ಕಟ್ಟಿಕೆರೆ : ಹೆದ್ದಾರಿ ಪಾರ್ಶ್ವದಲ್ಲಿ ಬಾಯ್ದೆರೆದ ಗುಂಡಿಗೆ ಮೋಕ್ಷ
Team Udayavani, Jul 26, 2018, 6:45 AM IST
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಕಟ್ಟಿಕೆರೆ ಬಳಿ ಹೆದ್ದಾರಿಯ ಪೂರ್ವ ಪಾರ್ಶ್ವದಲ್ಲಿ ಮಳೆ ನೀರು ಮತ್ತು ವಾಹನ ಸಂಚಾರದ ಒತ್ತಡದ ಕಾರಣದಿಂದ ದೊಡ್ಡ ಗಾತ್ರದ ಗುಂಡಿಯೊಂದು ಬಾಯ್ದೆರೆದುಕೊಂಡಿದ್ದು, ಬುಧವಾರ ಗುಂಡಿಗೆ ಮೋಕ್ಷ ಕಾಣಿಸಲಾಗಿದೆ.
ಈ ಭಾಗದಲ್ಲಿ ಶಾಲೆ, ಹೂವಿನ ಮಾರಾಟದ ಕಟ್ಟೆಯು ಕಾರ್ಯಾಚರಿಸುತ್ತಿದೆ. ಹೆಚ್ಚಿನ ಜನ ಸಂಚಾರ ಈ ಭಾಗದಲ್ಲಿ ನಿತ್ಯ ಸಂಚಾರಿಗಳಾಗಿದ್ದು, ಶಾಲಾ ಮಕ್ಕಳು ಇದೇ ದಾರಿಯಾಗಿ ಸಾಗುತ್ತಿದ್ದಾರೆ. ಇದರೊಂದಿಗೆ ಹೆದ್ದಾರಿ ವಾಹನಗಳ ಸಂಚಾರ ಭರಾಟೆಯು ಇಲ್ಲಿ ಸ್ವಲ್ಪ ಹೆಚ್ಚಾಗಿದ್ದು, ಹೆದ್ದಾರಿಯಲ್ಲೂ ಈ ಭಾಗದಲ್ಲಿ ಹೊಂಡ ನಿರ್ಮಾಣಗೊಂಡಿದೆ. ಹಾಗಾಗಿ ಈ ಸ್ಥಳ ಅತ್ಯಂತ ಅಪಾಯಕಾರಿಯಾಗಿ ಕಂಡು ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ಈ ಗುಂಡಿಯು ಮೃತ್ಯು ಕೂಪವಾಗಿ ಪರಿವರ್ತನೆಯಾಗ ಬಲ್ಲುದು ಎಂದು ನಿತ್ಯ ಸಂಚಾರಿಗಳು ಭಯವನ್ನು ವ್ಯಕ್ತ ಪಡಿಸುತ್ತಿದ್ದಾರೆ ಎಂದು ಉದಯವಾಣಿಗೆ ಜು.12ರಂದು ವರದಿ ಪ್ರಕಟಿಸಿತ್ತು.
ತಡವಾಗಿಯಾದರೂ ಎಚ್ಚೆತ್ತ ಸಂಬಂಧ ಪಟ್ಟ ಇಲಾಖೆಯು ಕೊನೆಗೂ ಪಕ್ಕದ ತೋಡಿನಿಂದ ಮಣ್ಣನ್ನು ಜೆಸಿಬಿ ಮೂಲಕ ತೆಗೆದು ಈ ಹೊಂಡವನ್ನು ಮುಚ್ಚುವ ಮೂಲಕ ಸ್ಥಳೀಯರ ಆತಂಕಕ್ಕೆ ಮುಕ್ತಿ ನೀಡಿದ್ದಾರೆ.
ಹೆದ್ದಾರಿ ಪಕ್ಕದಲ್ಲಿ ಮಣ್ಣು ಕುಸಿದು ಈ ಗುಂಡಿ ಬಾಯ್ದೆರೆದು ನಿಂತಿದ್ದು, ಇನ್ನು ಮುಂದುವರೆಯ ಬಹುದಾದ ಮಳೆಯ ತೀವ್ರತೆಗೆ ಹೆದ್ದಾರಿಯೂ ಇದರೊಂದಿಗೆ ಕುಸಿಯುವ ಸಾಧ್ಯತೆಯು ಹೆಚ್ಚಾಗಿತ್ತು. ಜೋರಾಗಿ ಮಳೆ ಬಂದಾಗ ಇಲ್ಲಿ ನಿಲ್ಲುವ ನೀರಿನಿಂದಾಗಿ ಈ ಗುಂಡಿಯು ಗೋಚರಕ್ಕೆ ಬರದೆ ವಾಹನ ಸವಾರರು ಅಥವಾ ಪಾದಾಚಾರಿಗಳು ಅನಾಹುತವನ್ನೆದುರಿಸಬೇಕಾದ ದುಸ್ಥಿತಿ ಹೊಂದಿತ್ತು ಎಂದು ನಾಗರೀಕರು ಕಳವಳ ವ್ಯಕ್ತ ಪಡಿಸಿದ್ದು, ಇದೀಗ ನಿರಾಳರಾಗುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.