೇಟರಿ ಸ್ಕೂಲ್‌ಗಳೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.