Attur; “ದೇವರ ಧ್ಯಾನದಿಂದ ಸದ್ಗುಣ ಫಲ ಪ್ರಾಪ್ತಿ’
ಅತ್ತೂರು: ವಾರ್ಷಿಕ ಮಹೋತ್ಸವ ಬಲಿಪೂಜೆ
Team Udayavani, Jan 21, 2024, 9:42 PM IST
ಕಾರ್ಕಳ: ದೇವರ ವಾಕ್ಯವನ್ನು ಆಲಿಸಿ, ಅದನ್ನು ಧ್ಯಾನಿಸಿ ಜೀವನದಲ್ಲಿ ಪಾಲಿಸಿದಾಗ ಸದ್ಗುಣಗಳ ಫಲ ಪಡೆಯಲು ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಹೇಳಿದರು.
ಅತ್ತೂರು ಸಂತ ಲಾರೆನ್ಸ್‌ರ ಬಸಿಲಿಕಾದ ವಾರ್ಷಿಕ ಉತ್ಸವದ ಸಂದರ್ಭ “ದೇವರ ವಾಕ್ಯದ ರವಿವಾರ’ದ ಪ್ರಯುಕ್ತ ಪ್ರಮುಖ ಸಾಂಭ್ರಮಿಕ ಬಲಿಪೂಜೆ ನೆರವೇರಿಸಿ ವಿಶೇಷ ಪ್ರಭೋದನೆ ನೀಡಿದ ಅವರು, ದೇವರ ವಾಕ್ಯವನ್ನು ಆಲಿಸಿ, ಅದನ್ನು ಧ್ಯಾನಿಸಿ, ಜೀವನದಲ್ಲಿ ಪಾಲಿಸಿದಾಗ ಸದ್ಗುಣಗಳ ಫಲವನ್ನು ನೀಡಲು ಸಾಧ್ಯ ಎಂದರು.
ಬೆಳಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸ ಲಾಯಿತು. ಉದಯ ಕುಮಾರ್ ಶೆಟ್ಟಿ ಮುನಿಯಾಲು ಧ್ವಜರೋಹಣದ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು.
ದಿನದ ಇತರ ಬಲಿಪೂಜೆಗಳನ್ನು ವಂ| ವಿನ್ಸೆಂಟ್ ಸೀಕ್ವೆರಾ ಬಜೊjàಡಿ, ವಂ| ನವೀನ್ ಪಿಂಟೊ ಮಂಗಳೂರು, ಉಡುಪಿ ಧರ್ಮಕ್ಷೇತ್ರದ ಶ್ರೇಷ್ಠ ಧರ್ಮಗುರು ವಂ| ಮೊನ್ಸಿಜೊರ್ ಫ್ರೆರ್ಡಿನಾಡ್ ಗೊನ್ಸಾಲ್ವಿಸ್, ವಂ| ರಾಜೇಶ್ ರೊಜಾರಿಯೊ ಮಂಗಳೂರು, ವಂ| ಡೊ. ರೊಕ್ ಡಿ’ಸೋಜಾ, ಸಂತೆಕಟ್ಟೆ, ವಂ| ಬೊನಿಫಾಸ್ ಪಿಂಟೊ ಮೂಡುಬೆಳ್ಳೆ, ವಂ| ಚೇತನ್ ಲೋಬೊ ಬಿಜೈ ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 8ಕ್ಕೆ ನೆರವೇರಿಸಿ ಮಹೋತ್ಸವದ ಪ್ರಥಮ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು. ಸಂತ ಲಾರೆನ್ಸರ ಬಸಿಲಿಕ ಧರ್ಮಗುರು ವಂ| ಅಲ್ಬನ್ ಡಿ’ಸೋಜಾ, ವಂ| ಅಲ್ವಿನ್ ಸೀಕ್ವೆರಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.