ಮತ್ತೆ ತೆರೆದುಕೊಳ್ಳಲಿದೆ ಸೈಂಟ್ ಮೇರಿಸ್; ಸೆ. 26ರಿಂದ ಪ್ರಾರಂಭ; ಸುರಕ್ಷೆಗೆ ಮಹತ್ವ
ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯಿಂದ ಸ್ವಚ್ಛತಾ ಕಾರ್ಯ
Team Udayavani, Sep 24, 2022, 7:20 AM IST
ಮಲ್ಪೆ: ಕಳೆದ ನಾಲ್ಕು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮಲ್ಪೆ ಸೈಂಟ್ ಮೇರಿಸ್ ದ್ವೀಪ ಸೆ. 26ರಿಂದ ಪ್ರವಾಸಿಗರಿಗೆ ಮತ್ತೆ ತೆರೆದುಕೊಳ್ಳಲಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಬುಧವಾರದಿಂದ ಇಲ್ಲಿ ಸ್ವತ್ಛತಾ ಕಾರ್ಯ ನಡೆಯುತ್ತಿದೆ.
ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ. 15ರ ವರಗೆ ದ್ವೀಪಕ್ಕೆ ಜನ ಪ್ರವೇಶ ನಿರ್ಬಂಧ ಹೇರುತ್ತದೆ. ಈ ಸಮಯದಲ್ಲಿ ಪ್ರವಾಸಿ ಬೋಟುಯಾನಗಳು ಸ್ಥಗಿತಗೊಳ್ಳುತ್ತವೆ. ಮಲ್ಪೆ ಬೀಚ್‌ನಲ್ಲೂ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಇರುತ್ತದೆ. ಇದೀಗ ಸೆ. 26ರಿಂದ ಮತ್ತೆ ತೆರೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ವಚ್ಛತಾ ಕಾರ್ಯ
ಮಳೆಗಾಲದಲ್ಲಿ ನಾಲ್ಕು ತಿಂಗಳಿಂದ ಇಲ್ಲಿ ಜನಸಂಚಾರ ಇರದೇ ಬೆಳೆದು ನಿಂತ ಹುಲ್ಲನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತದೆ. ಐಲ್ಯಾಂಡ್ ಸುತ್ತ ಸಮುದ್ರತೀರದಲ್ಲಿ ಕಸಕಡ್ಡಿ, ಪ್ಲಾಸಿಕ್ ತ್ಯಾಜ್ಯಗಳು ದಡದಲ್ಲಿ ಸಂಗ್ರಹವಾಗಿದ್ದು ಇದೀಗ ಸ್ವಚ್ಛಗೊಳಿಸಲಾಗುತ್ತಿದೆ. ಐಲ್ಯಾಂಡ್‌ನ ಪ್ರವೇಶ ದ್ವಾರ, ವೈಟಿಂಗ್ ಲಾಂಚ್, ಕ್ಯಾಂಟೀನ್, ಶೌಚಾಲಯದ ದುರಸ್ತಿ ಪಡಿಸಲಾಗುತ್ತದೆ. ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯಿಂದ ಎಲ್ಲ ಕೆಲಸಗಳು ನಡೆಯುತ್ತಿವೆ.
ಐಲ್ಯಾಂಡ್‌ನ್ನು ಸ್ವಚ್ಛಗೊಳಿಸಲು ಈಗಾಗಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ಪ್ರವಾಸಿಗರ ಸುರಕ್ಷೆೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಸಮುದ್ರದ ವಾತಾವರಣ ಹಾಗೂ ಐಲ್ಯಾಂಡಿನ ಸ್ಥಿತಿಗತಿಯನ್ನು ನೋಡಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳಲಾಗುವುದು.
-ಎಂ. ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.