ಅತ್ತೂರು ಸಂತ ಲಾರೆನ್ಸ್ ಬಸಿಲಿಕ: ವಾರ್ಷಿಕ ಮಹೋತ್ಸವ
ಐದು ದಿನಗಳ ಮಹೋತ್ಸವ ದಿವ್ಯ ಬಲಿಪೂಜೆಯೊಂದಿಗೆ ಆರಂಭ
Team Udayavani, Jan 26, 2020, 8:31 PM IST
ಕಾರ್ಕಳ: ಸರ್ವಧರ್ಮ ಸಮನ್ವಯ ಕೇಂದ್ರ ಅತ್ತೂರು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಜ. 26ರಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಧ್ವಜಾರೋಹಣಗೈದು ಚಾಲನೆ ನೀಡಿದರು.
“ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ’ ಧ್ಯೇಯವಾಕ್ಯದ ಮೇಲೆ ನಡೆಯಲಿರುವ ಐದು ದಿನಗಳ ಮಹೋತ್ಸವವು ದಿವ್ಯ ಬಲಿಪೂಜೆಯೊಂದಿಗೆ ಆರಂಭಗೊಂಡಿತು.
ಗಣರಾಜ್ಯೋತ್ಸದ ಪ್ರಯುಕ್ತ ದೇಶಕ್ಕಾಗಿ ಹಾಗೂ ಎಲ್ಲ ನಾಗರಿಕರಿಗಾಗಿ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಕೇಂದ್ರದ ಪ್ರಧಾನ ಗುರು ರೆ| ಫಾ| ಜಾರ್ಜ್ ಡಿ’ಸೋಜಾ ಉಪಸ್ಥಿತಿಯಲ್ಲಿ ಪವಿತ್ರ ಪುಷ್ಕರಿಣಿಯ ಬಳಿ ಸಂತ ಲಾರೆನ್ಸರ ಪ್ರತಿಮೆಯನ್ನು ಧರ್ಮಾಧ್ಯಕ್ಷರು ಪ್ರತಿಷ್ಠಾಪಿಸಿದರು.
ಬಲಿಪೂಜೆಯ ಬಳಿಕ ಅಲಂಕೃತಗೊಂಡ ವಾಹನದಲ್ಲಿ ದಿವ್ಯ ಪರಮ ಪ್ರಸಾದದ ಮೆರವಣಿಗೆ ನಡೆಸಲಾಯಿತು. ಪುಣ್ಯಕ್ಷೇತ್ರದಿಂದ ಹೊರಟು ಚೇತನಹಳ್ಳಿಯ ಯುವಕ ಮಂಡಳದ ವೇದಿಕೆಯ ಬಳಿ ಮೆರವಣಿಗೆ ಸಮಾಪನಗೊಳಿಸಲಾಯಿತು. ಶಿವಮೊಗ್ಗದ ಫಾ| ವೀನಸ್ ಪ್ರವೀಣ್ ಕೊಲಾಸೊ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು.
ಜನಸಂದಣಿ
ಮಹೋತ್ಸವದ ಮೊದಲನೇ ದಿನ ರವಿವಾರವಾದ ಹಿನ್ನೆಲೆಯಲ್ಲಿ ಅತ್ತೂರು ಬಸಿಲಿಕಾದತ್ತ ಜನಸಾಗರವೇ ಹರಿದು ಬಂತು. ರಸ್ತೆಯ ಇಕ್ಕೆಲಗಳು ಕೂಡ ಜನಸಂದಣಿಯಿಂದ ಗಿಜಿಗುಡುತ್ತಿದ್ದವು. ದಿನದ ಎರಡನೇ ಪ್ರಮುಖ ಬಲಿಪೂಜೆಯನ್ನು ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷ ರೆ| ಡಾ| ಅಲೋಶಿಯಸ್ ಡಿ’ಸೋಜಾ ಅವರು ನಡೆಸಿಕೊಟ್ಟರು. ಫಾ| ಸ್ಟೀವನ್ ಲೋಬೊ, ಚೇತನ್ ಲೋಬೊ, ಜೇಸನ್ ಪಾಯ್ಸ ಹಾಗೂ ಮ್ಯಾಕ್ಷಿಮ್ ಡಿ’ಸೋಜಾ, ವಿನ್ಸೆಂಟ್ ಡಿ’ಸೋಜಾ, ರೂಪೇಶ್ ಮಾಡ್ತಾ ಅವರು ಉಪಸ್ಥಿತರಿದ್ದರು. ದಿನದ ಅಂತಿಮ ಬಲಿಪೂಜೆಯನ್ನು ಶಿವಮೊಗ್ಗದ ವಂ| ಗುರು ಸ್ಟ್ಯಾನಿ ಡಿ’ಸೋಜಾ ಅವರು ಕನ್ನಡ ಭಾಷೆಯಲ್ಲಿ ನಡೆಸಿಕೊಟ್ಟರು. ಅಂತಿಮ ಬಲಿಪೂಜೆಯ ಅನಂತರ, ಕಾಸರಗೋಡು ಕೆ.ವಿ. ರಮೇಶ್ ಹಾಗೂ ತಂಡದವರಿಂದ “ಕ್ರಿಸ್ತ ಕಾರುಣ್ಯ ಎಂಬ ಯಕ್ಷಗಾನ ಬೊಂಬೆಯಾಟ ಪ್ರದರ್ಶನಗೊಂಡಿತು.
ಚಿತ್ರಗಳು: ಶಿಲ್ಪಾ ಸ್ಟುಡಿಯೋ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.